ರಾಜ್ಯಮಟ್ಟದ ಚಲನಚಿತ್ರ ಶಿಬಿರಕ್ಕೆ ಗೊಂಡಬಾಳ ಆಯ್ಕೆ


ಕೊಪ್ಪಳ, ನ. ೦೮: ಬೆಂಗಳೂರಿನ ಸುಲೂಚನ ಚಿತ್ರಮಂದಿರದಲ್ಲಿ ನಡೆಯುವ ೫ ದಿನಗಳ ಚಲನಚಿತ್ರ ಸರ್ಟಿಫಿಕೇಟ್ ತರಬೇತಿಗೆ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಆಯ್ಕೆಯಾಗಿದ್ದಾರೆ.
ವಾರ್ತಾ ಇಲಾಖೆ, ಪೂನಾ ಫಿಲಂ ಮತ್ತು ಟೆಲಿವಿಷನ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ನಡೆಯುತ್ತಿರುವ ಶಿಬಿರಕ್ಕೆ ನವೆಂಬರ್ ೧೦ ರಂದು ಹಿರಿಯ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಉದ್ಘಾಟಿಸಲಿದ್ದಾರೆ.
ಪೂನಾ ಫಿಲಂ ಮತ್ತು ಟೆಲಿವಿಷನ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ನಿರ್ದೇಶಕ ಭೂಪೇಂದ್ರ ಖೈನ್‌ತೊಲ ಆಶಯ ಭಾಷನ ಮಾಡುವರು. ವಾರ್ತಾ ಇಲಾಖೆ ನಿರ್ದೇಶಕ ಎನ್. ಆರ್. ವಿಶುಕುಮಾರ್ ಭಾಗವಹಿಸುವರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಅವರು ಅಧ್ಯಕ್ಷತೆವಹಿಸುವರು. ಪೂನಾ ಫಿಲಂ ಮತ್ತು ಟೆಲಿವಿಷನ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ವಿಷಯ ತಜ್ಞರಾದ ಪಂಕಜ್ ಸಕ್ಸೇನಾ ಮತ್ತು ಮುನೀಶ್ ಭಾರದ್ವಾಜ್ ತರಬೇತಿ ನಡೆಸಿಕೊಡುವರು .