ರಚನಾತ್ಮಕ ಆಂದೋಲನಕ್ಕೆ ಮೊಬೈಲ್ ಆಪ್ ಬಳಕೆ : ಆಪ್ ಬಿಡುಗಡೆ

ತಜ್ಞರ, ಪರಿಣಿತರ ಸಹಾಯದೊಂದಿಗೆ, ಯುವಜನರೇ ರೂಪಿಸುತ್ತಿರುವ ರಚನಾತ್ಮಕ ಆಂದೋಲನವಿದುಕರ್ನಾಟಕದಲ್ಲಿ ೫೦ ಲಕ್ಷ ಉದ್ಯೋಗಗಳನ್ನು ಖಾತರಿಪಡಿಸಲು ನಡೆಯುತ್ತಿರುವ ಹೊಸ ಬಗೆಯ ಚಳವಳಿಫೆ. ೪ಕ್ಕೆ ಬೆಂಗಳೂರಿನಲ್ಲಿ ೧ ಲಕ್ಷ ನೋಂದಾಯಿತ ಯುವಜನರ ’ಯುವ ಅಧಿವೇಶನ Youth Assembly’ಉದ್ಯೋಗಗಳ ಕುರಿತ ಯಾವುದೇ ಮಾಹಿತಿಗಾಗಿ ಈ ಆಪ್ ಸಹಾಯಕಆಂದೋಲನದ ಭಾಗವಾಗಲು ಕೊಡಿ ಮಿಸ್ ಕಾಲ್: ೮೨೮೭೨೧೪೪೨೨
ಸಮಯ: ನವೆಂಬರ್ ೩ರ ೨೦೧೭ರ ಶುಕ್ರವಾರ, ಸ್ಥಳ:
’ಉದ್ಯೋಗಕ್ಕಾಗಿ ಯುವಜನರು-ಕರ್ನಾಟಕ’ವು ಸುಭದ್ರ ಮತ್ತು ಘನತೆಯ ಉದ್ಯೋಗಾವಕಾಶಗಳಿಗಾಗಿ ಪ್ರಯತ್ನಶೀಲರಾಗಿರುವ ಯುವಜನರ ಒಂದು ಆಂದೋಲನ. ಭಾರತದ ಈಗಿನ ಅಂಕಿ ಸಂಖ್ಯೆಗಳ ಪ್ರಕಾರ ಪ್ರತೀ ವರ್ಷ ೧.೨ ಕೋಟಿ ಯುವಜನರು ಶಿಕ್ಷಣ ಮುಗಿಸಿ / ಶಿಕ್ಷಣ ನಿಲ್ಲಿಸಿ ಉದ್ಯೋಗಾಕಾಂಕ್ಷಿಗಳಾಗಿ ಉದ್ಯೋಗದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ನಿರುದ್ಯೋಗಿಗಳ ಪಡೆಗೆ ಹೊಸದಾಗಿ ಸೇರ್ಪಡೆಯಾಗುತ್ತಿದ್ದಾರೆ. ಹೀಗೆ ನಿರುದ್ಯೋಗಿಗಳ/ಅರೆ ಉದ್ಯೋಗಿಗಳ ಸಂಖ್ಯೆ ನಮ್ಮ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಒಂದು ಅಂದಾಜಿನ ಪ್ರಕಾರ ೨೦೨೫ರ ಹೊತ್ತಿಗೆ ದೇಶದ ಸರಾಸರಿ ವಯೋಮಾನ ೨೮ ವರ್ಷಕ್ಕೆ ಇಳಿಯಲಿದೆ. ಅಂದರೆ ಆ ಪ್ರಮಾಣದಲ್ಲಿ ಯುವಜನತೆ ನಮ್ಮಲ್ಲಿ ಇರುತ್ತಾರೆ. ಈಗಿನ ಉದ್ಯೋಗಾವಕಾಶಗಳ ಪರಿಸ್ಥಿತಿಯೇ ಹೀಗಾದರೆ, ಮುಂದಿನ ದಿನಗಳನ್ನು

ಊಹಿಸುವುದೂ ಕಷ್ಟ!ಬೃಹತ್ ನಿರುದ್ಯೋಗದ ಟೈಂಬಾಂಬಿನ ಮೇಲೆ ಕೂತಿರುವ ಈ ದೇಶದ ಸರ್ಕಾರಗಳಾಗಲೀ, ಅಧಿಕಾರಕ್ಕಾಗಿ ಗುದ್ದಾಡುವ ರಾಜಕೀಯ ಪಕ್ಷಗಳಾಗಲೀ ಯಾವುವೂ ಈ ಸಮಸ್ಯೆಯ ಪರಿಹಾರಕ್ಕೆ ಪರಿಣಾಮಕಾರಿಯಾಗಿ ಏನೂ ಮಾಡುತ್ತಿಲ್ಲ. ಆದ್ದರಿಂದ, ಇದಕ್ಕಾಗಿ ಯುವಜನರಾದ ನಾವುಗಳೇ ಕ್ರಿಯಾಶೀಲರಾಗಿ ಏನಾದರೂ ಮಾಡಬೇಕಾದ ಸಂದರ್ಭ ಈಗ ಬಂದಿದೆ. ಅದಕ್ಕಾಗಿ ಪಕ್ಷಾತೀತವಾದ ಒಂದು ಆಂದೋಲನವನ್ನು ಆರಂಭಿಸುತ್ತಿದ್ದೇವೆ. ಇದು ನಿರುದ್ಯೋಗದ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಬಯಸುವ ಎಲ್ಲರಿಗೂ ಮುಕ್ತವಾದ ಒಂದು ವೇದಿಕೆ.ಸರ್ಕಾರದ ನೀತಿಗಳು ಬದಲಾಗದಿದ್ದರೆ ಉದ್ಯೋಗ ಸೃಷ್ಟಿ ಹೆಚ್ಚಾಗುವುದಿಲ್ಲ ಎಂಬುದು ಸ್ಪಷ್ಟ. ಆದರೆ, ನಾವು ಕೇವಲ ದೂರುವ ಕೆಲಸ ಮಾಡುವುದಿಲ್ಲ. ’ಶೂನ್ಯ ನಿರುದ್ಯೋಗ ಮಾದರಿ’ ಎಂಬ ಪರ್ಯಾಯ ಯೋಜನೆಯನ್ನು ಸರ್ಕಾರಗಳ ಮುಂದೆ ಇಡುತ್ತಿದ್ದೇವೆ. ಕರ್ನಾಟಕಕ್ಕೆ ತುರ್ತಾಗಿ ೫೦ ಲಕ್ಷ ಸುಭದ್ರ ಉದ್ಯೋಗಗಳ ಸೃಷ್ಟಿಯ ಅಗತ್ಯವಿದೆ. ಅದಕ್ಕಾಗಿ ಕೆಲವು ನಿರ್ದಿಷ್ಟ ಹಕ್ಕೊತ್ತಾಯಗಳನ್ನೂ ನಾವು ಮುಂದಿಡುತ್ತಿದ್ದೇವೆ. ಅದೇ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಉದ್ಯೋಗ ಸೃಷ್ಟಿ ಮಾಡಬಹುದೆಂಬುದರ ಕುರಿತು ತಜ್ಞರ ನೆರವಿನೊಂದಿಗೆ ಯೋಜನೆಯನ್ನು ’ಯುವ ಪ್ರಣಾಳಿಕೆ’ಯ ಮುಖಾಂತರ ಮುಂದಿಡಲಿದ್ದೇವೆ. ಈಗಾಗಲೇ ೧೮ ಜಿಲ್ಲೆಗಳಲ್ಲಿ ಜಿಲ್ಲಾ ತಂಡಗಳು ರಚನೆಯಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಸದ್ಯದಲ್ಲೇ ಸಮಿತಿಗಳು ರಚನೆಯಾಗಲಿವೆ. ರಾಜ್ಯದ ಕನಿಷ್ಠ ೧೦೦ ವಿಧಾನಸಭಾ ಕ್ಷೇತ್ರಗಳಲ್ಲಿ, ತಲಾ ೧೦,೦೦೦ ಯುವಜನರನ್ನು ತಲುಪುವುದರ ಮುಖಾಂತರ ’ಉದ್ಯೋಗಕ್ಕೇ ಓಟು’ ಎಂದು ರಾಜಕೀಯ ಪಕ್ಷಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಲಿದ್ದೇವೆ.