ಯೋದ  ಹಾಲಪ್ಪ ಹೃದಯಾಘಾತದಿಂದ ನಿಧನ

ಹೊಳಲು ಗ್ರಾಮದ ಯೋದ  ಹಾಲಪ್ಪ ಹಾವನೂರು ಇವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಕಳೆದ 13ವರ್ಷದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ನಿನ್ನೆ ಸೋಮವಾರ ಮಧ್ಯಾಹ್ನ ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು. ಇಂದು ಬೆಳಿಗ್ಗೆ 6.15 ಕ್ಕೆ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಇನ್ನೂ ಎರಡು ವರ್ಷ 


ಸೇವೆಯಲ್ಲಿರುವಾಗಲೇ ನಿಧನರಾಗಿರುವುದು ತುಂಬಲಾಗದ ನಷ್ಟವಾಗಿದೆ. ಮೃತರಿಗೆ ಮೂರು ಜನ ಸಹೋದರರು ಹಾಗೂ ಒಬ್ಬ ಸಹೋದರಿ ಮತ್ತು ತಂದೆಯನ್ನು ಅಗಲಿದ್ದಾರೆ  ಸಂಜೆ ವೇಳೆಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ಹಾಗೂ ಗ್ರಾಮದ ಮಾಜಿ ಯೋಧ ದಾನಪ್ಪ ಮುದಿಗೇರಿ ತಿಳಿಸಿದ್ದಾರೆ.

Leave a Reply