ರೂ.೨ ಕೋಟಿ ೪೮ ಲಕ್ಷದ ನೂತನ ಸೇತುವೆ ಲೋಕಾರ್ಪಣೆ


ಕೊಪ್ಪಳ:೨೪,ತುಂಗಭದ್ರಾ ಏಡದಂಡೆ ಕಾಲೊವೆಗೆ ಅಗಳಕೇರಾ ಹಾಗೂ ಹಿಟ್ನಾಳ ಗ್ರಾಮದಲ್ಲಿ ರೂ.೨ ಕೋಟಿ ೪೮ ಲಕ್ಷದ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸೇತುವೆ ಲೋಕಾರ್ಪಣೆ ಹಾಗೂ ಹುಲಿಗಿ ಗ್ರಾಮದಲ್ಲಿ ಎಸ್.ಸಿ.ಪಿ ಯೋಜನೆ ಅಡಿಯಲ್ಲಿ ರೂ.೫೦ ಲಕ್ಷದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು, ಕ್ಷೇತ್ರದ ಪ್ರತಿ ಗ್ರಾಮದ ಸರ್ವೋತೋಮುಕ ಅಭಿವೃದ್ಧಿಗೆ ಅವಶ್ಯಕವಿರುವ ಮೂಲಭೂತ ಸೌಕರ್ಯಗಳನ್ನು ಈ ೬ ವರ್ಷದಲ್ಲಿ ಹಂತ ಹಂತವಾಗಿ ಕಲ್ಪಸಲಾಗಿದ್ದು, ಪ್ರತಿ ಗ್ರಾಮಕ್ಕೂ ರಸ್ತೆ, ಶಾಲಾ ಕೊಠಡಿ, ಸಮುದಾಯ ಭವನಗಳು, ಅಂಗನವಾಡಿ ಕಟ್ಟಡಗಳು, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಕ್ಷೇತ್ರದ ಪ್ರತಿ ಗ್ರಾಮಕ್ಕೆ ಅವಶ್ಯಕವಾದ ಸೌಲಭ್ಯಗಳನ್ನು ಕಲ್ಪಿಸಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ಮಾಡಿದ್ದು, ಕ್ಷೇತ್ರದ ಜನತೆ ಸರ್ಕಾರ ನೀಡುವ ಅನುದಾನವನ್ನು ಸದ್ಬಳಕೆಮಾಡಿಕೊಂಡು ಗುಣಮಟ್ಟದ ಕಾಮಗಾರಿಗಳಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಹಾಲಿ ಸದಸ್ಯ ಕೆ.ರಾಜಶೇಖರ ಹಿಟ್ನಾಳ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಹಿಟ್ನಾಳ ಗ್ರಾ.ಪಂ.ಅಧ್ಯಕ್ಷ ಧರ್ಮರಾಜ ಕಲಾಲ್, ಅಗಳಕೇರಾ ಗ್ರಾ.ಪಂ.ಅಧ್ಯಕ್ಷ ನಾಗರಾಜ ಕಿನ್ನಾಳ, ಮುಖಂಡರುಗಳಾದ ಟಿ.ಜನಾರ್ಧನ ಹುಲಿಗಿ, ಪ್ರಭುರಾಜ ಪಾಟೀಲ, ಮಂಜುನಾಥ ಗೊಂಡಬಾಳ, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ಈರಣ್ಣ ಹುಲಿಗಿ, ಬಾಬುಗೌಡ ಪಾಟೀಲ, ಅಶೋಕ ಇಳಿಗೇರಾ, ವಿಜಯಕುಮಾರ, ಅಭಿಯಂತರರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.

Please follow and like us:
error