ನಮ್ಮ ವೇದಿಕೆಯಿಂದ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ಮಾಹಿತಿ ಮತ್ತು ಉದ್ಯೋಗ ಆಂದೋಲನದ ಕುರಿತ ಮಾಹಿತಿಗಳನ್ನು ನೀಡುವ ಮೊಬೈಲ್ ಆಪ್ ಒಂದನ್ನು ತಯಾರು ಮಾಡಿದ್ದು ಅದರ ಬಿಡುಗಡೆ ಇಂದು ನಡೆಯುತ್ತಿದೆ. ಇದೊಂದು ಉಚಿತ ಆಪ್ ಆಗಿದ್ದು ಕೇವಲ ೩.೫ ಎಂ.ಬಿ.ಯಷ್ಟು ಚಿಕ್ಕದು. ಇದನ್ನು ಡೌನ್‌ಲೋಡ್ ಮಾಡಿಕೊಂಡವರು, ಸದಸ್ಯರೂ ಆಗಬಹುದು, ಕಾರ್ಯಕರ್ತರಾಗಿ ಕೆಲಸ ಮಾಡಲೂ ಮುಂದಾಗಬಹುದು. ಹಾಗೇನೂ ಇಲ್ಲದೇ, ಉದ್ಯೋಗಗಳ ಮಾಹಿತಿಯನ್ನು ಪಡೆಯಬೇಕೆಂದರೆ ಅದಕ್ಕೂ ಅವಕಾಶವಿದೆ. ಉದ್ಯೋಗಗಳು, ಸ್ವಯಂ ಉದ್ಯೋಗಗಳು, ಗುತ್ತಿಗೆ/ದಿನಗೂಲಿ ನೌಕರರ-ಕಾರ್ಮಿಕರ ಸಮಸ್ಯೆಗಳು, ಸ್ಕಾಲರ್‌ಶಿಪ್ ಹಾಗೂ ಉದ್ಯೋಗಾಂದೋಲನದ ಮಾಹಿತಿ ಎಲ್ಲವೂ ಈ ಆಪ್‌ನ ಮೂಲಕ ಲಭ್ಯ. ಆಪ್‌ನ ಲಿಂಕ್ ಈ ರೀತಿ ಇರುತ್ತದೆ. https://play.google.com/store/apps/details?id=com.jobemployment.karnatakaemployment. ಇದರ ಮೂಲಕ ನೇರವಾಗಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅದಲ್ಲದೇ ಆಂದೋಲನದ ಭಾಗವಾಗಲು ಅಥವಾ ಮೇಲಿನ ಲಿಂಕ್ ಪಡೆಯಲು ೮೨೮೭೨೧೪೪೨೨ ಈ ನಂಬರ್‌ಗೆ ಮಿಸ್ ಕಾಲ್ ಕೊಡಬಹುದು.ಈ ಅಭಿಯಾನದ ವಿಚಾರವನ್ನು ಸಾರ್ವಜನಿಕರಿಗೆ ತಲುಪಿಸಬೇಕು ಮತ್ತು ಈ ವಿವರಗಳನ್ನು ಸಂಪೂರ್ಣವಾಗಿ ಪ್ರಕಟಿಸಬೇಕೆಂದು ಈ ಮೂಲಕ ಕೋರುತ್ತೇವೆ. ಪತ್ರಿಕಾಗೋಷ್ಠಿಯಲ್ಲಿ ಉದ್ಯೋಗಕ್ಕಾಗಿ ಯುವಜನರು ವೇದಿಕೆಯ ಮರಿಸ್ವಾಮಿ, ಚಿದಾನಂದ್, ಗುರುಬಸವ, ತಿಮ್ಮರಾಜು, ಶಿವು ಮತ್ತು ದೇವರಾಜು ಭಾಗವಹಿಸಿದ್ದರು.

Please follow and like us:
error