“ರಕ್ತರಾತ್ರಿ” ಪೌರಾಣಿಕ ನಾಟಕ ಯಶಸ್ವಿ ಪ್ರದರ್ಶನ

ಗಂಗಾವತಿ:   ಗಂಗಾವತಿಯ ಪಬ್ಲಿಕ್ ಕ್ಲಬ್ ಆವರಣದಲ್ಲಿ ಸ್ನೇಹಜೀವಿ ನಾಗರಾಜ ಶಿರವಾರ್ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ ಕಲಾಸಂಘ ಹಾಗೂ ಹೆಜ್ಜೆಗೆಜ್ಜೆ ಕಲಾಸಂಘ ಗಂಗಾವತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರದರ್ಶಿಸಲ್ಪಟ್ಟ “ರಕ್ತರಾತ್ರಿ” ಪೌರಾಣಿಕ ನಾಟಕ ಯಶಸ್ವಿಯಾಯಿತು. ಈ ನಾಟಕದಲ್ಲಿ ಚಿದಾನಂದಪ್ಪ ರಾರಾಯಿ ಗವಾಯಿಗಳು ಕೃಷ್ಣನ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿದರು. ಅದೇ ತೆರನಾಗಿ ಪ್ರತಿಯೊಬ್ಬ ಪಾತ್ರಧಾರಿಯೂ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾದರು. ಶಕುನಿ ಪಾತ್ರದಲ್ಲಿ ಪತ್ರಕರ್ತ ನಾಗರಾಜ ಇಂಗಳಗಿ, ಅಶ್ವತ್ಥಾಮ ಪಾತ್ರದಲ್ಲಿ ಮಹಾಬಳೇಶ್ವರ ಹಾಸಿನಾಳ, ಭೀಮನ ಪಾತ್ರದಲ್ಲಿ ಚಿದಾನಂದಪ್ಪ ವೀರಗಂಟಿ, ದುರ್ಯೋಧನನ ಪಾತ್ರದಲ್ಲಿ ಅಮರೇಶ ಬಳ್ಳಾರಿ, ಅರ್ಜುನನ ಪಾತ್ರದಲ್ಲಿ ನಂಜುಂಡ ಐಲಿ, ಶಿವನ ಪಾತ್ರದಲ್ಲಿ ಐಲಿ ಚಂದ್ರಪ್ಪ, ಕರ್ಣನ ಪಾತ್ರದಲ್ಲಿ ಮಾರುತಿ ಬಂಡಿ, ಕಲಿ ಮತ್ತು ಗಂಧರ್ವ ಪಾತ್ರದಲ್ಲಿ ವಿರುಪಾಕ್ಷಪ್ಪ ಶಿರವಾರ, ಧರ್ಮರಾಯನ ಪಾತ್ರದಲ್ಲಿ ವಿಶ್ವನಾಥ ಕುರುಗೋಡ, ಹಾಸ್ಯ ಪಾತ್ರದಲ್ಲಿ ಶಾಂತಮೂರ್ತಿ ನವಲಿಪಕ್ಕ, ಶಂಖದತ್ತ ಪಾತ್ರದಲ್ಲಿ ಮಂಜಪ್ಪ ಗಂಟಿ, ದುರ್ಜಯ ಪಾತ್ರದಲ್ಲಿ ಸಂಜಿತ್ ಇಂಗಳಗಿ, ಸ್ತ್ರೀಪಾತ್ರಧಾರಿಗಳಾಗಿ ವೀಣಾ ಆದೋನಿ, ರೇಣುಕಾ ಬಾವಳ್ಳಿ, ಜಯಶ್ರೀ ಸಿಂಧನೂರು, ಮೀನಾಕ್ಷಿ ಸಿಂಧನೂರು, ವಿಶೇಷವಾಗಿ ಪಾರ್ವತಿ ಪಾತ್ರದಲ್ಲಿ ಚಿನ್ಮಯಿ ನಾಗರಾಜ ಶಿರವಾರ ಇನ್ನಿತರರು ಅಭಿನಯಿಸಿದರು. ನಾಟಕದ ನಿರ್ದೇಶನವನ್ನು ವಿರುಪಾಕ್ಷಪ್ಪ ಶಿರವಾರ ಮಾಡಿದ್ದರು. ಕಥಾಸಂಚಾಲಕರಾಗಿ ಪಂಪಯ್ಯಸ್ವಾಮಿ, ಐಲಿ ಬಸವರಾಜ ನಿರ್ವಹಿಸಿದರು. ಸಂಗೀತವನ್ನು ವಿರೇಶ ಕಲ್ಮಠ ಗಂಗಾವತಿ, ಶೇಖರಪ್ಪ ಮಂಗನಳ್ಳಿ, ಯಮನೂರಪ್ಪ ಗಿಣಿಗೇರ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕಲಾವಿದರ ವೇದಿಕೆಯ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು. ನಾಟಕವನ್ನು ಯಶಸ್ವಿಗೊಳಿಸಿದ ಎಲ್ಲಾ ಕಲಾಭಿಮಾನಿಗಳಿಗೆ ಸಂಘದ ಗೌರವಾಧ್ಯಕ್ಷರಾದ ಲಕ್ಷ್ಮಣಪ್ಪ ಶಿರವಾರ ಹಾಗೂ ಸುರೇಶ ಸಿಂಗನಾಳ ಅಬಿನಂದನೆಗಳನ್ನು ಸಲ್ಲಿಸಿದ್ದಾರೆ.

Please follow and like us:
error