ಯುವತಿ ಕಾಣೆ : ಪತ್ತೆಗೆ ಮನವಿ


ಕೊಪ್ಪಳ  : ಕೊಪ್ಪಳ ತಾಲ್ಲೂಕಿನ ಬಹದ್ದೂರಬಂಡಿ ನಿವಾಸಿ ನೇತ್ರಾ ಗಂ. ಫಕೀರಸ್ವಾಮಿ (19 ವರ್ಷ) ಎಂಬ ಯುವತಿಯು ಜೂ.08 ರಂದು ತನ್ನ ಮನೆಯಿಂದ ಹೊರಗಡೆ ಹೋಗಿಬರುವುದಾಗಿ ಹೇಳಿ ಮನೆಯಿಂದ ಹೊರಗಡೆ ಹೋದವಳು ಮನೆಗೆ ವಾಪಾಸ್ ಆಗದೆ ಕಾಣೆಯಾಗಿದ್ದು, ಈ ಕುರಿತು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವತಿಯ ಚಹರೆ: ಯುವತಿಯು 5 ಅಡಿ ಎತ್ತರ, ಉದ್ದನೆಯ ಮುಖ, ಗೋಧಿ ಮೈಬಣ್ಣ, ತೆಳ್ಳನೆಯ ಮೈಕಟ್ಟು,   ಕಪ್ಪು ಬಣ್ಣದ ತಲೆ ಕೂದಲನ್ನು ಹೊಂದಿದ್ದು, ಕಾಣೆಯಾದಾಗ ಕೇಸರಿ ಮತ್ತು ಕರಿ ಬಣ್ಣದ ಚೂಡಿದಾರ ಧರಿಸಿದ್ದು ಕನ್ನಡಕವನ್ನು ಧರಿಸುತ್ತಾಳೆ. ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ. ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಅಥವಾ ಪತ್ತೆಯಾದಲ್ಲಿ ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆ ಪಿ.ಎಸ್.ಐ ದೂ. ಸಂ. 08539-221333 ಹಾಗೂ ಮೊ.ಸಂ.9480803746, ಕೊಪ್ಪಳ ಸಿ.ಪಿ.ಐ ರೂರಲ್-ಮೊ.ಸಂ.9480803731, ಕೊಪ್ಪಳ ಡಿ.ವೈ.ಎಸ್.ಪಿ ದೂ.ಸಂ. 08539-230342, ಮೊ.ಸಂ.9480803720, ಎಸ್.ಪಿ. ದೂ.ಸಂ. 08539-230111 ಹಾಗೂ ಜಿಲ್ಲಾ ಕಂಟ್ರೋಲ್ ರೂಂ-08539-230222-100 ಸಂಪರ್ಕಿಸಿ

Please follow and like us:
error