ಯುವಜನರ ಹೋರಾಟದ ಮುಂಚೂಣಿಯಲ್ಲಿರುವ AIDYO ಸಂಘಟನೆಯ 55ನೇ ಸಂಸ್ಥಾಪನಾ ದಿನ

ಕೊಪ್ಪಳ ಜಿಲ್ಲಾ ಕಚೇರಿಯಲ್ಲಿ ಎ.ಐ. ಡಿ.ವೈ.ಓ.  ನ 55ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಜೂನ್ 26  1966 ರಂದು ಪಶ್ಚಿಮ ಬಂಗಾಳದಲ್ಲಿ ಕೆಲವೇ ಜನರು ಸೇರಿಕೊಂಡು  ನೈಜ ಯುವಜನ ಸಂಘಟನೆಯನ್ನು ಸ್ಥಾಪಿಸುವ ಕನಸನ್ನು ಹೊತ್ತು ಈ ಸಂಘಟನೆಯನ್ನು ಆರಂಭಿಸಿದರು. ಈ ಯುಗದ  ಮಹಾನ್ ಮಾರ್ಕ್ಸ್ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ ಘೋಷ್ ಅವರ ಚಿಂತನೆಗಳ ಆಧಾರದ ಮೇಲೆ AIDYO ಸ್ಥಾಪಿಸಲ್ಪಟ್ಟಿತು. ಆರಂಭದ ದಿನದಿಂದಲೂ ಯುವಜನರ ಸಮಸ್ಯೆಗಳಾದ ನಿರುದ್ಯೋಗ, ಅಶ್ಲೀಲತೆ, ಮಧ್ಯ ವ್ಯಸನಗಳ, ವಿರುದ್ಧ ನಿರಂತರ ಚಳುವಳಿಗಳನ್ನು ಬೆಳೆಸುತ್ತಾ ಸಮಾಜದಲ್ಲಿರುವ ಅನ್ಯಾಯಗಳ ವಿರುದ್ಧ ಯಾವುದೇ ರೀತಿಯ ಹೊಂದಾಣಿಕೆಯನ್ನು ಮಾಡಿಕೊಳ್ಳದೆ ಹೋರಾಡುವ ಯುವಜನರನ್ನು ಸೃಷ್ಟಿಸುವ ಕೆಲಸವನ್ನು ಮಾಡುತ್ತಿದೆ. ಇಂದು ಸುಮಾರು 25 ರಾಜ್ಯಗಳಲ್ಲಿ AIDYO ತನ್ನ ಕಾರ್ಯಚಟುವಟಿಕೆಗಳನ್ನು ಮಾಡುತ್ತಿದೆ. ನಮ್ಮ ಸ್ವಾತಂತ್ರ್ಯ ಹೋರಾಟದ ಧ್ರುವ ತಾರೆಗಳಾದ ಶಹೀದ್ ಭಗತ್ ಸಿಂಗ್,  ನೇತಾಜಿ ಸುಭಾಷ್ ಚಂದ್ರ ಬೋಸ್ ಇವರ ವಿಚಾರಗಳನ್ನು ಇಂದಿನ ಯುವಜನರಲ್ಲಿ ಮತ್ತು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಾ ಇಂದಿನ ಅಸಮಾನತೆಯ ವಿರುದ್ಧ ಅವರಲ್ಲಿ ಹೋರಾಡುವ ಮನೋಭಾವನೆಯನ್ನು ಬೆಳೆಸುವ ಕೆಲಸವನ್ನು ಎಐಡಿವೈಒ ಮಾಡುತ್ತಿದೆ. ಕೊಪ್ಪಳದಲ್ಲಿಯು  ಸಹ ಹಲವಾರು ಹೋರಾಟಗಳನ್ನು ಎಐಡಿವೈಒ ಸಂಘಟಿಸುತ್ತ ಬಂದಿದೆ. ಆಯ್ಕೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ತೆಗೆದುಕೊಂಡು ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ, ಶಿಕ್ಷಣದ ವ್ಯಾಪಾರೀಕರಣವನ್ನು ವಿರೋಧಿಸಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹಿಸಿ. ಅಶ್ಲೀಲ ಸಿನಿಮಾ ಸಾಹಿತ್ಯವನ್ನು ಬ್ಯಾನ್ ಮಾಡಲು ಒತ್ತಾಯಿಸಿ., ಉದ್ಯೋಗ ಖಾತ್ರಿಯಲ್ಲಿ ಕೆಲಸ ದಿನಗಳನ್ನು 200 ಕ್ಕೆ  ಹೆಚ್ಚಿಸಲು ಆಗ್ರಹಿಸಿ. ಇಂತಹ ಅನೇಕ ಹೋರಾಟಗಳಲ್ಲಿ                ಎಐಡಿವೈಓ   ತೊಡಗಿಸಿಕೊಂಡಿದೆ.

ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಸಂಚಾಲಕರಾದ ರಮೇಶ ವಂಕಲಕುಂಟ ಹಾಗೂ ಎಐಡಿವೈಓ  ಜಿಲ್ಲಾ ಸಂಘಟನಾಕಾರರಾದ  ಶರಣಬಸವ ಪಾಟೀಲ್ ಇದ್ದರು

Please follow and like us:
error