ರಾಜ್ಯದಲ್ಲಿ ಇಬ್ಬಿಬ್ಬರು ಮುಖ್ಯಮಂತ್ರಿಗಳಿದ್ದಾರೆ: ಸಿದ್ದರಾಮಯ್ಯ

ಡಿಕೆಶಿ ಮತ್ತು ನನ್ನ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ .

ಕೊಪ್ಪಳ: ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದು, ಸಂವಿಧಾನಿಕ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಸಂವಿಧಾನಿಕ ಮುಖ್ಯಮಂತ್ರಿ ವಿಜಯೇಂದ್ರ. ಹೀಗಾಗಿ ಬಿಜೆಪಿಯಲ್ಲಿ ಭಿನ್ನಮತ ಬುಗಿಲೆದ್ದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಬಿಜೆಪಿ ಶಾಸಕರಿಗೆ ನೀಡಲಾದ ಅನುದಾನನೇ ವಾಪಾಸ್ ತೆಗೆದುಕೊಂಡಿದ್ದಾರೆ. ಮತ್ತೆ ಪ್ರತ್ಯೇಕ ಅನುದಾನವನ್ನೂ ಕೊಟ್ಟಿಲ್ಲ. ಹಾಗಾಗೇ ಶಾಸಕರು ಬಂಡಾಯ ಹೇಳುತ್ತಿದ್ದಾರೆ ಎಂದರು.

ಬಿಜೆಪಿಯಲ್ಲಿ ಭಿನ್ನಮತ ಇರುವುದು ಸತ್ಯ ಎಂದು ಯತ್ನಾಳ ಹೇಳಿದಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ನಮ್ಮ ನಾಯಕ ಅಲ್ಲ. ಮೋದಿ, ಅಮಿತ್ ಷಾ, ನಡ್ಡಾ ನಮ್ಮ ನಾಯಕರು ಎಂದಿದ್ದಾರೆ. ಹಾಗಾಗಿ ಬಿಜೆಪಿ ಭಿನ್ನಮತದಲ್ಲಿ ಕೈಹಾಕಲ್ಲ. ಅವರಾಗೇ ಬಿಜೆಪಿ ಸರ್ಕಾರ ಬಿದ್ದರೇ ನಾವು ಜವಾಬ್ದಾರರಲ್ಲ ಎಂದರು.

ರಾಜ್ಯ ಸರ್ಕಾರ ಹಾಳಾಗಲು ಸಿದ್ದರಾಮಯ್ಯ ಕಾರಣ ಎಂಬ ಸಚಿವ ಸೋಮಣ್ಣ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಬೊಕ್ಕಸ ಖಾಲಿ ಮಾಡಿದ್ದಾರೆ ಎಂದು ಹೇಳುವ ಅವರಿಗೆ ಹಣಕಾಸಿನ ಬಗ್ಗೆ ಅಜ್ಞಾನ ಇದೆ.‌ ಹಾಗಾಗಿ ದುರುದ್ದೇಶ ಪೂರಕವಾಗಿ ಮಾಡಿದ್ದಾರೆ ಎಂದಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಕುಸಿದಾಗಲೂ, ನಮ್ಮ ಅವಧಿಯಲ್ಲಿ ಆರ್ಥಿಕ ಶಿಸ್ತಿನಲ್ಲಿ ಕರ್ನಾಟಕ ಸರ್ಕಾರ ಮೊದಲನೇ ಸ್ಥಾನದಲ್ಲಿತ್ತು. ಆರ್ಬಿಐ ಸೇರಿದಂತೆ ಹಲವು ಸಮೀಕ್ಷೆಗಳು ಹೇಳಿವೆ. ಅಲ್ಲದೇ ಮನಮೋಹನ್ ಸಿಂಗ್ ದೇಶ ಕಂಡ ಅತ್ಯುತ್ತಮ ಆರ್ಥಿಕ ತಜ್ಞ. ಅವರು ಕೂಡಾ ಹೇಳಿದ್ದರೂ, ಸೋಮಣ್ಣ ಯಾವ ಆರ್ಥಿಕ ತಜ್ಞ ಎಂದು ಲೇವಡಿ ಮಾಡಿದರು.

ಪ್ರಸ್ತುತ ಆರ್ಥಿಕತೆ ದಿವಾಳಿಯಾಗಿದೆ. ಬೊಕ್ಕಸದಲ್ಲಿ ಸಂಬಳ ನೀಡಲು ಕೂಡಾ ದುಡ್ಡಿಲ್ಲ. ಇದು ರಾಜ್ಯದ ಪರಿಸ್ಥಿತಿ ಅಲ್ಲ‌. ಇಡೀ ದೇಶದ ಪರಿಸ್ಥಿತಿ. ಕೇಂದ್ರ ಸಂಖ್ಯಾ ಇಲಾಖೆ ಹೇಳಿದಂತೆ ಜಿಡಿಪಿ 6.7ರಷ್ಟು ಹೆಚ್ಚಾಗಬೇಕಿತ್ತು. ಆದರೆ ಕೇವಲ ಶೇ 4.7ರಷ್ಟು ಹೆಚ್ಚಾಗಬೇಕಿದೆ. ಇದು ಹೀಗೆ ಮುಂದುವರೆದರೆ ಋಣಾತ್ಮಕ ಪ್ರಗತಿ ಕಾಣಲಿದೆ. ಇದೇ ಮೋದಿ ಸಾಧನೆ ಎಂದರು‌.

