ರಹಿಮಾನವ್ವ ಕಲ್ಮನಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ

Koppal News ವೃತ್ತಿ ರಂಗಭೂಮಿಯ ಮೇರು ಕಲಾವಿದೆ ರಹಿಮಾನವ್ವ ಕಲ್ಮನಿ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದೆ‌ ಕರ್ನಾಟಕ ನಾಟಕ ಅಕಾಡೆಮಿವತಿಯಿಂದ. ೨೩ ಅಕ್ಟೋಬರ್ ಸಾಹಿತ್ಯ ಭವನ ಕೊಪ್ಪಳ, ಬೆಳಿಗ್ಗೆ ೧೦:೩೦ ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಲ್.ಬಿ‌ ‌ಶೇಖ್, ನಾಡೋಜ ಶ್ರೀಮತಿ ಸುಭದ್ರಮ್ಮ ಮನ್ಸೂರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತೋಂಟದಾರ್ಯಮಠದ ಡಾ.ಸಿದ್ದಲಿಂಗ ಮಹಾಸ್ವಾಮಿಗಳು, ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಸಾನಿದ್ಯವಹಿಸಲಿದ್ದಾರೆ‌ ಸಾಕ್ಷ್ಯಚಿತ್ರ ಬಿಡುಗಡೆ, ಪ್ರದರ್ಶನ, ಕೃತಿ ಬಿಡುಗಡೆ, ವಿಚಾರ ಗೋಷ್ಠಿಗಳು, ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಗಣೇಶ ಅಮೀನಗಡ್ , ಸೇರಿದಂತೆ ಇತರರು ಉಪಸ್ಥಿತಿ.

Please follow and like us:
error