ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಶುಲ್ಕ ಪಾವತಿಗೆ ಸೂಚನೆ


ಕೊಪ್ಪಳ ಏ.: ತಮ್ಮ ಮಕ್ಕಳ ಬೋಧನಾ ಶುಲ್ಕವನ್ನು ಪಾವತಿಸಲು ಆರ್ಥಿಕವಾಗಿ ಸಮರ್ಥರಾದ ಬಾಕಿ ಪಾವತಿಸಲು ಶಕ್ತರಾಗಿರುವ ಹಾಗೂ ಶುಲ್ಕವನ್ನು ಸ್ವಯಂಪ್ರೇರಿತರಾಗಿ ಭರಿಸಲು ಮುಂದಾಗುವ ಪೋಷಕರುಗಳಿಂದ ಮಾತ್ರ ಶಿಕ್ಷಣ ಕಾಯ್ದೆಯ ಅವಕಾಶಗಳಡಿಯಲ್ಲಿ ಶುಲ್ಕ ವಸೂಲಿ ಮಾಡುವಂತೆ ಖಾಸಗಿ ಶಾಲೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದು, ಈ ಸಮಯದಲ್ಲಿ ಶುಲ್ಕವನ್ನು ವಿದ್ಯಾರ್ಥಿಗಳ ಪೋಷಕರಿಂದ ವಸೂಲಾತಿ ಮಾಡದಂತೆ ಖಾಸಗಿ ಶಾಲೆಗಳಿಗೆ ಸರ್ಕಾರ ಸೂಚನೆ ನೀಡಿತ್ತು.
ಆದರೆ, ಖಾಸಗಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ವೇತನ ಪಾವತಿಸಲು ಸಹ ತೊಂದರೆಯುAಟಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಅನುಕೂಲ ಮಾಡಿಕೊಡಲು ಹಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕೋರಿರುವ ಹಿನ್ನೆಲೆಯಲ್ಲಿ ಶುಲ್ಕ ಪಾವತಿಗೆ ಸಂಬAಧಿಸಿದAತೆ ಹೊರಡಿಸಿದ್ದ ಸುತ್ತೋಲೆಯನ್ನು ಭಾಗಶಃ ಮಾರ್ಪಡಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಸೂಚನೆ ನೀಡಿದ್ದಾರೆ.
ಅದರಂತೆ, ತಮ್ಮ ಮಕ್ಕಳ ಬೋಧನಾ ಶುಲ್ಕವನ್ನು ಪಾವತಿಸಲು ಆರ್ತಿಕವಾಗಿ ಸಮರ್ಥರಾದ, ಬಾಕಿ ಪಾವತಿಸಲು ಶಕ್ತರಾಘಿರುವ ಹಾಗೂ ಶೂಲ್ಕವನನು ಸ್ವಯಂಪ್ರೇರಿತರಾಘಿ ಭರಿಸಲು ಮುಂದಾಗುವ ಪೋಷಕರುಗಳಿಂದ ಮಾತ್ರ ಶೀಕ್ಷಣ ಕಾಯ್ದೆಯ ಅವಕಾಶಗಳಡಿಯಲ್ಲಿ ಶೂಲ್ಕ ವಸೂಲಾತಿಗೆ ಅವಕಾಶ ನೀಡಿದೆ.
ಶುಲ್ಕವನ್ನು ಕಟ್ಟಲು ಸದ್ಯದ ಪರಿಸ್ಥಿತಿಯಲ್ಲಿ ಅಸಹಾಯಕರಾದ ಹಾಗೂ ಈ ಸಮಯದಲ್ಲಿ ಶುಲ್ಕವನ್ನು ಪಾವತಿಸಲು ಆಗದೆ ಇರುವ ಪೋಷಕರುಗಳಿಂದ ಮುಂದಿನ ಆದೇಶದವರೆಗೆ ಯಾವುದೇ ಕಾರಣಕ್ಕೂ ಒತ್ತಡ ಹೇರುವುದು ಹಾಗೂ ಶುಲ್ಕ ಪಾವತಿಸದ ಕಾರಣದಿಂದ ಸಂಬAಧಿಸಿದ ವಿದ್ಯಾರ್ಥಿಯ ದಾಖಲಾತಿಯನ್ನು ನಿರಾಕರಿಸುವುದು ಅಥವಾ ಶಾಲೆಯಿಂದ ಹೊರ ಹಾಕಿರುವ ಕುರಿತು ಯಾವುದೇ ದೂರುಗಳು ಬಂದಲ್ಲಿ ಅಂತಹ ಶಾಲೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಕ್ಷಣ ಕಾಯ್ದೆಯಡಿಯಲ್ಲಿ ಸಂಬAಧಿಸಿದ ಉಪನಿರ್ದೇಶಕರುಗಳು ಶಿಸ್ತಿನ ಕ್ರಮ ಕೈಗೊಳ್ಳಲು ಸೂಚಿಸಿದೆ.
ಪೋಷಕರು ನೀಡುವ ಹಣವನ್ನು ಖಾಸಗಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರ ಮತ್ತು ಸಿಬ್ಬಂದಿ ವರ್ಗದವರ ವೇತನಕ್ಕೆ ಬಳಸಿಕೊಳ್ಳಲು ಪ್ರಥಮ ಆದ್ಯತೆ ನೀಡಬೇಕು. ಶುಲ್ಕವನ್ನು ಚೆಕ್/ಆರ್‌ಟಿಜಿಎಸ್/ಎನ್‌ಇಎಫ್‌ಟಿ ಆನ್‌ಲೈನ್ ಮೂಲಕವೇ ಕಡ್ಡಾಯವಾಗಿ ಪಡೆಯಬೇಕು. ಯಾವುದೇ ಕಾರಣಕ್ಕೂ ಲಾಕ್‌ಡೌನ್ ಅವಧಿಯಲ್ಲಿ ಪೋಷಕರಾಗಲೀ, ವಿದ್ಯಾರ್ಥಿಗಳಾಗಲಿ ಶಾಲೆಯ ಆವರಣಕ್ಕೆ ಬಾರದಂತೆ ನೋಡಿಕೊಳ್ಳಬೇಕು.
ಆಡಳಿತ ಮಂಡಳಿಯವರು ಶಾಲಾ ಶುಲ್ಕವನ್ನು ಪಾವತಿಸಲು ಪೋಷಕರಿಗೆ ಇ-ಮೇಲ್, ಎಸ್.ಎಮ್.ಎಸ್ ಅಥವಾ ವಾಟ್ಸ್ಪ್ ಮೂಲಕ ಶುಲ್ಕ ಪಾವತಿಸಲು ಶಕ್ತರಿರುವ ಹಾಗೂ ಸ್ವ-ಇಚ್ಚೆಯಿಂದ ಪಾವತಿಸಲು ಇಚ್ಚಿಸುವ ಪೋಷಕರುಗಳು ಮಾತ್ರ ಪಾವತಿಸಬಹುದು ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ ಎಂಬ ಅಂಶವನ್ನು ಕಡ್ಡಾಯವಾಗಿ ಪೋಷಕರ ಗಮನಕ್ಕೆ ತರಬೇಕು.
ಶುಲ್ಕ ಪಾವತಿಗೆ ಸಂಬAಧಿಸಿದAತೆ ಯಾವುದೇ ದೂರುಗಳು ಬಂದಲ್ಲಿ ಜಿಲ್ಲಾ ಉಪನಿರ್ದೇಶಕರುಗಳು ತಮ್ಮ ಹಂತದಲ್ಲಿಯೇ ಪರಿಶೀಲನಾ ತಂಡವನ್ನು ರಚಿಸಿ ದೂರು ದಾಖಲಾದ ಶಾಲೆಗೆ ತಕ್ಷಣವೇ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ತಿಳಿಸಿದೆ.

Please follow and like us:
error