fbpx

ರಂಗಭೂಮಿ ಕನಸು ಉತ್ಪತ್ತಿಯ ತಂತು. ವಿಠ್ಠಪ್ಪ ಗೋರಂಟ್ಲಿ


ಕೊಪ್ಪಳ೨೧; ಮನುಷ್ಯನಿಗೆ ಅಲೋಚಿಸುವ ಶಕ್ತಿ ಬರುವುದೇ ಕನಸು ಕಲ್ಪನೆಯ ಮೂಲಕ ರಂಗಭೂಮಿಯ ವಾಸ್ತವಿಕ ಸತ್ಯಗಳನ್ನು ತಿಳಿಸುವ ಉತ್ಪತ್ತಿಯ ತಂತು ಎಂದು ವಿಠ್ಠಪ್ಪ ಗೋರಂಟ್ಲಿಯವರು ಭಾಗ್ಯನಗರದ ಪಟ್ಟಣ ಪಂಚಾಯತಿ ಬಯಲು ರಂಗ ಮಂದಿರದಲ್ಲಿ ಹಾಲ್ಕುರಿಕೆ ಡ್ರಾಮಾ ಸ್ಕೂಲಿನಿಂದ ನಡೆದ ನಾಟಕ ಪ್ರದರ್ಶನ ಮಕ್ಕಳ ನೃತ್ಯ ರೂಪಕ ಹಾಗೂ ಹಾಲ್ಕುರಿಕೆ ರಂಗ ಚೇತನ ಪುರಸ್ಕಾರ ಕಾರ್ಯವನ್ನು ಉದ್ಘಾಟಿಸಿ ಮಾತನಾಡುತ್ತಾ ಹಳೆಯ ಪರಂಪರೆಯ ರಂಗ ಭೂಮಿಯ ಜೊತೆಗೆ ಆಧುನಿಕ ರಂಗ ತಂತ್ರಗಳನ್ನು ಅಳವಡಿಸಿಕೊಳ್ಳ ಬೇಕಾಗಿದೆ ಎಂದರು. ಆಶಯ ನುಡಿಗಳನ್ನಾಡಿ ಹಾಲ್ಕುರಿಕೆ ಶಿವಶಂಕರ ಅತೀಯಾದ ತಂತ್ರಜ್ಞಾನದ ಬಳಕೆಯಿಂದ ಇಂದು ಜನರು ವಿಷಣತೆ ಒಳಗಾಗಿದ್ದಾರೆ. ಬದುಕುವ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ ಆದ್ದರಿಂದ ನಕ್ಕಳಿಗೆ, ಯುವಕರಿಗೆ ಸಾಹಿತ್ಯ ಸಾಂಸ್ಕೃತಿಕ ರಂಗಭೂಮಿ ನಂಟನ್ನು ಬೆಳಸಿ ಅದರಲ್ಲಿ ದೃಢತೆಯನ್ನು ತರಬೇಕಾಗಿದೆ ಎಂದರು ಇದೆ ಸಂದರ್ಭದಲ್ಲಿ ವಿಠ್ಠಪ್ಪ ಗೋರಂಟ್ಲಿ, ವಿರಣ್ಣ ಹುರಕಡ್ಲಿ, ಶ್ರೀಮತಿ ಕೃಷ್ಣಾಬಾಯಿ ಕಾಟವಾ, ಯಮನಪ್ಪ ಜಾಲಗಾರ ಗಿಣಗೇರಾ, ಬದರಿ ಪೂರೋಹಿತ ಇವರುಗಳಿಗೆ ಹಾಲ್ಕುರಿಕೆ ರಂಗ ಪುರಸ್ಕಾರ ಮಾಡಲಾಯಿತು. ಕಾರ್ಯಕ್ರಮದ ನಂತರ ಹಾಲ್ಕುರಿಕೆ ಡ್ರಾಮಾ ಸ್ಕೂಲಿನ ರಂಗ ವಿದ್ಯಾರ್ಥಿಗಳಿಂದ ಸಮಕಾಲೀನ ನೃತ್ಯ ರೂಪಕ ಪ್ರಸರ್ಶನ ನಂತರ ಹಾಲ್ಕುರಿಕೆ ಡ್ರಾಮ ಸ್ಕೂಲಿನ ನಟರಿಂದ ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ರಚನೆ ಮತ್ತು ನಿರ್ದೇಶನದ ನಾವ್ಯಾಕೆ ಹಿಂಗಿದ್ದಿವಿ ನಾಟಕವನ್ನು ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಏಕನಾಥಪ್ಪ ದೇವದುರ್ಗ ಹಿರಿಯ ರಂಗಕರ್ಮಿಗಳು, ಶ್ರೀ ರಾಮು ಕಾಟವಾ ಸಮಾಜ ಸೇವಕರು, ಶ್ರೀಮತಿ ಕವಿತಾ ಚಳಮರದ ಉಪಾಧ್ಯಕ್ಷರು ಪಟ್ಟಣ ಪಂಚಾಯತ, ಪಟ್ಟಣ ಪಂಚಾಯತ ಸದಸ್ಯರಾದ ಶ್ರೀ ನೀಲಕಂಠಪ್ಪ ಪಂಪಣ್ಣ ಮೈಲಿ, ಶ್ರೀಮತಿ ಮಂಜವ್ವ ಕೃಷ್ಣ ಮ್ಯಾಗಳಮನಿ, ತಾರಾಬಾಯಿ ಪಾಂಡುರಂಗಸಾ ಹಬೀಬ, ಶ್ರೀ ರಮೇಶ ಲಕ್ಷ್ಮಪ್ಪ ಹ್ಯಾಟಿ, ಶ್ರೀ ನೇಮಣ್ಣ ಬನ್ನಿಕಲ್ಲಪ್ಪ ಬಿದರೂರ, ಶ್ರೀಮತಿ ಯಶೋದಾ ಶಿವಶಂಕರಪ್ಪ ಮರಡಿ, ಶ್ರೀ ಸುರೇಶ ಭರಮಪ್ಪ ದರಗದಕಟ್ಟಿ, ಶ್ರೀಮತಿ ಶೇಖಮ್ಮ ಸೋಮಣ್ಣ ದೇವರಮನಿ, ಶ್ರೀ ಸುರೇಶ ಯಲ್ಲಪ್ಪ ಕವಲೂರ, ಶ್ರೀ ಯಮನಪ್ಪ ಕಬ್ಬೆರ ಜಿಲ್ಲಾ ಪಂಚಾಯತ ಅಧ್ಯಕ್ಷರು, ಶ್ರೀ ಪೀರಸಾಬ ಬೈರಾಪೂರ ಶ್ರೀ ಶಾರದ ಸಂಗೀತ ನಾಟಕ ಕಲಾವಿದ ಸಂಘ ಮುಖ್ಯಸ್ಥರು, ಶ್ರೀ ಪರಶುರಾಮ ಹುಬ್ಳಿ ಭಾಗ್ಯನಗರ ಇವರು ಕೂಡ ಉಪಸ್ಥಿತರಿದ್ದರು.

Please follow and like us:
error
error: Content is protected !!