ರಾಜೇಂದ್ರ ಬಾಬು ನಿವೃತ್ತ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆತ್ಮೀಯ ಬಿಳ್ಕೋಡುಗೆ

ಕೊಪ್ಪಳ ನ. : ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹಿರಿಯ ಬೆರಳಚ್ಚುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜೇಂದ್ರಬಾಬು ಜ್ಞಾನಮೋಠೆರವರು ಇಂದು (ನವೆಂಬರ್.30) ವಯೋ ಸಹಜ ನಿವೃತ್ತಿಹೊಂದಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರದಂದು ಆತ್ಮೀಯವಾಗಿ ಬಿಳ್ಕೋಡಲಾಯಿತು.
ರಾಜೇಂದ್ರಬಾಬು ಜ್ಞಾನಮೋಠೆರವರು ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಳೆದ 24 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ರಾಜೇಂದ್ರ ಬಾಬು ಬಹಳ, ಸಹಾಯಹಸ್ತದ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಯಾವಾಗಲು ಚಿರಸ್ಮರಣಿಯವಾಗಿರಲಿ ಎಂಬುದು ಎಲ್ಲರ ಆಶಯ.
ಇಂದು (ನ.30) ವಯೋ ಸಹಜ ನಿವೃತ್ತಿ ಹೊಂದಿದ ಪ್ರಯುಕ್ತ ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ  ಬಿಳ್ಕೋಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.  ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಭ್ರಷ್ಟಾಚಾರ ನಿಗ್ರಹ ದಳ ಡಿ.ವೈ.ಎಸ್.ಪಿ ಎಸ್. ಉಜ್ಜೇನಕೊಪ್ಪ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರ, ನಿವೃತ್ತ ಪ್ರಾಶುಂಪಾಲರಾದ ಸಿ.ವಿ. ಜಡಿಯವರ, ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಸೇರಿದಂತೆ ಜಾನಪದ ಕಾಲವಿದರು ಹಾಗೂ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದು, ರಾಜೇಂದ್ರಬಾಬು ಹಾಗೂ ಅವರ ಪತ್ನಿ ರತ್ನಾಬಾಯಿರವರಿಗೆ ಸನ್ಮಾನಿಸುವುದರ ಮೂಲಕ ಆತ್ಮೀಯವಾಗಿ ಬಿಳ್ಕೋಕೊಟ್ಟರು. ಬಾಬುರವರ ಕುಟುಂಬ ವರ್ಗದವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Please follow and like us:
error