ರಾಜ್ಯದಲ್ಲೇ ಮೊದಲ ಬಾರಿ : ಉಜ್ವಲ ರಥಯಾತ್ರೆಗೆ ಕರಡಿ-ಶ್ರೀರಾಮುಲು ಚಾಲನೆ

ರಾಜ್ಯದಲ್ಲೇ ಮೊದಲ ಬಾರಿ ಇಂದು ಕೊಪ್ಪಳಕ್ಕೆ ಆಗಮನ | ಹುಲಗಿಯಲ್ಲಿ ರಥಕ್ಕೆ ಸ್ವಾಗತ
ಉಜ್ವಲ ರಥಯಾತ್ರೆಗೆ ಕರಡಿ-ಶ್ರೀರಾಮುಲು ಚಾಲನೆ

ಕೊಪ್ಪಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷಿ ಉಜ್ವಲ ಯೋಜನೆ ಕುರಿತು ಜಾಗೃತಿ ಮೂಡಿಸಲು ಹೊರಟಿರುವ ಉಜ್ವಲ ರಥ ರಾಜ್ಯದಲ್ಲೇ ಮೊದಲ ಬಾರಿ ಕೊಪ್ಪಳಕ್ಕೆ ಆಗಮಿಸಲಿದೆ. ಮಹಾರಾಷ್ಟ್ರದ ಔರಂಗಾಬಾದ್‍ನಿಂದ ಹೊರಟಿರುವ ಉಜ್ವಲ ರಥ ಸೋಮವಾರ ಫೆ.26ರಂದು ಕೊಪ್ಪಳದ ಹುಲಗಿ ಕ್ಷೇತ್ರಕ್ಕೆ ಆಗಮಿಸಲಿದ್ದು, ಸಂಸದರಾದ ಸಂಗಣ್ಣ ಕರಡಿ ಹಾಗೂ ಬಿ. ಶ್ರೀರಾಮುಲು ಅಲ್ಲಿ ರಥಯಾತ್ರೆಗೆ ಜಂಟಿಯಾಗಿ ಚಾಲನೆ ನೀಡಲಿದ್ದಾರೆ.
‘ಬಡ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ನೀಡುವ ಉಜ್ವಲ ಯೋಜನೆಯಡಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ 1 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಎಲ್‍ಪಿಜಿ ಸಂಪರ್ಕ ದೊರೆತಿದೆ. ಯೋಜನೆ ಕುರಿತು ದೇಶಾದ್ಯಂತ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಉಜ್ವಲ ರಥಯಾತ್ರೆಯನ್ನು ದೇಶಾದ್ಯಂತ ಆಯೋಜಿಸಿದೆ. ರಾಜ್ಯದ 40ರಿಂದ 50 ವಿಧಾನಸಭಾ ಕ್ಷೇತ್ರಗಳಲ್ಲಿ ಉಜ್ವಲ ರಥ ಸಂಚರಿಸಲಿದ್ದು, ಕೊಪ್ಪಳದಿಂದ ರಥಯಾತ್ರೆ ಪ್ರಾರಂಭವಾಗಲಿದೆ’ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
‘ಕೇಂದ್ರ ಸರ್ಕಾರಿ ಸ್ವಾಮ್ಯದ ವಿವಿಧ ತೈಲಕಂಪನಿಗಳು ಯೋಜನೆಯೊಂದಿಗೆ ಕೈಜೋಡಿಸಿದ್ದು, ಇಂಗಾಲ ಬಳಕೆ ಪ್ರಮಾಣ ತಗ್ಗಿಸುವಲ್ಲಿ ಭಾರತದ ಈ ಕ್ರಮ ಮಹತ್ವದ ಪಾತ್ರ ವಹಿಸಲಿದೆ ಎಂದು ವಿಶ್ವಸಂಸ್ಥೆ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದೆ. ಇಂತಹ ಮಹತ್ವದ ಯೋಜನೆ ಕುರಿತು ಹೊರಟಿರುವ ರಥಯಾತ್ರೆಗೆ ಕೊಪ್ಪಳದಲ್ಲಿ ಚಾಲನೆ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಕ್ಷೇತ್ರದ ಮಹಿಳೆಯರು ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಸಂಸದರು ತಿಳಿಸಿದ್ದಾರೆ.

ಎಲ್ಲೆಲ್ಲಿ ರಥಯಾತ್ರೆ?:
ಕಾರಟಗಿ, ಕೊಪ್ಪಳ (ಗ್ರಾ), ಕುಕನೂರು, ಕನಕಗಿರಿ, ತಾವರಗೇರಾ, ಹನುಮಸಾಗರ, ಹೊಸಹಳ್ಳಿ, ಸಿದ್ದಾಪುರ, ಕಿನ್ನಾಳ, ಶ್ರೀರಾಮನಗರ, ಬಸಾಪಟ್ಟಣ, ಗಿಣಿಗೇರಾ, ಮಂಗಳೂರು, ಕವಲೂರು, ಅಳವಂಡಿ, ಕುಷ್ಟಗಿ ಪಟ್ಟಣ, ತಳಕಲ್, ಯರಡೋಣಾ, ಮುಧೋಳ, ಹಣವಾಳ, ಹೊಸಕೇರಾ, ಹಿರೇಮನ್ನಾಪುರ, ಹುಲಗೇರಾ, ಯಲಬುರ್ಗಾ, ಬೇವೂರು, ಚಳಗೇರಾ, ಬಳೂಟಗಿ, ದೋಟಿಹಾಳ, ನಿಲೋಗಲ್ ಮತ್ತು ಕುದರಿಮೋತಿ.

Please follow and like us:
error