ಯಲಬುರ್ಗಾದಲ್ಲಿ ಬಸ್ ಪಲ್ಟಿ : ೬ ಜನ ಆಸ್ಪತ್ರೆಗೆ ದಾಖಲು

ಕೊಪ್ಪಳ : ಜಿಲ್ಲೆಯ ಯಲಬುರ್ಗಾ ಬಳಿಯ ಕೆಂಪುಕೆರೆ ಹತ್ತಿರ ಶುಕ್ರವಾರ KSRTC ಬಸ್ ಪಲ್ಟಿಯಾಗಿ ಏಳಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸುಲ್ಲ.

ಈ ಬಸ್ ಯಲಬುರ್ಗಾದಿಂದ ಗಜೇಂದ್ರಗಡಕ್ಕೆ ಹೋಗುತ್ತಿದ್ದು, ಬಸ್ನಲ್ಲಿ 10 ಜನ ಪ್ರಯಾಣಿಕರು ಇದ್ದರು ಎನ್ನುವ ಮಾಹಿತಿ ಇದೆ.ಸದ್ಯ ಗಾಯಾಳುಗಳನ್ನು ಯಲಬುರ್ಗಾ ಸರ್ಕಾರಿ ಆಸ್ಪತ್ರೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಯಲಬುರ್ಗಾ ಪೊಲೀಸರು ಭೇಟಿ ನೀಡಿದ್ದು ಯಾವ ಕಾರಣಕ್ಕೆ ಬಸ್ ಪಲ್ಟಿಯಾಗಿದೆ ಎಂದು ಪರಿಶೀಲನೆ ನಡೆಸಿದ್ದಾರೆ.

Please follow and like us:
error