ರಂಗಕರ್ಮಿ ಇಮಾಮಸಾಬ ಕೋಳೂರರಿಗೆ ೨೦೧೯ನೇ ಸಾಲಿನ ಸಿಜಿಕೆ ರಂಗ ಪುರಸ್ಕಾರ

Koppal : ಕನ್ನಡನೆಟ್.ಕಾಂ, ಕವಿಸಮೂಹ ಜೀವಯಾನ ಬಳಗ ಕೊಪ್ಪಳ ಕರ್ನಾಟಕ ಬೀದಿನಾಟಕ ಅಕಾಡೆಮಿ ಬೆಂಗಳೂರು ಆರ್ಟ ಫೌಂಡೇಶನ್ ಸಹಯೋಗದಲ್ಲಿ ಪ್ರತಿವರ್ಷ ಸಿಜಿಕೆ ಬೀದಿ ರಂಗ ದಿನಾಚರಣೆ ಆಚರಿಸಲಾಗುತ್ತಿದ್ದು. ಸಿಜಿಕೆ ಬೀದಿ ರಂಗದಿನಾಚರಣೆ ನಿಮಿತ್ಯ ನೀಡಲಾಗುವ ಸಿಜಿಕೆ ರಂಗಪುರಸ್ಕಾರಕ್ಕೆ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರದ ಹಿರಿಯ ರಂಗಕಲಾವಿದ ಇಮಾಮಸಾಬ ಕೋಳೂರು ಆಯ್ಕೆಯಾಗಿದ್ದಾರೆ.

ನಾಲ್ಕು ದಶಕಗಳ ಕಾಲ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳ ಮೂಲಕ ಕಲಾರಸಿಕರ ಪ್ರೀತಿಗೆ ಪಾತ್ರರಾಗಿರುವ ಇಮಾಮ್ ಸಾಬ ಕೋಳೂರರಿಗೆ ೨೭ರಂದು ನಡೆಯಲಿರುವ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಿನ್ನಾಳ ಗ್ರಾಮದ ಸೇವಾ ವಿದ್ಯಾಲಯದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪತ್ರಕರ್ತ ತಿಪ್ಪನಗೌಡ ಎಸ್.ಪಾಟೀಲ್, ರಂಗಕಲಾವಿದರಾದ ದಯಾನಂದ್ ಬೀಳಗಿ , ಹನುಮಂತಪ್ಪ ಬಾಗಲಕೋಟೆ, ದಾವಲಸಾಬ ಬೆಟಗೇರಿ ಮುಖ್ಯಶಿಕ್ಷಕರು ಹಾಗು ಬಸವರಾಜ್ ಚಿಲವಾಡಗಿ ಮುಖಂಡರು ಆಗಮಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಸಂಘಟಕರಾದ ಸಿರಾಜ್ ಬಿಸರಳ್ಳಿ, ಎಚ್.ವಿ.ರಾಜಬಕ್ಷಿ ಕೋರಿದ್ದಾರೆ.
Please follow and like us:
error