ಮೋದಿ,ಅಮಿತ್‍ಶಾ ಓಡಿಸಿ ಸಂವಿಧಾನ ಉಳಿಸಿಕೊಳ್ಳೋಣ- ಜಿಗ್ನೇಶ್ ಮೇವಾನಿ

*ಜಿಗ್ನೇಶ್ ಮೇವಾನಿ ಮಾತುಗಳು.*

*ಗಂಗಾವತಿ ಸಂವಿಧಾನ ಉಳಿಸಿ ಕರ್ನಾಟಕದ ಸಮಾವೇಶ*

ಬಂಧುಗಳೇ
ನಾನು ಇಲ್ಲಿನಿಂದ ಮಾತಾಡಿದರೂ ಸಹ ದೆಲ್ಲಿಯವರೆಗೆ ಕೇಳಿಸುತ್ತೇ. ನನ್ನ ವೈದ್ಯರು ಜೋರಾಗಿ ಮತಾಡಬಾರದೆಂದು ಹೇಳಿದ್ದಾರೆ. ಆದರೂ ನನ್ನ ಮಾತುಗಳನ್ನು ಜೋರಾಗಿ ಮತಾಡುತ್ತೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲಾ ಬಂಧುಗಳಿಗೆ ಜೈಭೀಮ್, ಲಾಲ್ ಸಲಾಂ ಮತ್ತು ಇಂಕ್ವಿಲಾಬ್ ಜಿಂದಾಬಾದ್.

ಈ ನೆಲ ಶರಣ ಮತ್ತು ಸೂಫಿ ಪರಂಪರೆಗೆ ಹೆಸರುವಾಸಿಯಾಗಿದೆ. ಹಿಂದೂ ಮತ್ತು ಮುಸ್ಲಿಂ ಭಾಧವ್ಯದ ನೆಲವಾಗಿದೆ. ಇಂತಹ ನೆಲಕ್ಕ ಮೋದಿ ಮತ್ತು ಅಮಿತ್ ಶಾರನ್ನು ಕರೆಸಿ ಹಾಳು ಮಾಡಬೇಡಿ. ತುಂಗಭದ್ರದ ತೀರದಲ್ಲಿ ಹಿಂದೂ ಮುಸ್ಲಿಂ ಸಹಬಾಳ್ವೆಯ ಪರಂಪರೆಯಲ್ಲಿ ಮೋದಿ ಮತ್ತು ಅಮಿತ್ ಶಾನ ಪರಂಪರೆಯನ್ನು ಇಲ್ಲಿಗೆ ಕಾಲಿಡಲು ಬಿಡಬೇಡಿ.

ಒಂದು ಮಾತು ಬಹಳ ಗಂಭೀರತೆಯಿಂದ ಇಲ್ಲ ನಾನು ಹೇಳಲಿಕ್ಕೆ ಇಷ್ಟಪಡುತ್ತೇನೆ. ಇವತ್ತು ಈ ಸ್ಥಿತಿ ಯಾಕೆ ಬಂದಿದೆ? ಇಂದು ದೇಶದ ಎಲ್ಲಾ ಕಡೆ ಇದೇ ವಿಚಾರ ಮಾತಾಡುತ್ತಿದ್ದಾರೆ. ಅದು ನಮ್ಮ ಸಂವಿಧಾನ ಅಪಾಯದಲ್ಲಿದೆ ಮತ್ತು ನಾವು ಅದನ್ನು ಉಳಿಸಬೇಕೆಂದು. ಇಡಿ ದೇಶ ಅಪಾಯದಲ್ಲಿ ಸಿಕ್ಕಿಹಾಕಿಕೊಂಡಿದೆ. 18-19 ರಾಜ್ಯಗಳು ಅವರ ಕಪಿಮುಷ್ಠಿಯಲ್ಲಿದೆ. 2019ಕ್ಕೆ ಮತ್ತೆ ಇದೇ ಬಿಜೆಪಿ ಅಧಿಕಾರಕ್ಕೆ ಬಂದರೆ ನಮಗೆ ಉಳಿಗಾಲವಲ್ಲ. ಹಾಗಾಗಿ ಸಂವಿಧಾನವನ್ನು ರಕ್ಷಿಸುವ ಜಬಾಬ್ದಾರಿ ನಮ್ಮ ಮೇಲಿದೆ. ಹಾಗಾಗಿ ಮೋದಿ ಮತ್ತು ಅಮಿತ್‍ಶಾರನ್ನು ಓಡಿಸುವ ಮೂಲಕ ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳೋಣ.

