ರೇಲ್ವೆ ವಿವಿಧ ಯೋಜನೆಗಳಿಗೆ ಸಂಸದ ಕರಡಿ ಸಂಗಣ್ಣ ಮನವಿ

sdr

ಕೊಪ್ಪಳ, ಡಿ.೦೬: ಕೊಪ್ಪಳ ಲೋಕಸಭಾ ಕ್ಷೇತ್ರದ ರೇಲ್ವೆ ಕಾಮಗಾರಿಗಳನ್ನು ಪ್ರಸಕ್ತ ಸಾಲಿನ ಅಂತ್ಯಕ್ಕೆ ಮುಕ್ತಾಯಗೊಳಿಸಬೇಕು ಎಂದು ಒತ್ತಾಯಿಸಿ ಸಂಸದ ಕರಡಿ ಸಂಗಣ್ಣ ದಕ್ಷಿಣ-ಪಶ್ಚಿಮ ರೇಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಎ.ಕೆ ಸಿಂಗ್‌ರವರಿಗೆ ಗುರುವಾರದಂದು ಮನವಿ ಪತ್ರ ಸಲ್ಲಿಸಿದರು.
ಸಿಂಗ್‌ರವರು ಹುಬ್ಬಳ್ಳಿಯಿಂದ ಗಂಗಾವತಿಯವರೆಗೆ ನೂತನ ರೇಲ್ವೆ ಮಾರ್ಗದ ವಿಕ್ಷೇಣೆಗೆ ಆಗಮಿಸಿದ ಸಂದರ್ಭದಲ್ಲಿ ಕೊಪ್ಪಳ ರೇಲ್ವೆ ನಿಲ್ದಾಣದಲ್ಲಿ ಸಂಸದ ಕರಡಿ ಸಂಗಣ್ಣ ಮನವಿ ಸಲ್ಲಿಸಿ ಮಾತನಾಡಿದರು.

