ರಾಜ್ಯದಲ್ಲಿ ಗೂಂಡಾ , ಕಲಾಸಿಪಾಳ್ಯ ಸರ್ಕಾರ ನಡೆಯುತ್ತಿದೆ- ಕೆ.ಎಸ್.ಈಶ್ವರಪ್ಪ

Koppal ಪ್ರಿಯಾಂಕನ ಮುತ್ತಾತನಿಂದಲೂ ಬಿಜೆಪಿಗೆ ಏನೂ ಮಾಡಲು ಆಗಿಲ್ಲ, ಇನ್ನು ಈ ಹಸುಳೆ ಪ್ರಿಯಾಂಕ ಏನು ಮಾಡುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಾಂಗ್ರೇಸ್ ವಿರುದ್ದ ವಾಗ್ದಾಳಿ ನಡೆಸಿದ್ರು.  ಕೊಪ್ಪಳದಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ನೆಹರೂ ಕುಟುಂಬದ ಹೊರತಾಗಿ ಕಾಂಗ್ರೇಸ್ಗೆ ಗತಿ ಇಲ್ಲ ಎಂಬುದು ಗೊತ್ತಾಗಿದೆ. ಬಿಜೆಪಿ ಪಕ್ಷ ಯಾವುದೇ ನಾಯಕರ ಮೇಲೆ ಡಿಪೆಂಡ್ ಆಗಿಲ್ಲ. ತತ್ವ ಸಿದ್ದಾಂತ ಹಾಗೂ ಕಾರ್ಯಕರ್ತರ ಮೇಲೆ ಬಿಜೆಪಿ ಪಕ್ಷ ನಿಂತಿದೆ. ಆದ್ರೆ ಇದೀಗ ಸ್ವರ್ಗದಲ್ಲಿರೋ ಇಂದಿರಾ ಗಾಂಧಿ ಬಂದ್ರೂ ಕಾಂಗ್ರೇಸ್ ಸ್ಥಿತಿ ಸುಧಾರಿಸಲ್ಲ ಎಂದ್ರು. ಇನ್ನು ರಾಜ್ಯದಲ್ಲಿ ಗೂಂಡಾ , ಕಲಾಸಿಪಾಳ್ಯ ಸರ್ಕಾರ ನಡೆಯುತ್ತಿದೆ. ನಮ್ಮ ಬಗ್ಗೆ ಮಾತನಾಡೋ ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬ ಹುಚ್ಚ ಆತನ ಬಗ್ಗೆ ರಿಯಾಕ್ಟ್ ಮಾಡಲ್ಲ. ಇನ್ನು ಸಿಎಂ ಇಬ್ರಾಹಿಂ ಸಹ ಲುಚ್ಚಾ ರಾಜಕಾರಣಿಯಾಗಿದ್ದು, ಆರು ಕೊಟ್ರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ ಅನ್ನೋ ರಾಜಕಾರಣಿ. ಇದೇ ಸಿಎಂ ಇಬ್ರಾಹಿಂ ಜೆಡಿಎಸ್ನಲ್ಲಿದ್ದಾಗ ಇಂದಿರಾಗಾಂಧಿಯನ್ನು ಅಂತರಾಷ್ಟ್ರೀಯ ಸೂಳೆ ಅಂದಿದ್ರು. ಇಂತವರ ಬಗ್ಗೆ ನಾವು ಜಾಸ್ತಿ ಉತ್ತರ ಕೊಡಲ್ಲ ಎಂದ್ರು. ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ,‌ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ, ಕಟ್ಟಾ ಸುಭ್ರಮಣ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error