ರಾಜಶೇಖರ ಹಿಟ್ನಾಳ ಗೆಲುವು ಖಚಿತ – ವೆಂಕಟರಾವ್ ನಾಡಗೌಡ

ಕೊಪ್ಪಳ : ಕೋಮುವಾದಿ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ರಾಜ್ಯದಲ್ಲಿ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿದೆ. ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವು ಖಚಿತ ಎಂದು ಸಚಿವ ಜೆಡಿಎಸ್ ಹಿರಿಯ ನಾಯಕ ವೆಂಟರಾವ್ ನಾಡಗೌಡ ಹೇಳಿದರು. ಕೊಪ್ಪಳದಲ್ಲಿ ನಡೆದ ಜಂಟಿ ಗೋಷ್ಠಿ ಯಲ್ಲಿ ಮಾತನಾಡಿದ ಅವರಯ

ಸಮ್ಮಿಶ್ರ ಸರ್ಕಾರವನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ನಡೆಸುತ್ತಿದ್ದೇವೆ ಈಗಾಗಾಲೇ ಎರಡು ಬಜೆಟ್ ನ್ನು ಮಂಡಿಸಿದ್ದೇವೆ ನಮ್ಮ ಮೈತ್ರಿ ಸರ್ಕಾರದ ರಾಷ್ಟ್ರೀಯ ಪಕ್ಷದ ನಾಯಕರು ಚರ್ಚೆ ಮಾಡಿ ಲೋಕಸಭೆ ಚುನಾವಣೆ ಎದುರಿಸುತ್ತಿದ್ದೇವೆ

ನಮ್ಮ ನಾಯಕರ ತೀರ್ಮಾನ ಪ್ರಕಾರ ರಾಜಶೇಖರ್ ಹಿಟ್ನಾಳ ಅವರಿಗೆ ಸಂಪೂರ್ಣ ಬೆಂಬಲವಿದೆ. ಸಣ್ಣ ಪುಟ್ಟ ಗೊಂದಲಗಳಿರುತ್ತವೆ ಅದನ್ನು ಸರಿಪಡಿಸುತ್ತಿವೆ. ಚುನಾವಣೆ ಪೂರ್ವವಾಗಿ ಮೊದಲ ಬಾರಿಗೆ ಒಟ್ಟಿಗೆ ಚುನಾವಣೆಗೆ ಹೋಗುತ್ತಿದ್ದೇವೆ. ಳಇದು ಕರ್ನಾಟಕದಲ್ಲಿ ಮೊತ್ತಮೊದಲ ಪ್ರಯೋಗ

ಕೋಮುವಾದ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಜೆಡಿಎಸ್ ಕೈಜೋಡಿಸಿದ್ದೇವೆ

ಕಾಂಗ್ರೆಸ್ ಅಭ್ಯರ್ಥಿ ಇರುವಲ್ಲಿ ನಮ್ಮ‌ಜೆಡಿಎಸ್ ನ ಬೆಂಬಲವಿರುತ್ತದೆ. ಜೆಡಿಎಸ್ ಅಭ್ಯರ್ಥಿ ಇರುವಲ್ಲಿ ಕಾಂಗ್ರೆಸ್ ಬೆಂಬಲ ಇರುತ್ತದೆ.

ಐಟಿ ದಾಳಿ ನಡೆದ ಎಲ್ಲರೂ ಜೈಲಿಗೆ ಹೋಗುತ್ತಾರೆ ಯಡಿಯೂರಪ್ಪ ಮಾತಿಗೆ ಪ್ರತಿಕ್ರಿಯೆ ನೀಡಿದ ಸಚಿವ

ತಾವು ಜೈಲಿಗೆ ಹೋಗಿಬಂದಿದ್ದಾರೆ ಎಲ್ಲರೂ ಹೋಗಕೆ ಸಾಧ್ಯನಾ? ಎಲ್ಲವೂ ಕಾಮನೆ ಕಣ್ಣುಗಳಿಂದ ನೋಡದು ತಪ್ಪು. ಕಾನೂನು ಪ್ರಾಕರ ದಾಳಿ ಮಾಡುವುದನ್ನು ನಾವು ವಿರೋಧಿಸುವುದಿಲ್ಲ

ಇದು ರಾಜಕೀಯ ಪ್ರೇರಿತ ದಾಳಿ ಚುನಾವಣೆ ಸಂದರ್ಭದಲ್ಲಿ ದಾಳಿ ಮಾಡುವುದು ದಬ್ಬಾಳಿಕೆ ಐಟಿಯನ್ನು ಮೋದಿ ಅವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಅವರ ದಾಳಿಯಿಂದ ಯಾರು ಹೆದುರುವುದಿಲ್ಲ

ನಮ್ಮ‌ ಮೈತ್ರಿ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲಿ ಎಲ್ಲರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ. ಈಶ್ವರಪ್ಪನ ಜೊತೆ ಮಾತಾಡೋಕೆ ಆಗುವುದಿಲ್ಲ . ಅವರ ಹೇಳಿಕೆಗಳಿಗೆ ಉತ್ತರ ನೀಡುವುದಕ್ಕೆ ಆಗುವುದಿಲ್ಲ ನಮ್ಮ ಮೈತ್ರಿ ಸರ್ಕಾರ ಒಗ್ಗಟ್ಟಾಗಿ ಚರ್ಚೆ ಮಾಡಿ

ಕೆಲಸಮಾಡುತ್ತಿದ್ದೇವೆ. ಎಲ್ಲಾ ಜಿಲ್ಲೆಗಳಿಗೆ ಅನುಕೂಲವಾಗುವಂತ ಯೋಜನೆಗಳನ್ನು ಕುಮಾರಸ್ವಾಮಿ ನೀಡಿದ್ದಾರೆ . ಕಳೆದ ಬಜೆಟ್ ನಲ್ಲಿ ೨೦೦ ಕೋಟಿ ನೀಡಿದ್ದಾರೆ ಇನ್ನು ಹೆಚ್ಚಿನ ಅನುದಾನವನ್ನು ಕೇಳಿದ್ದೇವೆ ಅಂತ ತಿಳಿಸಿದರು

ಸುಮಲತರನ್ನು ಮಂಡ್ಯದಲ್ಲಿ ಗೆಲ್ಲಿಸುವುದಕ್ಕೆ ಆಗುತ್ತಾ? ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಲೋಕಸಭೆ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಮಾತನಾಡಿ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಮೈತ್ರಿ ಸರ್ಕಾರ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ ರಾಷ್ಟ್ರೀಯ ಹೆದ್ದಾರಗಳ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮನವಿ ಸಲ್ಲಿಸಲಾಗಿತ್ತು ೧೪ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ ಮನವಿ ಸಲ್ಲಿಸಲಾಗಿತ್ತು ಆದ್ರೆ ಇದನ್ನು ಒಂದು ಸಹ ಈಡೇರಿಸಲಿಲ್ಲ

Please follow and like us:
error