ಮೋದಿ,ಯಡಿಯೂರಪ್ಪ ಡೋಂಗಿಗಳು- ಸಿಎಂ ಸಿದ್ದರಾಮಯ್ಯ

ಪ್ರಧಾನಿ ಮೋದಿಯ ಮಾತಿಗೆ ಮೂರು ಕಾಸಿನ ಕಿಮ್ಮತ್ತು ಇಲ್ಲ. ಮೋದಿಯವರು ತಮ್ಮ ಸ್ಥಾನ ಮರೆತು ಕೀಳು ಮಟ್ಟದ ರಾಜಕೀಯ ಮಾಡ್ತಾ ಇದ್ದಾರೆ ಅಂತಾ ಸಿಎಂ ಸಿದ್ದರಾಮಯ್ಯ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ರು

. ಕೊಪ್ಪಳ ತಾಲೂಕಿನ ಬಸಾಪುರದ ಖಾಸಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ,ಮೋದಿಯವರು ನಮ್ಮನ್ನು ಸೀದಾ ರೂಪಾಯಿ ಸರ್ಕಾರ ಎನ್ನುತ್ತಿದ್ದಾರೆ. ಇಷ್ಟು ಕೀಳು ಮಟ್ಟದ ರಾಜಕೀಯ ಮೋದಿ ಮಾಡಬಾರದು ಎಂದ್ರು. ರೈತರನ್ನು ಕೊಂದವರಿಗೆ ಮೋದಿ ರೈತ ಬಂಧು ಅಂತಾ ಬಿರುದು ಕೋಡ್ತಾರೆ. ಹಾವೇರಿಯಲ್ಲಿ ಗೋಲಿಬಾರ್ ಮಾಡಿಸಿ ರೈತರನ್ನು ಕೊಂದವರು ಯಾರು ಎಂದು ಮೋದಿಗೆ ಪ್ರಶ್ನೆ ಮಾಡಿದ್ರು.. ಇನ್ನು ನಮ್ಮ ಸರ್ಕಾರದ ಭ್ರಷ್ಟ್ರಚಾರದ ಬಗ್ಗೆ ಮೋದಿ ಮಾತನಾಡ್ತಾರೆ , ಮೊದಲು ಅವರು ದೇಶವನ್ನು ಲೂಟಿ ಹೊಡೆದ ನೀರವ್ ಮೋದಿ, ಲಲಿತಾ ಮೋದಿಯನ್ನು ಯಾಕೆ ಸುಮ್ನೆ ಬಿಟ್ರು.. ಅಲ್ಲದೆ ಇವರೇಲ್ಲಾರೂ ದೇಶ ಬಿಟ್ಟು ಹೋಗಲು ಮೋದಿಯೇ ಕುಮ್ಮಕ್ಕು ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ರು.. ಇನ್ನು ರೈತರ ಸಮಾವೇಶ ಮಾಡುವ ಯಡಿಯ್ಯೋರಪ್ಪ ಮತ್ತು ಮೋದಿ ಡೋಂಗಿಗಳು ಎಂದು ಟಾಂಗ್ ನೀಡಿದ್ರು.. ಇನ್ನು ನನ್ನನ್ನು ರಾಜಕೀಯವಾಗಿ ದೇವೆಗೌಡ್ರು ಬೆಳೆಸಿಲ್ಲ. ನನ್ನ ಸ್ವಂತಿಕೆ ಮೇಲೆ ನಾನೇ ಬೆಳೆಸಿದ್ದೆನೆ ಎಂದು ದೇವೆಗೌಡ್ರಿಗೆ ಟಾಂಗ್ ನೀಡಿದ್ರು.

Please follow and like us:
error