ರಾಷ್ಟ್ರೀಯ ಚಿಣ್ಣರ ಹಬ್ಬದಲ್ಲಿ ಚಿತ್ರನಟರು

ಕೊಪ್ಪಳ : ದಿ 14, 15, 16, 17, ರ ಫೆಬ್ರುವರಿ 2019 ರಲ್ಲಿ ಕೊಪ್ಪಳದ ಸಾಹಿತ್ಯ ಭವನದಲ್ಲಿ, ಡಾ. ಶೇಖರಗೌಡ ಮಾಲಿ ಪಾಟೀಲರ ಘನ ಅಧ್ಯಕ್ಷತೆಯಲ್ಲಿ ಜರುಗಲಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರು 5ನೇ ಮಾಲಿಕೆಯಾಗಿ ಡಾ. ವಿ. ಕೃ. ಗೋಕಾಕ ರಾಷ್ಟೀಯ ಕಲಾ ಪ್ರತಿಭೋತ್ಸವ ಮತ್ತು ರಾಷ್ಟ್ರೀಯ ಚಿಣ್ಣರ ಹಬ್ಬದಲ್ಲಿ ಈ ನಾಲ್ಕು ದಿನ ಸಾಂಸ್ಕøತಿಕ ಲೋಕವೇ ಕೊಪ್ಪಳದಲ್ಲಿ ಅನಾವರಣಗೊಳ್ಳಲಿದೆ. ಇದಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಹೊರತಲ್ಲ. ಕಾರ್ಯಕ್ರಮದ ಉದ್ಟಾಟನೆ ಹಾಗೂ ಸಮಾರೋಪದಲ್ಲಿ ಕೆಳಕಂಡ ನಾಲ್ಕು ಹಿರಿಯ ಚಲನಚಿತ್ರ ಕಲಾವಿದರು ಪೂರ್ಣದಿನ ಭಾಗವಹಿಸಲಿದ್ದಾರೆ. 14-2-2019 ರಂದು, ಉದ್ಘಾಟನೆಯಲ್ಲಿ ರಾಜಾ ಹುಲಿ ಮತ್ತು ಶಕ್ತಿ ಚಿತ್ರದಲ್ಲಿ ನಟಿಸಿರುವ ಉದಯೋನ್ಮುಖ ತಾರೆ ಸೌಜನ್ಯ ಡಿ. ವಿ, ಆಗಮಿಸಿ ಸಹಕಾರ ನೀಡಲಿದ್ದಾರೆ.
ನೂರಾರು ಚಲಚಿತ್ರಗಳಲ್ಲಿ ಅಭಿನಯಿಸಿ ಪೋಷಕ ಪಾತ್ರಗಳಿಗೆ ಜೀವ ತುಂಬಿದ ಹಿರಿಯ ನಟರಾದ ಶಂಕರಭಟ್, ಡಾ. ಚಿಕ್ಕ ಹೆಜ್ಚಾಜಿ ಮಹದೇವ ಹಾಗೂ ಶ್ರೀಮತಿ ಮೀನಾ ಸಮಾರೋಪದಲ್ಲಿ ಜೊತೆಯಾಗಲಿದ್ದಾರೆ ಈ ಕಾರ್ಯಕ್ರಮದ ರೂವಾರಿ ಚಲನಚಿತ್ರ ನಿದೇಶಕ ರಮೇಶ ಸುರ್ವೆ ನೇತೃತ್ವವಹಿಸಿದರೆ, ನೀನೇ ರಾಜಕುಮಾರ ಚಿತ್ರದ ಶೇಷ್ಠ ಅಭಿನಯಕ್ಕಾಗಿ ಕುಮಾರ ವೈಭವ ಅಳವಂಡಿ ಅವರಿಗೆ ವಿಶೇಷವಾಗಿ ಕರ್ನಾಟಕ ಕಲಾ ಜ್ಯೋತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇವರ ಜೊತೆಗೆ ಜ್ಯೂನಿಯರ್ ಅಂಬರೀಷ್, ಜ್ಯೂನಿಯರ್ ಶಂಕರನಾಗ್, ಜ್ಯೂನಿಯರ್ ಮಾಲಾಶ್ರೀ ಕೂಡಾ ಭಾಗವಹಿಸಿ ಕೊಪ್ಪಳದ ಜನತೆಯನ್ನು ರಂಜಿಸಲಿದ್ದಾರೆ.

Please follow and like us:
error