ರಾಜ್ಯ ವಕೀಲರ ಪರಿಷತ್ ನೂತನ ಸದಸ್ಯ ಅಸೀಪ್ ಅಲಿಯವರಿಗೆ ಸನ್ಮಾನ


ಕೊಪ್ಪಳ : ರಾಜ್ಯ ವಕೀಲರ ಪರಿಷತ್ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಹಿರಿಯ ವಕೀಲ ಅಸೀಪ್ ಅಲಿಯವರಿಗೆ ಭಾಗ್ಯನಗರದ ಜಾಮೀಯಾ ಮಸೀದಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಾಮೀಯಾ ಮಜೀದ್ ಪಂಚ್ ಕಮೀಟಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಮ್ಮ ಹೈದ್ರಾಬಾದ್ ಕರ್ನಾಟಕ ಭಾಗದಿಂದ ರಾಜ್ಯ ಸಮಿತಿಗೆ ಆಯ್ಕೆಯಾಗುವುದು ಸರಳವಲ್ಲ. ಹೀಗಿರುವಾಗ ಎಲ್ಲರ ಗೌರವ, ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿರುವ ಆಸೀಪ್ ಅಲಿಯವರು ಆಯ್ಕೆಯಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಇವರಿಂದ ಇಡೀ ಸಮಾಜಕ್ಕೆ ಇನ್ನಷ್ಟು ಸೇವೆ ಸಿಗಲಿ ಎಂದು ಜಾಮೀಯಾ ಮಸೀದಿ ಪಂಚ್ ಕಮೀಟಿ ಅಧ್ಯಕ್ಷ ಇಬ್ರಾಹಿಂಸಾಬ ಬಿಸರಳ್ಳಿ ಹಾರೈಸಿದರು. ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯ ಹೊನ್ನೂರಸಾಬ ಬೈರಾಪೂರ, ಮಾಜಿ ಗ್ರಾ.ಪಂ.ಸದಸ್ಯ ಮಹೆಬೂಬಸಾಬ ಬಳಿಗಾರ, ಮೌಲಹುಸೇನ ಹಣಗಿ, ಹಾಜಿ ಕುತ್ಬುದ್ದೀನಸಾಬ, ರಶೀದಸಾಬ ಆದೋನಿ, ಶರೀಪಸಾಬ, ಕಬೀರಸಾಬ ಸೇರಿದಂತೆ ಸಮಾಜದ ಗಣ್ಯರು ಉಪಸ್ಥಿತರಿದ್ದರು