ರಾಜ್ಯ ವಕ್ಫ್ ಅದ್ಯಕ್ಷ ಸ್ಥಾನಕ್ಕೆ ಹಿರಿಯ ವಕೀಲ ಅಸೀಪ್ ಅಲಿ ನೇಮಕಕ್ಕೆ ಒತ್ತಾಯ

Koppal ಹಿರಿಯ ವಕೀಲ ಆಸೀಫ್ ಅಲಿಯವರಿನ್ನು ರಾಜ್ಯ ವಕ್ಫ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವಂತೆ ಒತ್ತಾಯಿಸಿ ಕೊಪ್ಪಳದ ಮುಸ್ಲಿಂ ಮುಖಂಢರು ಬೆಂಗಳೂರಿನಲ್ಲಿ ವಿವಿಧ ನಾಯಕರನ್ನು ಭೇಟಿ ಮಾಡಿದರು.

ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ಧರಾಮಯ್ಯ , ಕೆಪಿಸಿಸಿ ಅದ್ಯಕ್ಷ ದಿನೇಶ ಗುಂಡೂರಾವ್, ಜಮೀರ್ ಅಹಮದ್ ಖಾನ್ ರವರನ್ನು ಭೇಟಿಯಾಗಿ , ಸುಮಾರು 50 ವರ್ಷಗಳಿಂದಲೂ ಇಲ್ಲಿಯವರೆಗೆ ರಾಜ್ಯ ವಕ್ಫ ಮಂಡಳಿಗೆ ಉತ್ತರ-ಕರ್ನಾಟಕ ಭಾಗದವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಿಲ್ಲಾ. ಅತೀ ಹೆಚ್ಚು ವಕ್ಫ ಆಸ್ತಿಗಳು ಉತ್ತರ ಕರ್ನಾಟಕದಲ್ಲಿದ್ದು, ಹೆಚ್ಚಿನ ಸಮಸ್ಯೆಗಳು ಸಹ ಉತ್ತರ ಕರ್ನಾಟಕ ಭಾಗದಲ್ಲಿವೆ. ಕಾರಣ ಈಗಾಗಲೇ ರಾಜ್ಯ ವಕ್ಫ ಮಂಡಳಿಗೆ ಚುನಾಯಿತ ಸದಸ್ಯರಾಗಿರುವ, ಹಿರಿಯ ನ್ಯಾಯವಾದಿಗಳಾದ ಆಸೀಫ್ ಅಲಿಯವರನ್ನು ನೇಮಕ ಮಾಡಿ, ಉತ್ತರ ಕರ್ನಾಟಕ ಭಾಗಕ್ಕೆ ನ್ಯಾಯ ಒದಗಿಸಬೇಕೆಂದು ವಿನಂತಿ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಂಸದೀಯ ಕಾರ್ಯದರ್ಶಿ ಶಾಸಕ ರಾಘವೇಂದ್ರ ಹಿಟ್ನಾಳ, ಡಿಸಿಸಿ ಅದ್ಯಕ್ಷ ಶಿವರಾಜ ತಂಗಡಗಿ, ಆಸೀಫ್ ಅಲಿ ವಕೀಲರು, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರಾದ ಸೈಯದ್ ಮುರ್ತುಜಾ ಕೊಪ್ಪಳ ಮುಸ್ಲಿಂ ಮುಖಂಡರಾದ ,ಅಮ್ಜದ್ ಪಟೇಲ್, ಎಸ್.ಎ.ಮಜೀದ್, ಖತೀಬ್ ಬಾಷು, ಇಬ್ರಾಹೀಂ,ಜಾಕೀರ್ ಕಿಲ್ಲೇದಾರ್, ಹುಸೇನ ಪೀರಾ, ಪಾಷಾ ಕಾಟನ್, ಮೌಲಾಹುಸೇನ್ ಜಮೇದಾರ್, ಮೊಹ್ಮದ್ ಜಹೀರ್ ಅಲಿ, ಗೌಸಸಾಬ ಸರದಾರ್ ಹಾಗೂ ಇತರರು ಹಾಜರಿದ್ದರು.

Please follow and like us:
error