You are here
Home > Koppal News > ರೂ.೮೫ ಲಕ್ಷದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ

ರೂ.೮೫ ಲಕ್ಷದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ

ಕೊಪ್ಪಳ:೧೪, ಹಿರೇಸಿಂದೋಗಿ ಗ್ರಾಮದಲ್ಲಿ ಶಾಸಕರ ಅನುದಾನದ ಅಡಿಯಲ್ಲಿ ಅಂದಾಜು ಮೊತ್ತ ರೂ.೮೫ ಲಕ್ಷದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ಕಾಮಗಾರಿಗೆ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಭೂಮಿ ಪೂಜೆ ನೆರವೇರಿಸಿ ಬಳಿಕ ಮತನಾಡಿದ ಅವರು ಉತ್ತಮ ಆರೋಗ್ಯ ಪಡೆಯಲು ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಅಕ್ಕಪಕ್ಕ ಇರುವ ಪರಿಸರವನ್ನು ಸ್ವಚ್ಛತೆಯಿಂದ ಇಡಬೇಕು. ಸರಕಾರವು ಜನರಿಗೆ ಆರೋಗ್ಯ ಕಲ್ಪಿಸಲು ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಕಾಳಜಿ ಪ್ರತಿಯೊಬ್ಬ ನಾಗರಿಕನಿಗೆ ಇರಬೇಕು. ಗ್ರಾಮಗಳನ್ನು ಸ್ವಚ್ಛವಾಗಿ ಹಾಗೂ ಸುಂಧರವಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬರ ಅದಮ್ಯ ಕರ್ತವ್ಯವಾಗಿದೆ. ಮಾರಕ ರೋಗ ರುಜಿನಗಳಿಂದ ಆರೋಗ್ಯ ಕಾಪಾಡಲು ಸ್ವಚ್ಛ ಪರಿಸರ ಅತ್ಯವಶ್ಯಕ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಬರುವ ರೋಗಿಗಳಿಗೆ ವೈದ್ಯರು ಸರಿಯಾದ ಸ್ಪಂದನೆ ನೀಡಬೇಕು. ಜನರಿಗೆ ಆರೋಗ್ಯದ ಹಿತದೃಷ್ಟಿಯಿಂದ ಸರಿಯಾದ ಮಾಹಿತಿ ನೀಡಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಎ.ಪಿ.ಎಂ.ಸಿ. ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ, ಮಾಜಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ, ತಾ.ಪಂ.ಸದಸ್ಯ ನಿಂಗಪ್ಪ ಯತ್ನಟ್ಟಿ, ದೇವಣ್ಣ ಲೇಬಗೇರಾ, ಮುಖಂಡರುಗಳಾದ ಕೇಶವರಡ್ಡಿ, ಲಕ್ಷ್ಮಣ ಡೊಳ್ಳಿನ, ರೇವಯ್ಯ ಮಠದ, ಸಿದ್ದರಡ್ಡಿ, ಭೀಮರಡ್ಡಿ ಮಾಲಿಪಾಟೀಲ್, ಪ್ರಭು ಮೈನಳ್ಳಿ, ರಾಮಣ್ಣ ಕುರುಬರ, ತಾಲೂಕಾ ವೈದ್ಯಾಧಿಕಾರಿಗಳು ಹಾಗೂ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Top