fbpx

ರಾಹುಲ್ ಗಾಂಧಿ ಮಾತಿಗೆ ಸಿ.ವಿ. ಚಂದ್ರಶೇಖರ ಕಿಡಿ

ಪ್ರಧಾನಿ ನರೇಂದ್ರ ಮೋದಿಯವರು ಸಿದ್ರಾಮಯ್ಯನ ಆಡಳಿತ ನೋಡಿ ಕಲಿಯಬೇಕೆಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತಿಗೆ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿ.ವಿ. ಚಂದ್ರಶೇಖರ ಕಿಡಿ ಕಾರಿದ್ದಾರೆ. 
ಅಕ್ಷರಶಃ ಗುಂಡಾರಾಜ್ಯದಂತಹ ವ್ಯವಸ್ಥೆಯನ್ನು ಹುಟ್ಟು ಹಾಕಿರುವ ಸಿದ್ದರಾಮಯ್ಯನ ಸರ್ಕಾರ ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತುವ ಕೆಲಸ ಮಾಡುತ್ತಿದೆ. ಧಕ್ಷ ಅಧಿಕಾರಿಗಳ ಕೊಲೆಗಳು, ವರ್ಗಾವಣೆ, ಕೆಲ ಸಮುಧಾಯಗಳ ಓಲೈಕೆ ರಾಜಕಾರಣ, ಹಿಂದು ಯುವಕರ, ಮುಖಂಡರ ಹತ್ಯೆಗಳು, ಬಾಯಿಗೆ ಬಂದಂತೆ ಹರಟುವ ಸಚಿವ ಸಂಪುಟ ಹೀಗೆ ರಾಜ್ಯದ ಜನತೆಗೆ ಉಸಿರು ಗಟ್ಟಿಸುವ ವಾತವರಣ ಸೃಷ್ಠಿಸಿರುವ ಸಿದ್ದರಾಮಯ್ಯನನ್ನು ನೋಡಿ, ಅವರ ಆಡಳಿತವನ್ನು ನೋಡಿ ಕಲಿಯುವ ಅವಶ್ಯಕತೆ ಈ ದೇಶದ ಪ್ರಧಾನ ಮಂತ್ರಿಗಳಿಗೆ ಇಲ್ಲ.
ಅಲ್ಲದೇ ಕಾಂಗ್ರೆಸ್ ನಾಯಕರೆಲ್ಲ ಹೇಳುವ ಹಾಗೆ ನಮ್ಮ ಅಧ್ಯಕ್ಷರು ನಮ್ಮ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಅಂತಾರಲ್ಲ ಒಬ್ಬ ಪ್ರಧಾನಿ ಅಭ್ಯರ್ಥಿ ಮಾತನಾಡುವ ರೀತಿಯೇ ಇದು ? ನಿಮ್ಮ ಭಾಷಣ ಉದ್ದಕ್ಕೂ ದೇಶದ ಪ್ರಧಾನಿಯ ವಿರೋಧವಾಗಿ ಮಾತನಾಡಿದ ನೀವು ಈ ದೇಶದ ಬದಲಾವಣೆಗೆ ಏಳ್ಗೆಗೆ ನಿಮ್ಮ ವಿಚಾರ ಏನು.? ಯೋಜನೆಗಳೇನು? ಎನ್ನುವುದನ್ನ ಜನರ ಎದುರು ಹೇಳಬೇಕಿತ್ತು ಆಗಲಾದರೂ ಜನ ನಿಮ್ಮ ಭಾಷಣ ಕೇಳಿ ನಗೋದನ್ನ ನಿಲ್ಲಿಸುತ್ತಿದ್ದರು.
ಭಾರತಕ್ಕೆ ವಿಶ್ವದೆಲ್ಲಡೆ ಮನ್ನಣೆ ದೊರೆಯುವಂತೆ ಮಾಡಿದ ನಮ್ಮ ಪ್ರಧಾನಿಯವರ ಹೆಸರು ಹೇಳುವ ಯೋಗ್ಯತೆ ಕೂಡಾ ಆರು ದಶಕಗಳ ಕಾಲ ಈ ದೇಶವನ್ನಾಳಿದ ಕಾಂಗ್ರೆಸ್‌ಗಾಗಲಿ ಅಥವಾ ನಾಯಕರಿಗಾಗಲಿ ಇಲ್ಲ. ಜನರ ದುಡ್ಡಿನಲ್ಲಿ ತಮ್ಮ ಪ್ರಚಾರ ಯಾತ್ರೆ ಮಾಡಿಕೊಳ್ಳುವ ಈ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

Please follow and like us:
error
error: Content is protected !!