ಯಶಸ್ವಿ ಹೆರಿಗೆ ಹಾಗೂ ಆರೋಗ್ಯಕರ ಶಿಶುವಿಗಾಗಿ ಆರೋಗ್ಯ ಶಿಕ್ಷಣ ಮುಖ್ಯ.

ಕೊಪ್ಪಳ;2016ರಲ್ಲಿ ರಾಜೀವ್ ಗಾಂಧಿ ಸಾರ್ವಜನಿಕ ಆರೋಗ್ಯ ಹಾಗೂ ರೋಗ ನಿಯಂತ್ರಣ ಕೇಂದ್ರದ ವತಿಯಿಂದ ನಡೆಸಲಾದ ಅಧ್ಯಯನವೊಂದರ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ ಅತಿ ಹೆಚ್ಚು ತಾಯಂದಿರ ಮರಣ ಪ್ರಮಾಣ (ಪ್ರತಿ 1,00,000 ಜೀವಂತ ಜನನಗಳ ವಿರುದ್ಧ 230 ಮರಣಗಳು) ವರದಿಯಾಗಿದೆ. ಇಡೀ ಕರ್ನಾಟಕ ರಾಜ್ಯದಲ್ಲಿ ಇದರ ಪ್ರಮಾಣ ಪ್ರತಿ 1,00,000 ಜೀವಂತ ಜನನಗಳ ವಿರುದ್ಧ 144 ಮರಣಗಳಿದ್ದು ಈ ಸಂಖ್ಯೆ ರಾಷ್ಟ್ರದ ಇತರೆ ರಾಜ್ಯಗಳ ಹೋಲಿಕೆಯಲ್ಲಿ ಕಡಿಮೆಯಿದೆ.
ಜಿಲ್ಲೆಯ ನಿವಾಸಿಗಳ ಪೈಕಿ ಆರೋಗ್ಯ ಶಿಕ್ಷಣದ ಕೊರತೆಯಿಂದಾಗಿ ಗರ್ಭಾವಸ್ಥೆಯಲ್ಲಿದ್ದಾಗ ಸರಿಯಾದ ಸಮಯಕ್ಕೆ ಆರೋಗ್ಯ ತಪಾಸಣೆಗಳನ್ನು ಪಡೆದುಕೊಳ್ಳದೆ ಇರುವುದು, ಗ್ರಾಮಸ್ಥರಲ್ಲಿ ಸೂಕ್ತ ಪೌಷ್ಠಿಕ ಆಹಾರದ ಬಗ್ಗೆ ಸಲಹೆ ಹಾಗೂ ನೈರ್ಮಲ್ಯದ ಕುರಿತು ಸರಿಯಾದ ಅರಿವಿನ ಕೊರತೆಗಳಿಂದಾಗಿ ಮಕ್ಕಳಲ್ಲಿ ನ್ಯೂಮೊನಿಯಾ ಹಾಗೂ ಅತಿಸಾರದ ಸಮಸ್ಯೆಗಳು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕಡಿಮೆ ತೂಕದ ಶಿಶುಗಳ ಜನನ ಹೆಚ್ಚಾಗಿದೆ. ಮೇಲಾಗಿ, ಸರಿಯಾದ ವೈದ್ಯಕೀಯ ಸಲಹೆ ನೀಡಲು ಹತ್ತಿರದಲ್ಲಿ ತಜ್ಞ ಮಕ್ಕಳ ವೈದ್ಯರು ಲಭ್ಯವಿಲ್ಲ. ಹೆರಿಗೆ ಸಮಯದಲ್ಲಿ ಆರಂಭಿಕ ಆರೋಗ್ಯ ತೊಂದರೆಗಳು ಎದುರಾದರೆ ಭವಿಷ್ಯದಲ್ಲಿ ಹುಟ್ಟುವ ಮಗುವಿನ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮವುಂಟಾಗುತ್ತದೆ ಹಾಗೂ ತಾಯಿಯು ಆಗಾಗ ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿರಬೇಕಾಗುತ್ತದೆ. ಗರ್ಭಧಾರಣೆಯ ಆರಂಭದ ಅವಧಿಯಿಂದಲೇ ಕ್ರಮಬದ್ಧವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರೆ ಗರ್ಭಿಣಿಯ ದೇಹದ ರಕ್ತದ ಎಣಿಕೆ, ಪೌಷ್ಠಿಕತೆ, ರಕ್ತಹೀನತೆ, ಗರ್ಭಧಾರಣೆಗೆ ಸಂಬಂಧಿಸಿದ ಇತರೆ ತೊಂದರೆಗಳು, ಭ್ರೂಣದ ಆರೋಗ್ಯ ಹಾಗೂ ಚಲನೆ ಮತ್ತು ಹೆರಿಗೆಯ ಸಂಭವನೀಯ ದಿನಾಂಕಗಳ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ. ಆಗ ಯಶಸ್ವಿ ಹೆರಿಗೆ ಹಾಗೂ ಆರೋಗ್ಯ ಶಿಶುವಿನ ಜನನಕ್ಕೆ ಅನುವಾಗುವಂತೆ, ಸರಿಯಾದ ಸಮಯಕ್ಕೆ ಸುಸಜ್ಜಿತ, ವೃತ್ತಿಪರ ಆಸ್ಪತ್ರೆಗೆ ದಾಖಲಿಸಲು ನೆರವಾಗುತ್ತದೆ. ಸುಸಜ್ಜಿತ ಆಸ್ಪತ್ರೆ ತಲುಪಲು ದೂರವಿರುವ ಗ್ರಾಮಗಳು ಹಾಗೂ ಕೆಟ್ಟ ರಸ್ತೆಗಳಿರುವಂತಹ ಊರುಗಳಲ್ಲಿ ವಾಸಿಸುವವರಿಗೆ ಈ ರೀತಿ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಸಹಾಯಕಾರಿಯಾಗುತ್ತದೆ.
ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಯ ಜೊತೆಗೆ ವಿವಿಧ ಸ್ಥಳಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿವೆ. ಈ ಪೈಕಿ ವಾತ್ಸಲ್ಯ ಸಮೂಹ ಕೊಣ್ಣೂರು ಆಸ್ಪತ್ರೆಯ ನಿರ್ವಹಣಾ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ವಾತ್ಸಲ್ಯ ಸಮೂಹ, ಬಹು-ವಿಶೇಷತೆಯುಳ್ಳ, ಕೈಗೆಟಕುವ ದರಗಳಲ್ಲಿ ಚಿಕಿತ್ಸೆ ಒದಗಿಸುವ, ಹಾಗೂ ವೃತ್ತಿಪರವಾಗಿ ನಡೆಸುತ್ತಿರುವ ಆಸ್ಪತ್ರೆಗಳ ಸಮೂಹವಾಗಿದ್ದು, ಕರ್ನಾಟಕದ 6 ಜಿಲ್ಲೆಗಳಲ್ಲಿ ಆಸ್ಪತ್ರೆಗಳನ್ನು ಹೊಂದಿದೆ. ಕೊಣ್ಣೂರು ಆಸ್ಪತ್ರೆಯ ನಿರ್ವಹಣಾ ಜವಾಬ್ದಾರಿಯನ್ನು ವಹಿಸಿಕೊಂಡು ‘ವಾತ್ಸಲ್ಯ ಕೊಣ್ಣೂರು ಆಸ್ಪತ್ರೆ’ ಎಂದು ಮರುನಾಮಕರಣ ಮಾಡಲಾಗಿದ್ದು, ಹೊರ ರೋಗಿ ಚಿಕಿತ್ಸಾ ಸೇವೆಗಳನ್ನು ಆರಂಭಿಸಲಾಗಿದೆ. ವಾತ್ಸಲ್ಯ ಕೊಣ್ಣೂರು ಆಸ್ಪತ್ರೆ ಮಹಿಳಾ & ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ತಜ್ಞತೆಯನ್ನು ಹೊಂದಿದ್ದು, ಅತ್ಯುತ್ತಮ ಅನುಭವವುಳ್ಳ ವೈದ್ಯರು ಹಾಗೂ ಶುಶ್ರೂಷಕ ಸಿಬ್ಬಂದಿಯನ್ನು ಹೊಂದಿದೆ.
ಜನವರಿ 2019ರ ವೇಳೆಗೆ ಸುಸಜ್ಜಿತ, ನವೀಕೃತ ಆಸ್ಪತ್ರೆಯ ಪುನರಾರಂಭವನ್ನು ನಿರೀಕ್ಷಿಸಲಾಗಿದ್ದು, ಅತ್ಯುತ್ತಮ ಆರೋಗ್ಯ ಸೇವೆಗಳನ್ನು ಎದುರು ನೋಡುವ ಈ ಭಾಗದ ಜನರಿಗೆ ಇದೊಂದು ವರದಾನವಾಗಲಿದೆ.

Please follow and like us:
error