ಈಗಾಗಲೇ ಹುಬ್ಬಳ್ಳಿಯಿಂದ ಚಿಕ್ಕಬೆಣಕಲ್‌ವರೆಗೆ ಸಂಚರಿಸುತ್ತಿರುವ ಪ್ಯಾಸೆಂಜರ್ ರೈಲನ್ನು ಗಂಗಾವತಿವರೆಗೆ ಈ ತಿಂಗಳ ಕೊನೆಯಲ್ಲಿ ವಿಸ್ತರಿಸಿ, ಬಾಕಿ ಕಾಮಗಾರಿ ತ್ವರಿತಗೊಳಿಸುವುದು. ಹರಿಪ್ರೀಯ ಮತ್ತು ಕೊಲ್ಲಾಪೂರದಿಂದ ಹೈದರಾಬಾದಗೆ ಹೊರಡುವ ರೈಲುಗಳನ್ನು ಮುನಿರಾಬಾದ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡುವುದು. ಹುಬ್ಬಳ್ಳಿಯಿಂದ ತಿರುಪತಿಗೆ ಹೊರಡುವ ಪಾಸ್ಟ್ ಪ್ಯಾಸೆಂಜರ್ ರೈಲನ್ನು ಹಿಟ್ನಾಳ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡುವುದು. ಕೊಪ್ಪಳ ಜಿಲ್ಲಾ ಕೇಂದ್ರದ ರೇಲ್ವೆ ನಿಲ್ದಾಣವನ್ನು ಉನ್ನತ ದರ್ಜೇಗೆ ಅನುಮೋದಿಸಿ ಹೈಟೆಕ್ ಶೌಚಾಲಯ, ನಿರಂತರ ವಿದ್ಯುತ್ ಪೂರೈಕೆ, ಶುದ್ಧ ಕುಡಿಯುವ ನೀರು, ಡಿಜಿಟಲ್ ಕೋಚ್ ಡೀಸ್ಪ್ಲೇ ವ್ಯವಸ್ಥೆ ಮತ್ತು ಹವಾನಿಯಂತ್ರಿತ ಕೊಠಡಿಯನ್ನು ೨ನೇ ಪ್ಲಾಟ್ ಪಾರ್ಮವರೆಗೆ ವಿಸ್ತರಿಸಬೇಕು. ವಿಶೇಷ ಚೇತನರಿಗೆ ಮತ್ತು ವಯೋವೃದ್ಧರ ಅನೂಕೂಲಕ್ಕಾಗಿ ಲಿಪ್ಟ್ ವ್ಯವಸ್ಥೆಯನ್ನು ನಿಲ್ದಾಣದಲ್ಲಿ ನಿರ್ಮಿಸಬೇಕು. ಆರ್.ಓ.ಬಿ ಸಂಖ್ಯೆ: ೬೨ ಭಾಗ್ಯನಗರ ಮೇಲಸೇತುವೆ ಕಾಮಗಾರಿಯನ್ನು ತ್ವರಿತಗೊಳಿಸಿ ಡಿಸೆಂಬರ್ ಅಂತ್ಯಕ್ಕೆ ಜನಬಳಕೆಗೆ ನೀಡಬೇಕು. ಆರ್.ಓ.ಬಿ ಸಂಖ್ಯೆ: ೬೬, ೭೨, ೭೯ರ ಟೆಂಡರ್ ಪ್ರಕ್ರೀಯೆಯನ್ನು ಮಾಸಾಂತ್ಯಕ್ಕೆ ನಡೆಸುವುದು. ಕೊಪ್ಪಳ-ಗಿಣಗೇರಾ ಆರ್.ಓ.ಬಿ ಸಂಖ್ಯೆ: ೬೨, ೬೬ ರಲ್ಲಿ ನೂತನವಾಗಿ ಸುರಂಗಮಾರ್ಗ ಅಥವಾ ಉಪಮಾರ್ಗವನ್ನು ನಿರ್ಮಾಣ ಮಾಡಲು ಅನುಮೋದಿಸಬೇಕು. ಮುನಿರಾಬಾದ-ಮೆಹೆಬೂಬನಗರ ಕಾಮಗಾರಿಯ ಟೆಂಡರ್ ಪ್ರಕ್ರೀಯೆಯಲ್ಲಿ ಕಾರಟಗಿ, ಸಿಂಧನೂರ ರೇಲ್ವೆ ಮಾರ್ಗವನ್ನು ಈ ಸಾಲಿನಲ್ಲೆಯೇ ಪೂರ್ಣಗೊಳಿಸಬೇಕು.
ಗದಗ-ವಾಡಿ ರೇಲ್ವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸುವುದು. ಆಲಮಟ್ಟಿ-ಚಿತ್ರದುರ್ಗ, ಯಲಬುರ್ಗಾ-ಬದಾಮಿ, ಬಳ್ಳಾರಿ-ಲಿಂಗಸೂರು, ಗದಗ-ಕೃಷ್ಣಾವರ ರೇಲ್ವೆ ಕಾಮಗಾರಿಯ ಸರ್ವೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕಾಮಗಾರಿಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು. ಈ ಮನವಿಗೆ ರೇಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಎ.ಕೆ ಸಿಂಗ್‌ರವರು ಸಕಾರಾತ್ಮಕವಾಗಿ ಸ್ಪಂಧಿಸಿ ನಿಲ್ದಾಣ ನಿರ್ವಹಣೆ ಮತ್ತು ಶುಚಿತ್ವದ ಬಗ್ಗೆ ನಿಲ್ದಾಣ ವ್ಯವಸ್ಥಾಪಕರಿಗೆ ಬಿಸಿಮುಟ್ಟಿಸಿ ಸೂಚಿಸಿದರು. ಮತ್ತು ಬೇಡಿಕೆ ಈಡೆರೀಕೆಗೆ ಶ್ರಮಿಸುವುದಾಗಿ ಸಂಸದರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ-ಪಶ್ಚಿಮ ರೇಲ್ವೆಯ ತಾಂತ್ರಿಕ ಸಿಬ್ಬಂದಿಗಳು, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ರೇಲ್ವೆ ಭದ್ರತಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Please follow and like us:
error