ರಸ್ತೆ ಕಾಮಗಾರಿ ೪.೫ ಕೋಟಿ ಕಿಕ್ ಬ್ಯಾಕ್ ಹಣ ಪಡೆದವರ್ಯಾರು?- ಶಾಸಕ ರಾಘವೇಂದ್ರ ಹಿಟ್ನಾಳ ಪ್ರಶ್ನೆ

ಕೊಪ್ಪಳ :೪.೫ ಕೋಟಿ ರೂ ಕಿಕ್ ಬ್ಯಾಕ್ ಹಣ ಪಡೆದವರು ಯಾರು? ಅದರ ಬಗ್ಗೆ ತನಿಖೆಯಾಗಬೇಕು.. ಬಿಜೆಪಿಯ ಮುಖಂಡ ಹಾಲೇಶ್ ಕಂದಾರಿ ಇದರ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಶಾಸಕ ಸ್ಯಾಂಡ್ ಮಾಫಿಯಾದಲ್ಲಿದ್ದಾರೆ ಎಂದು ಸಂಸದ ಕರಡಿ ಸಂಗಣ್ಣ ಹೇಳ್ತಾ ಇದ್ದಾರೆ.ತಂದೆಯ ಸಮಾನ ಎಂದು ನಾವು ಗೌರವ ಕೊಡ್ತಾ ಇದ್ದೇವೆ. ಬಡವರು ನಿಯತ್ತಾಗಿ ದುಡಿದು ಬೆಳೆಯುತ್ತಿರುವುದು ಇವರಿಗೆ ಸಹಿಸಲಾಗುತ್ತಿಲ್ಲ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು. ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದರು.

ಕ್ಷೇತ್ರದಲ್ಲಿ ಈಗಾಗಲೆ ಅನೇಕ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿವೆ. ಕುಡಿಯುವ ಯೋಜನೆಗಳು ಟೆಂಡರ್ ಮುಗಿದು ಪ್ರಾರಂಭವಾಗಿವೆ. ನಗರೋತ್ಥಾನ ಯೋಜನೆಯಡಿ ಅನೇಕ ಯೋಜನೆಗಳು ಚಾಲ್ತಿಯಲ್ಲಿವೆ. ಈ ಹಿಂದಿನ ಶಾಸಕರು ಅವಧಿಯಲ್ಲಿ ಜಿಎಂಆರ್ ಕಂಪನಿಯವರಿಗೆ ನೀಡಿದ ಗುತ್ತಿಗೆಯಲ್ಲಿ ಅವ್ಯವಹಾರವಾಗಿದೆ. ಅನೇಕರಿಗೆ ಕಿಕ್ ಬ್ಯಾಕ್ ಹೋಗಿದೆ. ಹಗರಣ ಮುಚ್ಚಿಹಾಕಲು ಅವಸರವಾಗಿ ಭೂಮಿಪೂಜೆ ನೆರವೇರಿಸಿದ್ದಾರೆ. ನಾವು ಯಾವುದೇ ಮರಳು ಮಾಫಿಯಾದಲ್ಲಿ ತೊಡಗಿಲ್ಲ. ಬಿಜೆಪಿಯವರು ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಸಿಂಗಟಾಲೂರು, ಬಹಾದ್ದೂರಬಂಡಿ, ಕೊಪ್ಪಳ ಏತನೀರಾವರಿ ಯೋಜನೆಗಳಿಗೆ ಅನುದಾನ ಮಂಜೂರಾತಿ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಬರುವ ಚುನಾವಣೆಯಲ್ಲಿ ನಮಗೆ ಗೆಲುವು ಶತಸಿದ್ಧ. ನಾಲ್ಕುವರೆ ವರ್ಷದಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಯಾವ ಸರ್ಕಾರದ ಅವಧಿಯಲ್ಲೂ ಆಗಿಲ್ಲ. ನಮ್ಮ ವಿರುದ್ಧ ತೇಜೋವಧೆ ಮಾಡುವುದನ್ನು ಬಿಜೆಪಿಯವರು ನಿಲ್ಲಿಸಬೇಕು ಎಂದು ಹೇಳಿದರು.

ಹಗರಣವನ್ನು ಮುಚ್ಚಿ ಹಾಕಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ.ಅಭಿವೃದ್ಧಿ ಕೆಲಸಗಳು ಕಾಣಿಸುತ್ತಿಲ್ಲ ಇವರಿಗೆ ಎಂದು ಬಿಜೆಪಿ ನಾಯಕರಿಗೆ ತರಾಟೆಗೆ ತೆಗೆದುಕೊಂಡ ಶಾಸಕ ರಾಘವೇಂದ್ರ ಹಿಟ್ನಾಳ..