ಯುವಾ ಬ್ರಿಗೇಡ್ ವತಿಯಿಂದ ಹುಲಗಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

koppal  ನಗರದ ಯುವಾ ಬ್ರಿಗೇಡ್ ವತಿಯಿಂದ ಹುಲಗಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಈಗಾಗಲೇ ಮೊದಲ ಹಂತವಾಗಿ ಕಳೆದ ರವಿವಾರದಂದು ಹಮ್ಮಿಕೊಳ್ಳಲಾಗಿತ್ತು ಅದರ ಮುಂದಿನ ಭಾಗವಾಗಿ ಇಂದು ಕೂಡ ಸ್ವಚ್ಛತಾ ಕಾರ್ಯ ನಡೆಯಿತು. ನಗರದ ಶ್ರೇಷ್ಟ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಹುಲಗಿ ದೇವಸ್ಥಾನವು ಒಂದು ಈ ದೇವಸ್ಥಾನಕ್ಕೆ ರಾಜ್ಯದ ಅನೇಕ ಕಡೆಯಿಂದ ಭಕ್ತರು ಬರುವುದು ವಾಡಿಕೆ.

ಈ ಕ್ಷೇತ್ರಕ್ಕೆ ತುಂಗಾಭದ್ರಾ ನದಿ ನೀರು ಹರಿದು ಪವಿತ್ರ ಕ್ಷೇತ್ರವಾದ ಹಂಪೆಗೆ ಕಡೆಗೆ ಸಾಗುತ್ತದೆ ಇಂತಹ ನದಿ ನೀರು ಕಲುಷಿತಗೊಂಡಿದೆ ಇದೆ ತರಹ ಅನೇಕ ನದಿ, ಕೆರೆಗಳು ಕಲುಷಿತ ಗೊಂಡಿದ್ದು ಇದನ್ನ ಅರಿತ ಯುವಾ ಬ್ರಿಗೇಡ್ ರಾಜ್ಯಾದ್ಯಂತ ಸ್ವಚ್ಛತಾ ಕಾರ್ಯವು ಈಗಾಗಲೇ ಸಾಕಷ್ಟು ಸ್ವಚ್ಛತಾ ಕಾರ್ಯವು ಮಾಡಿದ್ದು ಅದರಂತೆ ಈ ಭಾಗದ ಹುಲಗಿ ಗ್ರಾಮದಲ್ಲಿ ಹಾದು ಹೋಗುವ ಈ ನದಿಯ ನೀರನ್ನು ಹಂತ ಹಂತವಾಗಿ ಸ್ವಚ್ಛತಾ ಕಾರ್ಯ ಹಮ್ಮಿಕೊಂಡು ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಕಾರ್ಯಕರ್ತರಿಂದ ದೊಡ್ಡ ಪ್ರಮಾಣದಲ್ಲಿ ಸ್ವಚ್ಛತಾ ಆಂದೋಲನ ಮಾಡಲಾಗುವುದು. ಸಾರ್ವಜನಿಕರು ನಮ್ಮ ನಮ್ಮ ನಗರ, ನದಿ ಹಾಗೂ ನೀರಿನ ಮೂಲಗಳನ್ನು ಸ್ವಚ್ಛವಾಗಿ ಇಟ್ಟುಕೊಂಡು ಮುಂದಿನ ನಮ್ಮ ಪೀಳಿಗೆಗೆ ಒಂದಿಷ್ಟು ಉಳಿಸೋಣ ಎಂದು ಉತ್ತರ ಭಾಗದ ರಾಜ್ಯ ಸಂಚಾಲಕರಾದ  ಕಿರಣ್ ರಾಮ್ ತಿಳಿಸಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಕಾರ್ಯಕರ್ತರು ಭಾಗವಹಿಸಿ ಸ್ವಚ್ಛ ಗೊಳಿಸಿದರು.

Please follow and like us:
error