ಯುವತಿ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಡಿ. 22 : ಕೊಪ್ಪಳದ ಗಾಂಧಿನಗರದ ನಿವಾಸಿ ದೀಪಾ ತಂದೆ ಏಕನಾಥ ಸುರ್ವೇ ವಯಸ್ಸು 19, ಎಂಬ ಯುವತಿ ಜು. 24 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ದೀಪಾ ತಂದೆ ಏಕನಾಥ ಸುರ್ವೇ, ಇವಳು ಪ್ರತಿ ಮಂಗಳವಾರ ಮತ್ತು ಶುಕ್ರವಾರ ನಗರದ ದುರ್ಗಾ ದೇವಿ ಗುಡಿಯನ್ನು ಸ್ವಚ್ಛಗೊಳಿಸಲು ಹೋಗುತ್ತಿದ್ದಳು. ಅದರಂತೆ ಜುಲೈ. 24 ರಂದು ಗುಡಿಯನ್ನು ಸ್ವಚ್ಛಗೊಳಿಸುತ್ತೇನೆಂದು ಹೇಳಿ ಹೋದವಳು ವಾಪಸ ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಓಣಿಯಲ್ಲಿ ವಿಚಾರಿಸಿದಾಗ ಕರಿಯಪ್ಪ ತಂದಿ ಸುಂಕಪ್ಪ ಪೂಜಾರ ಈತನ ಅಳಿಯನಾದ ಯಮನೂರಪ್ಪ ಇಲಕಲ್ ಈತನು ಸಹ ಓಣಿಯಲ್ಲಿ ಇರದೆ ಇದ್ದದ್ದು ಕಂಡುಬಂದಿದ್ದು, ಯಮನೂರಪ್ಪ ಇಲಕಲ್ ಈತನ ಮೇಲೆ ಸಂಶಯ ಇದೆ. ಕಾಣೆಯಾದ ನನ್ನ ಮಗಳನ್ನು ಪತ್ತೆ ಮಾಡುವಂತೆ ಯುವತಿಯ ತಂದೆ ಏಕನಾಥ ಸುರ್ವೇ ಅವರು ಕೊಪ್ಪಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದ ಯುವತಿಯ ಚಹರೆ ವಿವರ ಇಂತಿದೆ. ದೀಪಾ ತಂದೆ ಏಕನಾಥ ಸುರ್ವೇ ವಯಸ್ಸು 19, ಎತ್ತರ 5 ಅಡಿ, ಸಾದಾರಣ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ, ಕಪ್ಪು ತಲೆ ಕೂದಲು ಹೊಂದಿದ್ದು, ಕಾಣೆಯಾದಾಗ ಹಸಿರು ಬಣ್ಣದ ನೈಟಿ ಧರಿಸಿದ್ದು, ಕನ್ನಡ ಹಾಗೂ ಮರಾಠ ಭಾಷೆಯನ್ನು ಮಾತನಾಡುತ್ತಾಳೆ. ಈ ಯುವತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ.ನಂ. 08539-230100 & 230222, ನಗರ ಪೊಲೀಸ ಠಾಣೆ ಪೊಲೀಸ ಇನ್ಸಪೆಕ್ಟರ್ ಮೊ.ಸಂ. 9480803745, ಪೊಲೀಸ ಸಬ್ ಇನ್ಸಪೆಕ್ಟರ್ ಮೊ.ಸಂ. 9449995353, ನಗರ ಪೊಲೀಸ ಠಾಣೆ ದೂರವಾಣಿ ಸಂಖ್ಯೆ. 08539-220333 ಇಲ್ಲಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ
=======

Please follow and like us:
error