ಯುವ ಪೀಳಿಗೆಗೆ ಸಂಸ್ಕಾರ ಮುಖ್ಯ – ಸಿ.ವಿ.ಜಡಿಯವರ

ಯುವಕರು ನಾಡು ಕಟ್ಟುವಂತಹ ಕೆಲಸ ಮಾಡಬೇಕು ಗುಟಖಾ, ತಂಬಾಕು, ಸರಾಯಿಯಿಂದ ದೂರವಿದ್ದು ಸಮಾಜ ಮುಖಿ ಕೆಲಸ ಮಾಡಬೇಕು ಹರಿದು ಹಂಚಿ ಹೋಗುವಂತಹ ಮನಸ್ಸುಗಳನ್ನು ಹಿಡಿದಿಡುವಂತಹ ಕೆಲಸವನ್ನು ಮತ್ತು ಸಂಸ್ಕಾರಯುತ ಕಾರ್ಯವನ್ನು ಕಾತರಕಿ ಗುಡ್ಲನೂರ ಗ್ರಾಮದ ಎಪಿಎಂಸಿ ಅಧ್ಯಕ್ಷ ವೆಂಕನಗೌಡ ಹಿರೇಗೌಡರ ಅಭಿಮಾನಿ ಬಳಗದಿಂದ 51ನೇ ಜನ್ಮ ದಿನವನ್ನು ಆಚರಿಸುತ್ತಿರುವುದು ಶ್ಲಾಘನಿಯವಾದುದು ಎಂದು ನೀವೃತ್ತ ಪ್ರಾಚಾರ್ಯ ಸಿ.ವಿ. ಜಡಿಯವರು ಹೇಳಿದರು.
ಅವರು ತಾಲೂಕಿನ ಕಾತರಕಿ ಗ್ರಾಮದಲ್ಲಿ ಶ್ರೀ ಪಾದಭಟ್ಟ ಜೋಷಿಯವರ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ವೆಂಕನಗೌಡ ಹಿರೇಗೌಡರ 51ನೇ ಜನ್ಮ ದಿನೋತ್ಸವದಲ್ಲಿ ಉಪನ್ಯಾಸಕರಾಗಿ ಮಾತನಾಡುತ್ತಿದ್ದರು. ಕಾಯಕ, ದಾಸೋಹ ಮತ್ತು ಸತ್ಸಂಗದಲ್ಲಿ ನಿರತರಾಗಿ ಸ್ವಾತಂತ್ರ್ಯಯೋಧ ಲಿಂಗನಗೌಡ ಮತ್ತು ಕಮಲಮ್ಮ ತಾಯಿ ದಂಪತಿಗಳ 12ನೇ ಮಗನಾಗಿ ಜನಿಸಿದ ವೆಂಕನಗೌಡರು ತಂದೆಯವರ ಹಾದಿಯಲ್ಲಿ ನಡೆದು ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ ಕಾರ್ಯದಲ್ಲಿ ಮಂಚೂಣೆಯಲ್ಲಿ ತೊಡಗಿದ್ದಾರಲ್ಲದೆ ಮಕ್ಕಳಿಗಾಗಿ ಶಾಲೆಯನ್ನು ತೆರದು ಗ್ರಾಮದಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತಾ ಮಾದರಿ ವ್ಯಕ್ತಿಯಾಗಿದ್ದಾರೆ ಎಂದರು ನಂತರ ನಿವೃತ್ತ ಶಿಕ್ಷಕ ಚಂದ್ರಾಮಪ್ಪ ಕಣಕಾಲ ಮಾತನಾಡಿ ಹಿಂದಿನಿಂದಲೂ ಹಿರೇಗೌಡರ ಮನೆತನವು ಆಧ್ಯಾತ್ಮದ ಕೇಂದ್ರ ಬಿಂದುವಾಗಿದ್ದು ಪ್ರತಿದಿನ ಎಲ್ಲರೂ ಸ್ನಾನದ ನಂತರ ದೇವಸ್ಥಾನಕ್ಕೆ ಹೋಗಿಬಂದು ಪ್ರತಿದಿನ ಸಿದ್ದಾರೂಢರ ಚರಿತ್ರೆಂiÀiನ್ನು ಪಠಣ ಮಾಡುತ್ತಾ ಭಕ್ತಿಭಾವದಿಂದ ದೇವರ ಸ್ಮರಣೆ ಮತ್ತು ಸಣ್ಣವರಿಂದ ಹಿರಿಯರವರೆಗೂ ಪ್ರೀತಿಯಿಂದ ಕಾಣುವ ಸ್ವಭಾವ ಅವರ ಮನೆಯ ಸಂಸ್ಕಾರ ಶರಣ ದಾಸೋಹದಂತಿದೆ. ಯಾರೇ ಬಂದರೂ ಊಟ ಮಾಡಿಸದೇ ಹಾಗೇ ಕಳಿಸಲು ಸಾಧ್ಯವಿಲ್ಲ ಅದೇ ಅವರಿಗೆ ವರವಾಗಿ ಅವರ ಅನೇಕ ಹುದ್ದೆಗಳನ್ನ ಅಲಂಕರಿಸುತ್ತಾ ಬಂದಿದ್ದಾರೆ. ಆದು ಅವರ ಮನೆತನದ ಸಾರ್ಥಕ ಬದುಕು ಎನ್ನುತ್ತಾ ಅವರ ಆರೋಗ್ಯ ಇನ್ನಷ್ಟು ವೃದ್ಧಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ವೇದಮೂರ್ತಿ ಜಗದೀಶ ಹಿರೇಮಠ, ಪದವಿ ಕಾಲೇಜಿನ ಉಪನ್ಯಾಸಕ ಶಂಕ್ರಯ್ಯ ಅಬ್ಬಿಗೇರಿಮಠ ಉಪನ್ಯಾಸ ನೀಡಿದರು.
ವೇದಮೂರ್ತಿ ಗವಿಸಿದ್ದಯ್ಯ ಹಿರೇಮಠ ಹಿರೇಸಿಂದೋಗಿ ಸಿಆರ್‍ಪಿ ಅಶೋಕ ಬಗಾಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಸುರೇಶ ಅರಕೇರಿ, ಕೇಶವರೆಡ್ಡಿ ಮಾದಿನೂರ, ಸಿದ್ದನಗೌಡ ಪೋಲಿಸ್ ಪಾಟೀಲ, ಗೋವಿಂದರಾವ್ ಕುರಡೇಕರ್, ಬಸವರಾಜ ಸಿದ್ದಾಪೂರ, ಹಿರಿಯರಾದ ಕೃಷ್ಣಪ್ಪ ಬೆಟಗೇರಿ, ದೇವಪ್ಪ ಬೈರಣ್ಣನವರ ಯಂಕಪ್ಪ ಕೋರಗಲ್ಲ, ಸಹಕಾರಿ ಸಂಘದ ಎ.ಬಿ. ವಿವೇಕಿ, ಯಂಕಣ್ಣ ಚಲ್ಲಾ, ಶತಾಯುಸಿ ಕಮಲಮ್ಮ ಲಿಂಗನಗೌಡ ಹಿರೇಗೌಡರ, ಆ.ಪಂ ಸದಸ್ಯ ಗುರುದೇಮ್ಮ ಶಂಕ್ರಗೌಡ ಹಿರೇಗೌಡರ, ನಗರಸಭೆ ಸದಸ್ಯ ಶಿವಗಂಗಾ ಶಿವರಡ್ಡಿ ಭೂಮಕ್ಕನವರ ಮತ್ತು ಹಿರೇಗೌಡರ ಕುಟುಂಬ ವರ್ಗದದವರು ಉಪಸ್ಥಿತರಿದ್ದರು.
ವೆಂಕನಗೌಡ ಹಿರೇಗೌಡರ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿದರು. ನಂತರ ಸುತ್ತಮುತ್ತಲಿನ ಗ್ರಾಮದ ಅಭಿಮಾನಿಗಳಿಂದ ಮತ್ತು ಸಂಘ ಸಂಸ್ಥೆಗಳಿಂದ ಅದ್ದೂರಿ ಸನ್ಮಾನಗಳ ಜರುಗಿದವು.
ಮಹೇಶ ಹಾಗೂ ಫಕೀರಪ್ಪ ಇವರಿಂದ ಪ್ರಾಥನೆ ಗೀತೆ ನೆರವೇರಿಸಿದರು, ಶಂಕರಗೌಡ ಹಿರೇಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಗದಯ್ಯ ಸಾಲಿಮಠ ನಿರೂಪಿಸಿದರು, ಸಂಗಪ್ಪ ಕಣಕಾಲ ಸ್ವಾಗತಿಸಿದರು, ಲಿಂಗನಗೌಡ ಹಿರೇಗೌಡರ ವಂದಿಸಿದರು

Please follow and like us:
error