2014ರ ಲೋಕಸಭಾ ಚುನಾವಣೆಯಲ್ಲಿ ಜನರ ಕಣ್ಣಿಗೆ ಮಣ್ಣೆರೆಚುವ ನಾಟಕ ನಡೆಯಿತು. ಹಿಂದಿನ ಯಾವುದೇ ಕಾವಲುದಾರ ಈಗೆ ಮಾಡಿರಲಿಲ್ಲ. ನಾನು ಗೆದ್ದ ವಡ್ಗಾವ್ ಕ್ಷೇತ್ರದಲ್ಲಿ ಮೋದಿ ಒಮ್ಮೆ ಮಾತಾಡುತ್ತಿದ್ದರು. ಹೇಗೆಂದರೆ ಅಲ್ಲಿಯ ಕೈಪಂಪುಗಳನ್ನು ಒತ್ತಿದರೆ ನೀರಿಗೆ ಬದಲಾಗಿ ಸಂಪತ್ತು ಬರುತ್ತದೆ ಎಂದು ಹೇಳುತ್ತಿದ್ದರು. ಆದರೆ ರೈತರು ಕಷ್ಟಪಟ್ಟು ಕೈಪಂಪು ಒತ್ತಿದ್ದರೆ ಒಂದು ಹನಿ ನೀರು ಕೂಡ ಬರಲಿಲ್ಲ. ಗೆಲ್ಲವು ಮುಂಚೆ ಮೋದಿ ಎಲ್ಲಕ್ಕೂ ಕಾಂಗ್ರೆಸ್ ಕಾರಣ ಎಂದು ಹೇಳಿದ್ದರು. ಈಗ ಅವರು ಉತ್ತರ ಕೊಡಬೇಕು. 18 ರಾಜ್ಯಗಳಲ್ಲಿ ನೀವೆ ಅಧಿಕಾರದಲ್ಲಿದ್ದರೂ ಯಾಕೆ ಬೆಲೆಏರಿಕೆ ಇಳಿದಿಲ್ಲ. ಯಾಕೆ ಸಮಸ್ಯೆಗಳು ಬಗೆಹರಿದಿಲ್ಲ ಎಂದು ನಾವು ಕೇಳುತ್ತಿದ್ದೇವೆ.
ಗುಜರಾತ್‍ನಿಂದ ನಾನು ಬಂದಿದ್ದೀನಿ. ಅವರು ನೀರವ್ ಮೋದಿ, ಅಂಬಾನಿ ಮತ್ತು ಅದಾನಿಯ ಹಣದಲ್ಲಿ ಬದುಕುತ್ತಿದ್ದಾರೆ. ಇಂದು ಭಾರತದಲ್ಲಿ ಅತ್ಯಂತ ಭ್ರಷ್ಟ ವ್ಯಕ್ತಿ ಇದ್ದರೆ ಅದು ನರೇಂದ್ರ ಮೋದಿ ಮಾತ್ರ. ಇವರು ಅಂಬಾನಿ ಮತ್ತು ಅದಾನಿಗಾಗಿ ಕೆಲಸ ಮಾಡುತ್ತಿದ್ದಾರೆ ಹೊರತು ನಮಗಲ್ಲ.

ಯಾರು ಹಿಂದು ