ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ, ಭೂಮಿ ಕರಾಟೆ ಫೌಂಡೇಶನ್‌ಗೆ ೧ ಚಿನ್ನ ೩ ಬೆಳ್ಳಿ

dav

ಕೊಪ್ಪಳ: ನವಂಬರ್ ೧೦ ಮತ್ತು ೧೧ ರಂದು ನಡೆದ ಶಿವಮೊಗ್ಗದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಕರಾಟೆ ಶಿಕ್ಷಕರ ಸಂಘದವರು ಆಯೋಜಿಸಿದ್ದ ೪ ನೇ ಕರ್ನಾಟಕ ರಾಜ್ಯ ಮುಕ್ತ ಕರಾಟೆ ಪಂಧ್ಯಾವಳಿಯಲ್ಲಿ ನಗರದ ಭೂಮಿ ಕರಾಟೆ ಪೌಂಡೇಶನ್ ನ ವಿದ್ಯಾರ್ಥಿಗಳು ಸ್ಪರ್ಧಿಸಿ ಮಾರುತೇಶ ೩೬ ರೀಮದ ೪೦ ಕೆ.ಜಿ ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡದು ಚಿನ್ನದ ಪದಕ ಮತ್ತು ಶಶಾಂಕ ೨೬ ರಿಂದ ೩೦ ಕೆ.ಜಿ ವಿಭಾಗದಲ್ಲಿ ದ್ವೀತಿಯ ಸ್ಥಾನ ಬೆಳ್ಳಿ ಪದಕ, ಹಾಗೂ ಇಂದ್ರೇಶ ಮತ್ತು ರಾಮಕುಮಾರ ಕತಾ ವಿಭಾಗದಲ್ಲಿ ದ್ವೀತಿಯ ಸ್ಥಾನ ಬೆಳ್ಳಿ ಪದಕ ಮತ್ತು ಪ್ರಮಾಣ ಪತ್ರ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಏಶಿಯನ್ ಕರಾಟೆ ಫೆಡರೆಶನ್ ನಿರ್ಣಾಯಕರಾದ ಡಾ. ಶ್ರೀನಾಥ, ಭಾರತ್ ಕರಾಟೆ ಅಕಾಡೆಮಿಯ ರಾಜ್ಯ ಸಂಚಾಲಕರಾದ ಕೀರ್ತಿ, ಸಿಆರ್‌ಪಿಎಫ್ ಕರಾಟೆ ತರಬೇತುದಾರ ಮಹಾಂತೇಶ, ಸಂಸ್ಥೆ ಮುಖ್ಯಸ್ಥ ಮೌನೇಶ ಎಸ್. ವಡ್ಡಟ್ಟಿ, ಆಯೋಜಕ ಚಂದ್ರಕಾಂತ ಬಟ್, ನಿರ್ಣಾಯಕರಾದ ಪ್ರಕಾಶ ಡಿ ಬಾಷಾಸಾಹೇಬ್, ದೇವಪ್ಪ ಕಲ್ಲಣ್ಣವರ, ವಿಠ್ಠಲ ಹೆಚ್, ಸೋಮಲಿಂಗ, ರಾಕೇಶ ಕುಂಬಾರ ಸೇರಿದಂತೆ ಇತರರು ಅಭಿನಂದಿಸಿದ್ದಾರೆ.