Breaking News
Home / Koppal News / ರೂ. ೩೫ ಲಕ್ಷದ ಹೈಟೆಕ್ ಶೌಚಾಲಯಕ್ಕೆ ಶಾಸಕರಿಂದ ಭೂಮಿ ಪೂಜೆ
ರೂ. ೩೫ ಲಕ್ಷದ ಹೈಟೆಕ್ ಶೌಚಾಲಯಕ್ಕೆ ಶಾಸಕರಿಂದ ಭೂಮಿ ಪೂಜೆ

ರೂ. ೩೫ ಲಕ್ಷದ ಹೈಟೆಕ್ ಶೌಚಾಲಯಕ್ಕೆ ಶಾಸಕರಿಂದ ಭೂಮಿ ಪೂಜೆ

ಕೊಪ್ಪಳ: ೧೬ ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸುಲಭಿ ಅಂತರಾಷ್ಟ್ರೀಯ ಸಾಮಾಜಿಕ ಸೇವಾ ಸಂಸ್ಥೆಯ ಸಂಯೋಗದಲ್ಲಿ ರೂ. ೩೫ ಲಕ್ಷದ ಹೈಟೆಕ್ ಶೌಚಾಲಯಕ್ಕೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ಸಾರ್ವಜನಿಕರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಇವುಗಳ ಸ್ವಚ್ಛತೆ ಕಡೆಗೆ ಹೆಚ್ಚು ಗಮನ ಕೊಡಬೇಕು ನಿಮಗಾಗಿ ನಿರ್ಮಿಸಿರುವ ಇಂತಹ ಹೈಟೆಕ್ ಶೌಚಾಲಯ ಮತ್ತು ಸ್ನಾನ ಗೃಹ ಸರಿಯಾದ ಸದ್ಭಳಕೆ ಮಾಡಿ ನಿಮ್ಮ ಸ್ವತಃ ಮನೆಯ ಉಪಯೋಗದಂತೆ ತಾವುಗಳು ನಿರ್ವಹಣೆ ವಹಿಸಿದಾಗಿ ಸರ್ಕಾರ ನೀಡಿದ ಅನುದಾನಕ್ಕೆ ಬೆಲೆ ಇರುತ್ತದೆ. ಜಿಲ್ಲಾ ಆಸ್ಪತ್ರೆಗೆ ಅವಶ್ಯಕತೆ ಇರುವ ಕಂಪೌಂಡ ಕಾಮಗಾರಿ ಹಾಗೂ ಜನರಿಗೆ ಕುಳಿತು ಕೊಳ್ಳುವುದಕ್ಕೆ ಪಾರ್ಕ ವ್ಯವಸ್ಥೆ ನಿರ್ಮಾಣ ಶಿಘ್ರವೇ ಕೈಗೊಳ್ಳಲಾಗುವುದು, ಈಗಾಗಲೇ ಗವಿ ಮಠದ ಕೆರೆಯಿಂದ ನೀರಿನ ಸರಬರಾಜು ವ್ಯವಸ್ಥೆ ಮಾಡಿ ಜಿಲ್ಲಾ ಆಸ್ಪತ್ರೆಯ ನೀರಿನ ಭವಣೆ ನಿವಾರಣೆಯಾಗಿದೆ, ಇದರಲ್ಲಿ ೪ ಬಿಸಿನೀರಿನ ಸ್ನಾನಗೃಹ, ೧೧ ಶೌಚಾಲಯ ಕೊಠಡಿ ನಿರ್ಮಾಣಗೊಳ್ಳಲಿವೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಮಹೇಂದ್ರ ಚೊಪ್ರಾ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಶ ಬೂಮರಡ್ಡಿ, ನಗರಸಭಾ ಸದಸ್ಯ ಮುತ್ತುರಾಜ ಕುಷ್ಟಗಿ, ಆರೋಗ್ಯ ರಕ್ಷಣಾ ಸಮಿತಿಯ ಸದಸ್ಯರಾದ ಮಾನ್ವಿ ಪಾಷಾ, ಇಂದಿರಾ ಭಾವಿಕಟ್ಟಿ, ಮಹಾಂತೇಶ ಚಾಕ್ರಿ, ಮುಖಂಡರುಗಳಾದ ಕಾಟನ ಪಾಷಾ, ಶಿವಾನಂದ ಹೊದ್ಲುರ, ಉಮಾ ಜನಾಂದ್ರಿ, ಕೀಮ್ಸ್ ನಿರ್ದೇಶಕ ಶಂಕರ ಮಲ್ಯಾಪುರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|| ದಾನರಡ್ಡಿ, ನಗರಸಭೆ ಆಯುಕ್ತರು ಹಾಗೂ ವೈದ್ಯರು, ಗುತ್ತಿಗೆದಾರರಾದ ಸುಜಿತ ಕುಮಾರ, ವಕ್ತಾರ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.

About admin

Comments are closed.

Scroll To Top