ರಂಗಭೂಮಿ ಕಲೆಯನ್ನು ಪ್ರೋತ್ಸಾಹಿಸಿ-ಗವಿಸಿದ್ದಪ್ಪ ಕರಡಿ


ಕೊಪ್ಪಳ : ಸಿನೆಮಾ-ಟಿ.ವಿ ಹಾವಳಿಯಿಂದ ಇಂದು ರಂಗಭೂಮಿ ಕಲೆಯು ನಶಿಸುತ್ತಿದ್ದು ಉತ್ತರ ಕರ್ನಾಟಕದ ಗಂಡು ಕಲೆ ಎಂದು ಹೆಸರಾಗಿರುವ ರಂಗಭೂಮಿ ಕಲೆ ಪ್ರದರ್ಶನದಿಂದ ಜಾತಿ-ಭೇದ ಭಾವವಿಲ್ಲದೇ ಗ್ರಾಮೀಣ ಭಾಗದಲ್ಲಿ ಜನತೆಯಲ್ಲಿ ಉತ್ತಮ ಬಾಂಧವ್ಯವನ್ನು ಮೂಡಿಸುತ್ತದೆ ಇಂತಹ ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ ಹೇಳಿದರು.
ಅವರು ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಶ್ರೀಮಾರುತೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಮಗ ಹೋದರೂ ಮಾಂಗಲ್ಯ ಬೇಕು ಎಂಬ ನಾಟಕಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು ಇಂದು ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಕಲೆಯನ್ನು ಜನತೆ ಹೆಚ್ಚು ಇಷ್ಟ ಪಡುತ್ತಾರೆ ರಂಗಭೂಮಿಯಲ್ಲಿ ಕಲಾವಿದರು ಪಾತ್ರಗಳನ್ನು ನೈಜವಾಗಿ ಅಭಿನಯಿಸಿ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ, ಇಂತಹ ಕಲೆಯನ್ನು ನಾವೆಲ್ಲ ಉಳಿಸಿ ಬೆಳೆಸಿದಾಗ ಅದು ಎಂದೆಂದಿಗೂ ಜೀವಂತವಾಗಿರುತ್ತದೆ, ಅದರಲ್ಲಿ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಹಬ್ಬ-ಉತ್ಸವ-ಜಾತ್ರೆಗಳಿಗಾಗಿ ನಾಟಕಗಳ ಪ್ರದರ್ಶನವಿರುತ್ತದೆ,ಇಂಥಹ ರಂಗಭೂಮಿಯ ಗಂಡು ಕಲೆಯನ್ನು ಉಳಿಸಿ ಬೆಳೆಸೋಣ ಅಂದಾಗ ಇಂತಹ ಕಲೆಯನ್ನು ನಾವೆಲ್ಲ ಉಳಿಸಿ ಬೆಳೆಸಿದಾಗ ಅದು ಎಂದೆಂದಿಗೂ ಜೀವಂತವಾಗಿರುತ್ತದೆ ಈ ಕಲೆ ಮುಂದಿನ ಪೀಳಿಗೆಗೆ ಕೊಡುಗೆಯಾಗಿರುತ್ತದೆ ಎಂದರು
ಈ ಸಂದರ್ಭದಲ್ಲಿ ಗಾ.್ರಪಂ ಅಧ್ಯಕ್ಷರಾದ ಮಾರುತೆಪ್ಪ ಸಂಗಟಿ, ಮುಖಂಡರಾದ ತೋಟಪ್ಪ ಕಾಮನೂರು ಶಿವಣ್ಣ ಚರಾರಿ, ಹನುಮಂತಪ್ಪ ಬೀಡನಾಳ, ತಾಲೂಕಾ ಕಲಾವಿದರ ಸಂಘದ ಅಧ್ಯಕ್ಷ ಕೊಟ್ರಯ್ಯ ಹುಲಿಗಿ ದ್ಯಾಮಣ್ಣ ಮ್ಯಾದನೇರಿ, ಯಮನೂರಪ್ಪ ಬಗನಾಳ, ಭರಮರೆಡ್ಡಿ .ಮತ್ತಿತರರು ಉಪಸ್ಥಿತರಿದ್ದರು

Please follow and like us:
error