ಮೋದಿಯನ್ನ ತರಾಟೆಗೆ ತೆಗೆದುಕೊಂಡ ಪ್ರಕಾಶ್ ರೈ

ಗಂಗಾವತಿ :

ನಾನು ಪ್ರಧಾನಿ ನರೇಂದ್ರ ಮೋದಿಯವರನ್ನ ಪ್ರಶ್ನೆ ಮಾಡಿದ್ರೇ ನನ್ನನ್ನ ತೆಗಳುತ್ತಾರೆ ಎಂದು ನಟ ಪ್ರಕಾಶ್ ರೈ ಹೇಳುದ್ರು. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ‌ ನಡೆದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮ ದಲ್ಲಿ ಮಾತಾಡಿದ ಪ್ರಕಾಶ್ ರೈ ಮೋದಿಯವರು ದೇಶಕ್ಕೆ 2 ಕೋಟಿ ಉದ್ಯೋಗ ನೀಡ್ತೀನಿ ಅಂದ್ರು ಎಷ್ಟು ಜನಕ್ಕೆ ಉದ್ಯೋಗ ನೀಡಿದ್ದಾರೆ ‌ ಅಲ್ದೇ ದೇಶಕ್ಕೆ ಕಪ್ಪು ಹಣ ವಾಪಾಸ್ ತರ್ತೀನಿ ಅಂದ್ರೂ ಅದು ಬಂತಾ. ಪ್ರಧಾನಿಯನ್ನ ನಾವು ನಂಬಿದ್ದೇವು, ಇದರ ಬಗ್ಗೆ ಪ್ರಶ್ನೆ ಮಾಡಬಾರದಾ..? ಎಂದು ಪರ್ತಕರ್ತರನ್ನ‌ ಪ್ರಶ್ನೀಸಿದ್ರು. ಅಲ್ದೇ ನಾನು ಕೇವಲ ಬಿಜೆಪಿ ಪಕ್ಷವನ್ನು ಮಾತ್ರ ಪ್ರಶ್ನಿಸುತ್ತಿಲ್ಲ. ಮೂರು ಪಕ್ಷದವರ ಹತ್ತಿರ ನನ್ನ ಬಳಿ ಪ್ರಶ್ನೆಗಳಿವೆ. ಕಾಂಗ್ರೇಸ್ ನವರು 50 ವರ್ಷ ಸರಿಯಾಗಿ ಅಧಿಕಾರ ಮಾಡಿಲ್ಲ ಅಂತಾ ಹೇಳಿ ನಿಮಗೆ ಅಧಿಕಾರ ನೀಡಿದ್ದಾರೆ. ಆದ್ರೇ ನೀವು ಅಧಿಕಾರಕ್ಕೆ ಬರೋಕೆ‌ ಮುಂಚೆ ಸಾಕಷ್ಟು ಭರವಸೆಯನ್ನು ಕೊಟ್ಟಿದ್ದೀರಿ. ಆದ್ರೆ ಅವುಗಳನ್ನು ಯಾಕೆ ಈಡೇರಿಸಿಲ್ಲ. ಇವುಗಳನ್ನು ಪ್ರಶ್ನಿಸಿದ್ರೇ ನಾನು ಹಿಂದೂ ಧರ್ಮದ ವಿರೋಧಿ ಅಂತಾ ಬಿಂಬಿಸುತ್ತಾರೆ. ನನಗೆ ಬಿಜೆಪಿಯವರಷ್ಟು ಡೇಂಜರ್ ಯಾವ ಪಕ್ಷದವರು ಅನಿಸ್ತಾ ಇಲ್ಲ ಎಂದ್ರು….