ರಾಣಿ ಚನ್ಮಮ್ಮಾಜಿ ಶೌರ್ಯವನ್ನು ಎಲ್ಲರೂ ಮೆಚ್ಚಲೆಬೇಕು

ಕೊಪ್ಪಳ : ಕಿತ್ತೂರ ರಾಣಿ ಚನ್ನಮ್ಮ ಅಂದಿನ ದಿನಮಾನಗಳಲ್ಲಿ ಬ್ರೀಟಿಷರಿಗೆ ಸಿಂಹಸ್ವಪ್ನವಾಗಿದ್ದರು ಚನ್ನಮ್ಮಳ ಆಸ್ಥಾನದ ಹೆಸರನ್ನು ಕೇಳಿದರೆ ಬ್ರಟೀಷರು ಹೆದರಿ ಓಡಿ ಹೋಗುತ್ತಿದ್ದರು ಅಂತಹ ಧೀರ ಮಹಿಳೆಯ ಆದರ್ಶವನ್ನು ಇಂದಿನ ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅದೇ ರಾಣಿ ಚನ್ನಮ್ಮಾಳ ಶೌರ್ಯವನ್ನು ಎಲ್ಲರೂ ಮೆಚ್ಚಲೆಬೇಕು ಎಂದು ಕರವೇ ಯುವಸೈನ್ಯ ರಾಜ್ಯಾಧ್ಯಕ್ಷ ಕೆ.ಎಸ್.ಕೊಡತಗೇರಿ ಹೇಳಿದರು .
ಅವರು ಸ್ಥಳಿಯ ಕರವೇ ಯುವಸೈನ್ಯ ಕಾರ್ಯಾಲಯದಲ್ಲಿ ಮಾತನಾಡಿದ ಅವರು ಚನ್ನಮ್ಮ ಸ್ವಾತಂತ್ರ್ಯ ಮೊದಲ ಹೋರಾಟಗಾರ್ತಿ ಅಂದಿನ ದಿನಮಾಗಳಲ್ಲಿ ಬ್ರಿಟೀಷರು ಕಿತ್ತೂರ ಆಸ್ಥಾನದ ಹೆಸರು ಕೇಳಿದರೆ ಒಂದು ಕ್ಷಣ ನಡುಗುತ್ತಿದ್ದರು ಏಕೆಂದರೆ ರಾಣಿ ಚನ್ನಮ್ಮಾ ಸಂಗೊಳ್ಳಿ ರಾಯಣ್ಣ ನಂತಹವರ ಸೆನ್ಯವನ್ನು ಕಟ್ಟಿಕೊಂಡು ಬ್ರೀಟಿಷರನ್ನೆ ನಡುಗಿಸಿದ್ದರು ಅಂತಂಹ ಮಹಿಳೆಯ ಇತಿಹಾಸವನ್ನು ನಾವು ನೀವು ತಿಳಿದುಕೊಳ್ಳುವದರ ಜೊತಗೆ ಮುಂದಿನ ದಿನಮಾನಗಳಲ್ಲಿ ಮುಂದಿನ ಪಿಳೆಗೆಗು ತಿಳಿಸುವ ಕೆಲಸವನ್ನು ಸರಕಾರ ಮಾಡಬೇಕಾಗಿದೆ . ಅಂದಿನ ದಿನಮಾನಗಳಲ್ಲಿ ಕಿತ್ತೂರ ಚನ್ನಮ್ಮಾಳ ಹೋರಾಟವೆಂದರೆ ತಾನೆ ಸ್ವತ ಕುದರೆಯನ್ನು ಏರಿ ಬ್ರೀಟಿಷರನ್ನು ನಡುಗಿಸಿದ್ದರು ಆದರೆ ರಾಣಿ ಚನ್ನಮ್ಮಾಳನ್ನು ಮೋಸದಿಂದ ಬ್ರೀಟಿಷರಿಗೆ ಸೆರೆ ಸಿಗುವಹಾಗೆ ನಮ್ಮವರೇ ಮಾಡಿರುವದು ವಿಪರ್ಯಾಸ, ಆದರೆ ಕಿತ್ತೂರ ಚನ್ನಮ್ಮಾಳ ಹೋರಾಟವನ್ನು ಎಲ್ಲರೂ ಮೆಚ್ಚಲೇಬೇಕು ಎಂದು ಹೇಳಿದರು.
ನಂತರ ಕರವೇ ಯವುಸೈನ್ಯ ರಾಜ್ಯ ಕಾರ್ಯದರ್ಶಿ ನಾಗರಾಜ ಅರಳಿ ಮಠ ಮಾತನಾಡಿ ನಾಡು, ನುಡಿಗಾಗಿ ಚನ್ನಮ್ಮಾ ಅಂದಿನ ದಿನಮಾನಗಳಲ್ಲಿ ಹೋರಾಟ ಮಾಡಿರುವದು ನಮ್ಮ ನಿಮ್ಮಲ್ಲಿರಿಗೆ ಸ್ಪೂರ್ತಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ರಾಮಣ್ಣ ಉಪ್ಪಾರ, ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಎಂ . ಖಾಜೇಹುಸೇನ, ಜಿಲ್ಲಾ ಉಪಾಧ್ಯಕ್ಷ ಅನೀಲ ಹಕಂಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎನ್.ಕುಂದಗೋಳ, ತಾಲೂಕ ಅಧ್ಯಕ್ಷ ಫಕೀರಪ್ಪ ಎನ್.ಬಿ. ವಿರೇಶ, ನಾಗರಾಜ,ಮಂಜುನಾಥ ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error