ಕೊರೋನಾದಲ್ಲಿ ಸಿದ್ದರಾಮಯ್ಯ ಪಿಎಚ್ಡಿ ಮಾಡಿದ್ದಾರಾ ಎಂಬ ಬಿ.ಸಿ.ಪಾಟೀಲ ಪ್ರಶ್ನೆ ಉತ್ತರಿಸಿ, ಕೊರೋನಾ ಎಚ್ಚರಿಕೆ ವಹಿಸಲು ಸಾಮಾನ್ಯ ಜ್ಞಾನ ಬೇಕು. ಇದಕ್ಕೆ ಪಿಎಚ್ಡಿ ಬೇಕಾಗಿಲ್ಲ. ಇದನ್ನು ಬಿಸಿ ಪಾಟೀಲ್ ತಿಳಿಸಿ ಎಂದರು.

ಮಕ್ಕಳಿಂದ ಕೊರೋನಾ ಹರಡತ್ತಿದೆ. ಶಾಲೆ ಆರಂಭಿಸಲು ಶಿಕ್ಷಣ ಸಚಿವರು ಆಸಕ್ತಿ ತೋರುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇನ್ನೂ ಎರಡು ತಿಂಗಳು ಶಾಲೆಗಳನ್ನು ಆರಂಭಿಸಬಾರದು. ಬಳಿಕ ಪೂರ್ವಸಿದ್ಧತೆ ಕೈಗೊಳ್ಳಬೇಕು. ಮಕ್ಕಳಿಗೆಮಾಸ್ಕ್, ಸ್ಯಾನ್ ಡೈಸರ್ ವಿತರಿಸಬೇಕು. ದೂರ ದೂರ ಕೂರಿಸಬೇಕು. ಎಚ್ಚರಿಕೆ ವಹಿಸಿದರೇ, ಸಾಮಾಜಿಕ ಅಂತರ ಕಾಪಾಡಿದರೇ ಕೊರೋನಾ ಹರಡುವುದಿಲ್ಲ. ಶಾಲೆ ಆರಂಭ ಆಗದಿದ್ದರೆ, ಆಗದಿದ್ದರೇ ವೋತಿಕ್ಯಾತ ಹೊಡಿಯೋಕೆ ಹೋಗ್ತಾ ಇದ್ವಿ. ಮಕ್ಕಳೂ ಹಾಗೇ ಮಾಡುತ್ತವೆ ಎಂದು ಹಾಸ್ಯ ಮಾಡಿದರು.

ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಲಾಗಿದೆ. ಆದರೆ ಇದಕ್ಕೆ ಸಂವಿಧಾನಿಕವಾಗಿ ಮಸೂದೆ ಅಂಗೀಕರಿಸಬೇಕಿತ್ತು. ಇದನ್ನು ರಾಜ್ಯ ಸರ್ಕಾರ ಮಾಡಿಲ್ಲ. ಗ್ರಾಮ ಪಂಚಾಯಿತಿಗಳಿಗೆ ನಾಮನಿರ್ದೇಶನ ಮಾಡುವುದಕ್ಕೆ ಅವಕಾಶ ಇಲ್ಲ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಗುರಿತಿಸಿಕೊಂಡವರೇ ಹೆಚ್ಚು ಜನ ಗೆದ್ದಿದ್ದಾರೆ. ಈ ಭಯದಿಂದಾಗಿ ಬಿಜೆಪಿಯವರು ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡುತ್ತಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವರಾದ ಬಸವರಾಜ್ ರಾಯರಡ್ಡಿ, ಇಕ್ಬಾಲ್ ಅನ್ಸಾರಿ, ಸುರೇಶ ಭೂಮರಡ್ಡಿ,ಕೆ.ವಿರೂಪಾಕ್ಷ ಪ್ಪ, ಶಾಂತಣ್ಣ‌ ಮುದಗಲ್ ಸೇರಿದಂತೆ ಇತರರು ಇದ್ದರು.

ಬಿಜೆಪಿ ಸರ್ಕಾರ ಸತ್ತಿದೆ:

ವಲಸೆ ಕಾರ್ಮಿಕರಿಗೆ ಬಸ್, ರೈಲು ವ್ಯವಸ್ಥೆ ಮಾಡಿಲ್ಲ. ಊಟ ನೀಡಲಿಲ್ಲ. ಉದ್ಯೋಗ ಕೊಡಲಿಲ್ಲ. 6 ಲಕ್ಷಕ್ಕೂ ಹೆಚ್ಚು ಜನ ವಲಸೆ ಹೋಗಿದ್ದಾರೆ. ಹೀಗಾಗಿ ಪ್ರತಿಯೊಬ್ಬ. ವಲಸೆ ಕಾರ್ಮಿಕರಿಗೆ ₹ 10 ಸಾವಿರ ಕೊಡುವಂತೆ ತಿಳಿಸಿದ್ದೆ. ಆದರೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದರು.

Please follow and like us:
error