ರೂ.1 ಕೋಟಿಯ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ಕೊಪ್ಪಳ:03,ಎಸ್.ಡಿ.ಪಿ. (ಎಸ್.ಸಿ) ಯೋಜನೆ ಅಡಿಯಲ್ಲಿ ಶಿವಪೂರ-ಮಹ್ಮದನಗರ ಹಾಗೂ ತಿಗರಿ ಗ್ರಾಮದಲ್ಲಿ ಅಂದಾಜು ಮೊತ್ತ ರೂ.1 ಕೋಟಿಯ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೇರವೆರಿಸಿ ಬಳಿಕ ಮಾತನಾಡಿದ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಗ್ರಾಮವಿಕಾಸನ ಯೋಜನೆ ಅಡಿಯಲ್ಲಿ ಕ್ಷೇತ್ರದ ಪ್ರತಿಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸುವುದೇ ನನ್ನ ಮೊದಲ ಆಧ್ಯತೆ. ಬರುವ ಬೇಸಿಗೆಯಲ್ಲಿ ಯಾವುದೇ ಗ್ರಾಮಕ್ಕೆ ಕುಡಿಯುವ ನೀರಿನ ತೊಂದರೆಯಾಗದಂತೆ ಈಗಾಗಲೇ ಬರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಶೀಘ್ರವೇ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ವಿಶೇಷ ಅನುಧಾನ ಸರ್ಕಾರದಿಂದ ಮಂಜೂರು ಮಾಡಿಸುವೇನು. ಪ್ರತಿ ಗ್ರಾಮಕ್ಕೂ ಹಂತ ಹಂತವಾಗಿ ಅವಶ್ಯಕತೆ ಇರುವ ಕಾಮಗಾರಿಗಳನ್ನು ಶೀಘ್ರವೇ ಸಂಪೂರ್ಣಗೊಳಿಸಿ ಜನರಿಗೆ ನೀಡಿದ ಆಶ್ವಾಸನೆಗಳನ್ನು ಇಡೇರಿಸಲು ಪ್ರಾಮಾಣಿಕ ಪ್ರಯತ್ನಮಾಡುವೇನು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಡಿ, ಎ.ಪಿ.ಎಮ್.ಸಿ ಸದಸ್ಯರಾದ ವಿಶ್ವನಾಥ ರಾಜು, ಮುಖಂಡರುಗಳಾದ ವೆಂಕಟೇಶ ಕಂಪಸಾಗರ, ರೂಪ್ಲಾನಾಯಕ್, ವೀರಭದ್ರಯ್ಯಸ್ವಾಮಿ ಅಗಳಕೇರಾ, ಶಿವಬಾಬು, ಚನ್ನಕೃಷ್ಣ, ವೆಂಕಟೇಶ ಅಗಳಕೇರಾ, ಅಂದಿಗಾಳೇಪ್ಪ, ಹನುಮನಗೌಡ ಪೋಲಿಸ್ ಪಾಟೀಲ, ಜಯಪ್ಪ ತಿಗರಿ, ನಾಗರಾಜ ತಿಗರಿ, ಅಭಿಯಂತರರಾದ ಓಮಕಾರ ನಾಯಕ್, ಲಕ್ಷ್ಮಣ, ಗುತ್ತಿಗೆದಾರರಾದ ರಾಮಣ್ಣ ಕಲ್ಲಣ್ಣನವರು, ಹರೀಷ ರೆಡ್ಡಿ, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

Please follow and like us:
error