fbpx

ರೂ.೭ ಕೋಟಿ ೯೦ ಲಕ್ಷದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ:೨೪, ಅಳವಂಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕವಲೂರ-ಹಂದ್ರಾಳ ರಸ್ತೆ, ಅಳವಂಡಿ-ಕಂಪ್ಲಿ-ಭೈರಾಪೂರ ಹಾಗೂ ಅಳವಂಡಿ-ನೆಲೋಗಿಪುರ ಗ್ರಾಮಗಳಲ್ಲಿ ಹೆಚ್.ಕೆ.ಆರ್.ಡಿ.ಬಿ./ ಪಿ.ಎಮ್.ಜಿ.ಎಸ್.ವೈ. ಯೋಜನೆಯಡಿಯಲ್ಲಿ ರೂ.೭ ಕೋಟಿಯ ರಸ್ತೆ ಕಾಮಗಾರಿ ಮತ್ತು ಆರ್.ಎಮ್.ಎಸ್. ಯೋಜನೆಯಡಿಯಲ್ಲಿ ಅಳವಂಡಿ ಮತ್ತು ಹಟ್ಟಿ ಗ್ರಾಮದಲ್ಲಿ ರೂ.೯೦ ಲಕ್ಷದ ಶಾಲಾ ಕೊಠಡಿ ಉದ್ಘಾಟಿಸಿ ಬಳಿಕ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಪ್ರಧಾನಿ ಮೋದಿಯವರು ಕೇವಲ ತಮ್ಮ ಮನ್-ಕಿ-ಬಾತ್‌ನಲ್ಲಿ ಬೇಟಿ ಪಡಾವ್ ಅಂತ ಹೇಳಿದರೆ ಹೊರತು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಯಾವುದೇ ಯೋಜನೆ ಅನುಷ್ಠಾನ ಮಾಡಲಿಲ್ಲ. ಆದರೆ ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಹೆಣ್ಣು ಮಕ್ಕಳಿಗೆ ೧ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೂ ಉಚಿತ ಶಿಕ್ಷಣ ನೀಡಿದ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಅನ್ನ ಭಾಗ್ಯ ಯೋಜನೆ ಜೊತೆಗೆ ರಾಜ್ಯದ ಜನತೆಗೆ ಇಂದಿರಾ ಕ್ಯಾಂಟಿನ ಮುಖಾಂತರ ಹಸಿವು ಮುಕ್ತ ಕರ್ನಾಟಕ ಮಾಡಿದ ಕಾಂಗ್ರೆಸ್ ಸರ್ಕಾರವು, ಎಲ್ಲಾ ವರ್ಗದ ಜನರ ಹಿತ ಕಾಪಾಡಿ ಜನರ ಆಶೋತ್ತರಗಳನ್ನು ಈಡೇರಿಸಿದೆ. ರಾಜ್ಯದ ಎಲ್ಲಾ ಮಕ್ಕಳಿಗೆ ಉಚಿತ ಬಸ್ ಪಾಸ್, ವಿದ್ಯಾಸಿರಿ ಯೋಜನೆಗಳನ್ನು ನೀಡಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗಿದೆ. ಕೊಪ್ಪಳ ಕ್ಷೇತ್ರಕ್ಕೆ ಗ್ರಾಮ ವಿಕಾಸನ ಯೋಜನೆಯಡಿಯಲ್ಲಿ ಹೆಚ್ಚು ಅನುದಾನ ನೀಡಿ ಕ್ಷೇತ್ರದ ಸರ್ವಾಂಗಿಣ ಅಭಿವೃದ್ಧಿಗೆ ಕೈಗೊಳ್ಳಲು ಸಹಕಾರಿಯಾಗಿದೆ. ಕ್ಷೇತ್ರದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳು ಈಗಾಗಲೆ ಪ್ರಾರಂಭಗೊಂಡಿದ್ದು ಬರುವ ದಿನಗಳಲ್ಲಿ ಸುಮಾರು ೩೦ ಸಾವಿರ ಕೃಷಿ ಭೂಮಿಯು ನೀರಾವರಿಗೆ ಒಳಪಡಲಿದೆ. ಬರುವ ವಿಧಾನಸಭಾ ಚುನಾವಣೆಯ ಎಲ್ಲಾ ಮಾಧ್ಯಮ ಸಮೀಕ್ಷೆಗಳು ಸ್ಪಷ್ಟವಾಗಿ ಕಾಂಗ್ರೆಸ್ ಪಕ್ಷದ ಪರ ಇದ್ದು ರಾಜ್ಯ ಹಾಗೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸುವದು ಶತಃ ಸಿದ್ದ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರತ್ನಮ್ಮ ಭರಮಪ್ಪ ನಗರ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಗ್ರಾಮ ಪಂಚಾಯತಿ ಅಧ್ಯಕ್ಷ ಯಲ್ಲಮ್ಮ ಜಂತ್ಲಿ, ಎ.ಪಿ.ಎಂ.ಸಿ. ಅಧ್ಯಕ್ಷ ಚೌಡಪ್ಪ ಜಂತ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಕಿಯೋನಿಕ್ಷ ರಾಜ್ಯ ನಿರ್ದೇಶಕ ರಾಮಣ್ಣ ಕಲ್ಲಣ್ಣನವರ, ತಾ.ಪಂ.ಸದಸ್ಯ ಸಿದ್ಲಿಂಗಸ್ವಾಮಿ ಇನಾಮದಾರ, ಮುಖಂಡರುಗಳಾದ ಭರಮಪ್ಪ ನಗರ, ಬಸವರಡ್ಡೆಪ್ಪ ಹಳ್ಳಿಕೇರಿ, ಗಾಳಿ ಹನುಮಂತಪ್ಪ, ತೋಟಪ್ಪ ಸಿಂಟ್ರ, ಶಿವಣ್ಣ ಹಂದ್ರಾಳ, ಸುರೇಶ ದಾಸರಡ್ಡಿ, ಗುರುಬಸವರಾಜ, ದೇವಪ್ಪ ಕವಲೂರ, ನಜೀರ್ ಅಳವಂಡಿ, ಅಡಿವೆಪ್ಪ ರಾಠಿ, ಭೀಮಶೆಪ್ಪ ಬೋಚನಹಳ್ಳಿ, ಸಿದ್ದಪ್ಪ ಗಿಣಗೇರಿ, ಅನ್ವರ ಗಡಾದ, ದವಲತಸಾಬ ದಫೇದಾರ, ಕರಡಿ ರಂಗಪ್ಪ, ಯಲ್ಲಪ್ಪ ನೆಲೋಗಿಪುರ, ಪರಶುರಾಮ ಭೈರಾಪೂರ, ಪ್ರಾಣೇಶ ಹಲವಾಗಲಿ, ಪಾಂಡು ನಗರ, ಇಸ್ಮಾಯಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ಸುದರ್ಶನ್, ವಿವಿಧ ಇಲಾಖೆಯ ಅಭಿಯಂತರರು ಹಾಗೂ ಗುತ್ತಿಗೆದಾರರು, ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error
error: Content is protected !!