ರಾಹುಲ್‌ಗಾಂಧಿ ಸಮಾವೇಶ ಯಶಸ್ವಿಗೆ ಕೈಜೋಡಿಸಿ-ಸಚೀವ ರಾಯರಡ್ಡಿ ಕರೆ.

ಕೊಪ್ಪಳ: , ನಗರದ ಬಿ.ಎಸ್ ಪವಾರ್ ಹೋಟಲ್ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೇಸ್ ವತಿಯಿಂದ ಎ.ಸಿ.ಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚೀವರಾದ ರಾಯರಡ್ಡಿ ಇದೇ ದಿನ ೧೦ ಮತ್ತು ೧೧ ರಂದು ಕೊಪ್ಪಳ ಜಿಲ್ಲೆಗೆ ಆಗಮಿಸುತ್ತಿರುವ ಭಾರತ ದೇಶದ ಭವಿಷ್ಯದ ಪ್ರಧಾನಿಕಾಂಗ್ರೇಸ್ ಪಕ್ಷದ ಅಧಿನಾಯಕ ರಾಹುಲ್‌ಗಾಂಧಿಯವರು ಫೆ. ೧೦ರಂದು ಮಧ್ಯಾಹ್ನಶ್ರೀ ಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡುವರು. ನಂತರ ಜಿಲ್ಲಾ ಕಾಂಗ್ರೇಸ್ ವತಿಯಿಂದ ಜಿಲ್ಲಾ ಆಡಳಿತ ಭವನದ ಹತ್ತಿರ ಜಿಲ್ಲಾ ಕಾಂಗ್ರೇಸ್ ವತಿಯಿಂದ ನಗರಕ್ಕೆ ಸ್ವಾಗತ ಮಾಡಿಕೊಳ್ಳಲಾಗುವುದು. ನಂತರ ೪:೧೫ಕ್ಕೆ ಪೂಜ್ಯ ಗವಿಮಠಕ್ಕೆ ಭೇಟಿ ನೀಡಿ ಪೂಜ್ಯರಾದ ಅಭಿನವಶ್ರೀ ಗಳಿಂದ ಸನ್ಮಾನಿತಗೊಳ್ಳುವರು. ನಂತರ ೫ ಗಂಟೆಗೆ ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡುವರು. ಮಳೆಮಲ್ಲೇಶ್ವರ ಮಾರ್ಗವಾಗಿ ರೋಡ್‌ಶೋ ಮುಖಾಂತರ ಕುಕನೂರಿಗೆ ಪ್ರಯಾಣ ಬೆಳೆಸುವರು. ಅಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿ ಕುಕನೂರ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ, ಫೆ ೧೧ ರಂದು ಯಲಬುರ್ಗಾ,ಕುಷ್ಟಗಿ, ಕನಕಗಿರಿ, ತಾವರಗೇರಾ, ಗಂಗಾವತಿ ರೋಡ್‌ಶೋ ಮುಖಾಂತರ ಕಾರಟಗಿಯಲ್ಲಿ ಕಾರ್ಯಕರ್ತರನ್ನು ಮಾತನಾಡಿ ರೋಡ್‌ಶೋ ಮುಖಾಂತರ ರಾಯಚೂರು ಜಿಲ್ಲೆಗೆ ಪ್ರಯಾಣ ಬೆಳೆಸುವರು. ರಾಹುಲ್‌ಗಾಂಧಿಯವರ ಈ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ಕಾಂಗ್ರೇಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಪಾಲ್ಗೊಂಡು ಅತ್ಯಂತ ಶಿಸ್ತಿನಿಂದ ಪ್ರತಿಯೊಬ್ಬರು ಈ ಕಾರ್ಯಕ್ರಮದ ಯಶಸ್ವಿಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೆ. ಬಸವರಾಜ ಹಿಟ್ನಾಳ, ಕೊಪ್ಪಳ ಜಿಲ್ಲಾ ಉಸ್ತವಾರಿ ಚಂದ್ರಶೇಖರ್ ಭಟ್, ಮಾಜಿ ಸಚೀವ ಮಲ್ಲಿಕಾರ್ಜುನ್ ನಾಗಪ್ಪ, ಕೆ.ಪಿಸಿ.ಸಿ ಕಾರ್ಯದರ್ಶಿ ಹಸನ್‌ಸಾಬ್ ದೋಟಿಹಾಳ, ನಗರಸಭಾ ಅಧ್ಯಕ್ಷ ಮಹೇಂದ್ರ ಚೋಪ್ರಾ, ತಾ. ಪಂ. ಅಧ್ಯಕ್ಷ ಬಾಲಚಂದ್ರನ್, ಪ್ರಾಧಿಕಾರ ಅಧ್ಯಕ್ಷ ಜುಲ್ಲುಖಾದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುರೇಶ ಭೂಮರಡ್ಡಿ, ಕಾಟನ್ ಪಾಷಾ, ಜೋಗದ ಹನುಮಂತಪ್ಪ ನಾಯಕ, ಡಾಗಿ ರುದ್ರೇಸ್, ಬಸವರಾಜ ಉಳ್ಳಾಗಡ್ಡಿ, ಹನುಮಂತ ಗೌಡ್ರ ಚಂಡೂರು, ಶಿವಶಂಕರ ರಡ್ಡಿ, ಯಂಕಣ್ಣ ಯ್ಯಾರೇಸಿ, ಬಸವರಾಜ ಸ್ವಾಮಿ ಮಳ್ಳಿಮಠ, ಪ್ರಸನ್ನ ಗಡಾದ್, ಮುತ್ತುರಾಜ್ ಕುಷ್ಟಗಿ, ಕುರುಗೋಡ ರವಿ, ವಿಶ್ವನಾಥ ರಾಜು, ವೆಂಕಣಗೌಡ್ರು ಹೀರೆಗೌಡ್ರ, ಹಾಗೂ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.