ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ – ಜಾಗೃತ ಜಾಥಾ

ಕೊಪ್ಪಳದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕೌಮಾರಭೃತ್ಯ ವಿಭಾಗದಿಂದ ಫೆ ೯ ರಂದು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಅಂಗವಾಗಿಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಜಾಥಾವು ಶ್ರೀ ಗವಿಮಠದಿಂದ ಪ್ರಾರಂಭವಾದ ಜಾಥಾಕ್ಕೆ ಪ್ರಾಚಾರ್ಯರಾದ ಡಾ. ಬಿ.ಎಸ್.ಸವಡಿ ಚಾಲನೆ ನೀಡಿದರು. ಜಾಥಾವು ಶಾರದಾ ಚಿತ್ರಮಂದಿರದಿಂದ ಸಲಾರ್ ಜಂಗ್ ರಸ್ತೆ ಮಾರ್ಗವಾಗಿ ತಾಲೂಕು ಪಂಚಾಯತ್ ಕಾರ್ಯಲಯಕ್ಕೆ ಮುಕ್ತಾಯಗೊಂಡಿತು. ನಂತರ ಪ್ರಾಚಾರ್ಯರಾದ ಡಾ. ಬಿ.ಎಸ್.ಸವಡಿ ಮಾತನಾಡಿ ಒಂದರಿಂದ ಹತ್ತೊಂಬತ್ತು ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಜಂತು ನಿವಾರಣ ಮಾತ್ರೆಯನ್ನು ಕೊಡಬೇಕು ಇದರಿಂದ ಜಂತುಹುಳುವಿನ ದುಷ್ಪರಿಣಾಮವನ್ನು ತಡೆಗಟ್ಟಬಹುದು ಎಂದರು. ನಮ್ಮ ಮಹಾವಿದ್ಯಾಲಯವು ಇಂತಹ ಕಾರ್ಯಕ್ರಮಗಳಿಗೆ ಇನ್ನು ಹೆಚ್ಚಿನ ಸಹಕಾರ ನೀಡುತ್ತಿದೆ. ಉಪನ್ಯಾಸಕ ಡಾ. ಸಿ.ಎಸ್.ಕರಮುಡಿ ಮಾತನಾಡಿ ಇಂತಹ ಜಾಗೃತ ಜಾಥಾ ವಿಶೇಷವಾಗಿ ಕೊಳಚೆ ಪ್ರದೇಶಗಳಲ್ಲಿ ಹಮ್ಮಿಕೊಳ್ಳುವದರ ಮೂಲಕ, ವೈಯಕ್ತಿಕ ಹಾಗೂ ಸಾರ್ವಜನಿಕ ಸ್ವಚ್ಛತೆ ಕಾಪಾಡುವದರಿಂದ ಜಂತುಹುಳು ರೋಗವನ್ನು ತಡೆಗಟ್ಟಲು ಸಹಾಯವಾಗುವುದು ಎಂದು ತಿಳಿಸಿದರು. ಹಿರಿಯ ವೈದ್ಯ ಡಾ. ಕೆ.ಬಿ.ಹಿರೇಮಠ ಮಾತನಾಡಿ ಪ್ರತಿಯೊಬ್ಬರು ಮನೆಗೊಂದು ಶೌಚಾಲಯ ನಿರ್ಮಿಸುವುದರ ಮೂಲಕ ಕೇವಲ ಜಂತುಹುಳು ನಿವಾರಣೆಯಲ್ಲದೇ ಅನೇಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದೆಂದು ನುಡಿದರು.ಕೌಮಾರಭೃತ್ಯ ವಿಭಾಗದ ಉಪನ್ಯಾಸಕ ಡಾ.ಸೂರ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿ ಜಾಥಾದ ಮಹತ್ವವನ್ನು ತಿಳಿಸಿದರು. ಕೊನೆಯಲ್ಲಿ ಉಪನ್ಯಾಸಕಿ ಡಾ.ರಾಧಿಕಾ ಅವರು ವಂದಿಸಿದರು. ಜಾಥಾದಲ್ಲಿ ಸುಮಾರು ೩೦೦ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ಸಿಬ್ಬಂದಿಯವರು ಪಾಲ್ಗೊಂಡಿದ್ದರು.ನಂತರ ಮಹಾವಿದ್ಯಾಲಯದಲ್ಲಿ ಚಿತ್ರಪಟ ಪ್ರದರ್ಶನ ಆಯೋಜಿಸಲಾಗಿತ್ತು.

Please follow and like us:
error