ರಂಗಭೂಮಿಯು ನೈಜತೆಯ ಅನಾವರಣ ಮಾಡುತ್ತೆ- ಶಿ ಕಾ ಬ


ಕೊಪ್ಪಳ ೨೨- ರಂಗಭೂಮಿಯು ಮನುಷ್ಯನ ವ್ಯಕ್ತಿತ್ವವನ್ನು ಅನಾವರಣಗೊಳಿಸುವುದರ ಜೊತೆಗೆ ಸಮಾಜದ ಗುಣ ಸ್ವಭಾವಗಳನ್ನು ರಂಗದ ಮೇಲೆ ದಟ್ಟವಾಗಿ ಕಾಣಿಸುತ್ತದೆ ಎಂದು ಕವಿಗಳಾದ ಶಿ ಕಾ ಬಡೆಗೇರ್ ಇತ್ತಿಚೀಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಹಾಲ್ಕುರಿಕೆ ಡ್ರಾಮಾ ಸ್ಕೂಲ್ ಆಯೋಜಿಸಿದ ಒಂದು ತಿಂಗಳ ಮಕ್ಕಳ ಬೇಸಿಗೆ ಶಿಬಿರದ ಸಮರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನಗಳ ಕಾರ್ಯಕ್ರಮದಲ್ಲಿ ಕನ್ನಡ ರಂಗಭೂಮಿ ಕುರಿತ ಉಪನ್ಯಾಸದಲ್ಲಿ ಮಾತನಾಡುತ್ತಾ, ರಂಗಭೂಮಿಯು ಎಲ್ಲ ಕಾಲದಲ್ಲೂ ಸಮಾಜದ ಅಂಕು ಕೋರೆಗಳನ್ನು ತಿದ್ದುತ್ತಾ, ಸಮಾಜಿಕ ಅರಿವು ಮೂಡಿಸುತ್ತಾ ಬರುತ್ತಿದೆ ಎಂದರು . ಆಶಯ ನುಡಿಗಳನ್ನಾಡಿದ ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ರಂಗಭೂಮಿಯು ಆಯಾ ಕಾಲ ಘಟ್ಟಕ್ಕೆ ತಕ್ಕಂತೆ ಭಾಷೆಯನ್ನು ಪರಿಷ್ಕರಿಸುತ್ತದೆ, ಮನುಷ್ಯನ ಮನಸ್ಥಿತಿಯಂತೆ ಭಾಷೆಯ ನುಡಿಗಟ್ಟುಗಳನ್ನು ಸೃಜಿಸುತ್ತದೆ ಎಂದರು. ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿಯವರು ಸಮರೋಪ ನುಡಿಗಳನ್ನು ಆಡಿದ ಅವರು ಮನುಷ್ಯನ ನಿಜವಾದ ವಿಕಾಸ ರಂಗಭೂಮಿಯಿಂದ ಸಾಧ್ಯವಾಗುತ್ತದೆ, ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ರಂಗಭೂಮಿಯ ಪರಿಚಯ ಮಾಡುವುದರಿಂದ ಮಕ್ಕಳಲ್ಲಿ ಸೂಕ್ಷ್ಮತೆ ಬೆಳೆಯುತ್ತದೆ ಅಂತ ಕೆಲಸವನ್ನು ಹಾಲ್ಕುರಿಕೆ ಡ್ರಾಮಾ ಸ್ಕೂಲಿನ ಮೂಲಕ ಹಾಲ್ಕುರಿಕೆ ಶಿವಶಂಕರ್ ಮಾಡುತ್ತಿರುವುದು ಶ್ಲಾಘಿನೀಯ ಎಂದರು. ನಾಟಕ ಪ್ರದರ್ಶನಗಳ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಶ್ರೀ ಗವಿ ಸಿಧ್ದೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸಿದ್ದಲಿಂಗಪ್ಪ ಕೊಟ್ನೆಕಲ್ ಮಾತನಾಡಿ ರಂಗಭೂಮಿಯು ಹಿಂದಿನಿಂದಲ್ಲೂ ಮನುಕುಲದ ಪ್ರಗತಿಗೆ ಶ್ರಮಿಸುತ್ತಾ ಬರುತ್ತಿದೆ, ರಂಗಭೂಮಿಯನ್ನು ಶಾಲಾ ಕಾಲೇಜುಗಳಲ್ಲಿ ಅಳವಡಿಸಿ ಕೊಂಡರೆ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಅಂಶಗಳನ್ನು ಕಾಣಲು ಸಾಧ್ಯ ಎಂದರು. ಹಿರಿಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಮಾತನಾಡುತ್ತಾ ಮನುಷ್ಯನಲ್ಲಿ ರಂಗ ಪ್ರಜ್ಞೆ ಮೂಡಿದರೆ ಅವನಲ್ಲಿ ಹೋರಾಟ ಮನೋಭಾವ ಹುಟ್ಟುತ್ತದೆ, ಚಳುವಳಿ, ಕ್ರಾಂತಿಗೆ ನಾಂದಿ ಹಾಡುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಎ ಎಂ ಮದರಿ ಕನ್ನಡ ರಂಗಭೂಮಿಯು ಹಲವು ರೂಪಾಂತರ ತಳೆದು ಬೆಳೆದು ಬಂದಿದೆ. ಕಂಪನಿ ನಾಟಕಗಳಿಂದ ಹಿಡಿದು ಈಗಿನ ಅಧುನಿಕ ರಂಗಭೂಮಿಯ ವರೆಗೆ ರಂಗ ಕರ್ಮಿಗಳು ಪರಿಶ್ರಮದಿಂದ ಸಾಧ್ಯವಾಗಿದೆ ಎಂದರಲ್ಲದೆ ಐದಾರು ವರ್ಷಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಹಾಲ್ಕುರಿಕೆ ಥಿಯೇಟರ್ ಮೂಲಕ ತುಂಬ ಪರಿಶ್ರಮದಿಂದ ಹಾಲ್ಕುರಿಕೆ ಶಿವಶಂಕರ್ ಅಧುನಿಕ ರಂಗಭೂಮಿಯನ್ನು ಕಟ್ಟುತ್ತಿದ್ದಾರೆ ಅವರಿಗೆ ಹಣವುಳ್ಳವರು ಆರ್ಥಿಕ ಬೆಂಬಲವಾಗಿ ನಿಲ್ಲಬೇಕಾಗಿದೆ ಎಂದರು. ಕಾರ್ಯಕ್ರಮದ ನಂತರ ಜ್ಞಾನಪೀಠ ಪ್ರಶಸ್ತಿ ಪುರಾಸ್ಕೃತರಾದ ಚಂದ್ರಶೇಖರ ಕಂಬಾರರ ಅಲೀಬಾಬ ಮತ್ತು ನಲವತ್ತು ಮಂದಿ ಕಳ್ಳರು ಹಾಗು ಕಿಟ್ಟಿ ಕಥೆ ನಾಟಕಗಳನ್ನು ಹಾಲ್ಕುರಿಕೆ ಡ್ರಾಮಾ ಸ್ಕೂಲಿನ ಮಕ್ಕಳು ಅಭಿನಯಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪವಿತ್ರ ಅಡ್ಡೆದಾರ,ಸ್ವಾಗತವನ್ನು ಗೋವಿಂದ ಮೇಘರಾಜ್, ವಂದನಾರ್ಪಣೆಯನ್ನು ಪ್ರಮೋದಿನಿ ಅಡ್ಡದಾರ ಮಾಡಿದರೆ , ಪ್ರಶಾಂತ್ ಎಸ್ ಮದ್ಲಿ ಕಾರ್ಯಕ್ರಮವನ್ನು ಸಂಘಟಿಸಿದ್ದರು ಕಾರ್ಯಕ್ರಮದಲ್ಲಿ ಯಮನೂರಪ್ಪ ಜಾಲಗಾರ ದಾರವಾಡ, ಶೀಲಾ ಹಾಲ್ಕುರಿಕೆ. ಉಪಸ್ಥಿತರಿದ್ದರು.

Please follow and like us:
error

Related posts