ರೂ. ೧೮.೦೦ ಕೋಟಿಯ ಸರಣಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ


ಕೊಪ್ಪಳ: ೧೮ ಅಳವಂಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ಗುಡಗೇರಿ, ಕವಲೂರು, ಮುರ್ಲಾಪುರ, ಅಳವಂಡಿ, ಘಟ್ಟಿರೆಡ್ಡಿಹಾಳ ಹಾಗೂ ಕಂಪ್ಲಿ ಗಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಯೋಜನೆಯಡಿಯಲ್ಲಿ ಅಂದಾಜು ಮೊತ್ತ ರೂ. ೧೮.೦೦ ಕೋಟಿಯ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಬಳಿಕ ಮಾತನಾಡಿದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳರವರು ನಮ್ಮ ದೇಶದ ಕೃಷಿ ವ್ಯವಸ್ಥೆಯ ಪದ್ಧತಿಯು ಸಾಂಪ್ರದಾಯಿಕ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನದಿಂದ ಮಿಶ್ರಣಗೊಂಡಿದೆ. ಕೆಲವು ಭಾಗಗಳಲ್ಲಿ ಜಾನುವಾರಗಳ ಮುಂಖಾತರ ಉಳಮೆ ಮಾಡಿದರೆ ಇನ್ನು ಕೆಲವು ಭಾಗಗಳಲ್ಲಿ ಕೃಷಿ ಯಂತ್ರಗಳ ಬಳಕೆ ಮಾಡಲಾಗುತ್ತದೆ. ಸಮಗ್ರ ಕೃಷಿ ಪದ್ಧತಿಯಿಂದ ಮಳೆ ಆಧಾರಿತ ಪ್ರದೇಶದಲ್ಲಿ ವಾಣೀಜ್ಯ ಬೆಳೆಗಳಿಗೆ ರೈತರು ಒಲವು ತೋರಿದಾಗ ಲಾಭವು ಹೆಚ್ಚುಬರುವ ಸಂಭವವಿರುತ್ತದೆ. ನಮ್ಮ ಕ್ಷೇತ್ರದ ಬುಹು ಭಾಗವು ಮಳೆ ಅವಲಂಭಿತ ಕೃಷಿ ಭೂಮಿಯಾಗಿದ್ದು ಈಗಾಗಲೆ ತುಂಗಭದ್ರ ಹಿನ್ನೀರಿನಿಂದ ಸಿಂಗಟಾಲೂರು ಏತ ನೀರಾವರಿ ಯೋಜನೆ, ಅಳವಂಡಿ-ಬೇಟಗೇರಿ ಏತ ನೀರಾವರಿ ಯೋಜನೆ ಹಾಗೂ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ನವಲ್‌ಕಲ್-ಬಹದ್ದೂರಬಂಡಿ ಏತ ನೀರಾವರಿ ಯೋಜನೆಯ ಕಾಮಗಾರಿಯು ತ್ವರಿತ ಗತಿಯಲ್ಲಿ ಅನುಷ್ಟಾನಕ್ಕೆ ಸಿದ್ದವಾಗುತ್ತಿದ್ದು ಈಗಾಗಲೆ ಪೂಜ್ಯ ಅಭಿನವ ಶ್ರೀಗಳ ನೇತೃತ್ವದಲ್ಲಿ ಹಿರೇಹಳ್ಳಕ್ಕೆ ಬ್ರಿಜ್-ಕಂ-ಬ್ಯಾರೆಜ್ ಕಾಮಾಗಾರಿಗಳು ಆರಂಭಿಸಿದ್ದು ಬರುವ ದಿನಗಳಲ್ಲಿ ಕೊಪ್ಪಳ ಕ್ಷೇತ್ರದ ಕೃಷಿ ಭೂಮಿಯು ನೀರಾವರಿಯಾಗಿ ಮಾರ್ಪಡಲಿದೆ. ಚೆಕ್ ಡ್ಯಾಂ ನಿರ್ಮಾಣಗಳಿಂದ ಅಂರ್ತಜಲ ಹೆಚ್ಚಳವಾಗಿ ವ್ಯವಸಾಯಕ್ಕೆ ಹೆಚ್ಚು ಅನೂಕುಲವಾಗಲಿದ್ದು ರೈತರು ತಮ್ಮ ಭೂಮಿಯ ಗುಣಮಟ್ಟದ ಆಧಾರದ ಹಾಗೂ ಸಾವಯಾವ ಗೊಬ್ಬರವನ್ನು ಉಪಯೊಗ ಮಾಡಿ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಸ್.ಬಿ ನಾಗರಳ್ಳಿ, ತಾ.ಪಂ ಅಧ್ಯಕ್ಷ ಬಾಲಚಂದ್ರನ ಮಾಜಿ ಕುಡಾ ಅಧ್ಯಕ್ಷ ಜುಲ್ಲೂ ಖಾದ್ರಿ, ಕೆ.ಎಮ್.ಎಪ್ ಮಾಜಿ ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ, ಎಪಿಎಮ್‌ಸಿ ಅಧ್ಯಕ್ಷ ನಾಗರಾಜ ಚಳ್ಳೂಳ್ಳಿ, ಉಪ ಅಧ್ಯಕ್ಷ ಯಂಕಣ್ಣ ವಕ್ರನಾಳ, ತಾ.ಪಂ ಸದಸ್ಯ ಸಿದ್ದಲಿಂಗಸ್ವಾಮಿ ಇನಾಂದಾರ, ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಅಡಿವೆಪ್ಪ ರಾಟಿ, ನಗರ ಸಭಾ ಸದಸ್ಯರುಗಳಾದ ಅಮಜದ್ ಪಟೇಲ್,ಅಕ್ಬರ ಪಾಷ ಪಲ್ಟನ್, ಮುಂಖಡರುಗಳಾದ ಭರಮಪ್ಪ ನಗರ, ನವೋದಯ ವಿರುಪಣ್ಣ, ಪ್ರಸನ್ನ ಗಡಾದ, ಕೃಷ್ಣರೆಡ್ಡಿ ಗಲಬಿ, ಕೃಷ್ಣ ಇಟ್ಟಂಗಿ, ಗುರುಬಸವರಾಜ ಹಳ್ಳಿಕೇರಿ, ತೋಟಪ್ಪ ಸಿಂಟ್ರ, ಭೀಮಶೆಪ್ಪ ಬೊಚನಹಳ್ಳಿ, ಅನ್ವರ ಗಡಾದ್, ಹನುಮೇಶ ಹೊಸಳ್ಳಿ, ನಜೀರ ಅಳವಂಡಿ, ಹೊನ್ನಪ್ಪಗೌಡ್ರ, ಕರಡಿ ರಂಗಪ್ಪ, ಮಂಜುನಾಥ ಹೀರೆಮಠ, ತಾಲೂಕು ದಂಡಾಧಿಕಾರಿಗಳು, ತಾ.ಪಂ ಕಾರ್ಯನಿರ್ವಾಹಕರು, ಸಣ್ಣ ನೀರಾವರಿ ಇಲಾಖೆಯ ಅಭಿಯಂತರರು, ಕೃಷಿ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರಾದ ಹನುಮೇಶ ಕಡೆಮನಿ, ವೀರಯ್ಯ ಸ್ವಾಮಿ, ಹನುಮಂತಪ್ಪ ಅರಸನಕೇರಿ ಹಾಗೂ ವಕ್ತಾರಾದ ಕುರಗೋಡ ರವಿ ಯಾದವ ಉಪಸ್ಥಿತ್ತರಿದ್ದರು.

Please follow and like us:
error