ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಸಂಸದ ಕರಡಿ ಸಂಗಣ್ಣ ಕರೆ

ಕೊಪ್ಪಳ, ೨೪- ಭಾರತೀಯ ಸ್ಟೇಟ್ ಬ್ಯಾಂಕ್ ಕೊಪ್ಪಳ ಶಾಖೆಗಳ ವತಿಯಿಂದ ಶುಕ್ರವಾರದಂದು ಸಾಮಾಜಿಕ ಭದ್ರತಾ ಯೋಜನೆಗಳಾದ ಅಟಲ್ ಪೆನ್ಸನ್ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಗಳ ನೊಂದಣಿ ಕಾರ್ಯಕ್ರಮವನ್ನು ಸ್ಟೇಟ್ ಬ್ಯಾಂಕ್ ಶಾಖೆ ಹಳೆ ಜಿಲ್ಲಾ ಆಸ್ಪತ್ರೆ ಹತ್ತಿರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಕೊಪ್ಪಳ ಸಂಸದ ಸಂಗಣ್ಣ ಕರಡಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಮಾಜಿಕ ಭಧ್ರತಾ ಯೋಜನೆಗಳ ಬಗ್ಗೆ ವಿವರಿಸಿ ಅವುಗಳ ಸದುಪಯೋಗ ಪಡೆಯಲು ಸಾರ್ವಜನಿಕರಿಗೆ ವಿನಂತಿಸಿದರು. ಕಾರ್ಯಕ್ರಮದಲ್ಲಿ ಸ್ಟೇಟ್ ಬ್ಯಾಂಕ್ ಅಧಿಕಾರಿಗಳಾದ ಮಹಾಂತೇಶ ಕಾವಲದಂಡಿ, ಎಸ್.ವಿ.ಹುಲಿರಾಜ್, ಶ್ರೀಧರ್, ಎಲ್.ಎಸ್.ಪಾಟೀಲ್, ಕುಮಾರಿ ಶಿಲ್ಪಾ ಅಗಳಿ, ಬಾಬುರಾವ್, ರಾಜೇಶ ಮತ್ತು ಸಂಜೀವಿನಿ ವಿಕಾಸ ಸಂಸ್ಥೆಯ ಜಗದೀಶ ಕೆಂಬಾವಿಮಠ ಹಾಗೂ ಎಸ್‌ಬಿಐ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Please follow and like us:
error