fbpx

ರಂಗಕರ್ಮಿ,ಸಂಘಟಕ ಎಂ.ಪರಶುರಾಮಪ್ರಿಯರಿಗೆ ಸಿಜೆಕೆ ರಂಗ ಪುರಸ್ಕಾರ

 

ಕೊಪ್ಪಳ : ಪ್ರತಿವರ್ಷದಂತೆ ಈ ವರ್ಷವೂ ಕರ್ನಾಟಕ ಬೀದಿ ನಾಟಕ ಅಕಾಡೆಮಿ ಬೆಂಗಳೂರು ಆರ್ಟ್ ಫೌಂಡೇಷನ್, ಅವಿರತ ಪುಸ್ತಕ ಹಾಗೂ ಕನ್ನಡನೆಟ್.ಕಾಂ ಕವಿಸಮೂಹ ಜೀವಯಾನ ಬಳಗ ಸಹಯೋಗದಲ್ಲಿ ಸಿಜಿಕೆ ಬೀದಿ ರಂಗದಿನಾಚರಣೆಯ ಅಂಗವಾಗಿ ನೀಡಲಾಗುವ ಸಿಜಿಕೆ ರಂಗಪುರಸ್ಕಾರಕ್ಕೆ ಗಂಗಾವತಿಯ ರಂಗಕರ್ಮಿ,ಸಂಘಟಕ,ನಟ ಪತ್ರಕರ್ತ ಎಂ.ಪರಶುರಾಮಪ್ರಿಯರನ್ನು ಆಯ್ಕೆ ಮಾಡಲಾಗಿದೆ.

ಸಿಜಿಕೆ ಜನ್ಮದಿನವಾದ ನಾಳೆ ೨೭ರಂದು ಕೊಪ್ಪಳದ ಬಹಾದ್ದೂರ ಬಂಡಿ ರಸ್ತೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸುಭಾಸ್ ಚಂದ್ರಭೋಸ್ ವೇದಿಕೆಯಲ್ಲಿ ಬೆಳಿಗ್ಗೆ ೧೦:೦೦ ಗಂಟೆಗೆ ನಡೆಯಲಿರುವ ಕಾಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಾಟಕಕಾರ, ಪರ್ತಕರ್ತ ಬಸವರಾಜ್ ಬಿನ್ನಾಳ, ನಾಟಕಕಾರ ಚಾಂದಪಾಷಾ ಕಿಲ್ಲೆದಾರ ಆಗಮಿಸಲಿದ್ದಾರೆ. ಆಸಕ್ತರು ಆಗಮಿಸಬೇಕೆಂದು ಸಂಘಟಕರಾದ ಸಿರಾಜ್ ಬಿಸರಳ್ಳಿ ಹಾಗು ಎಚ್.ವಿ.ರಾಜಾಬಕ್ಷಿ ಮತ್ತು ಬಳಗ ಕೋರಿದ್ದಾರೆ.

Please follow and like us:
error
error: Content is protected !!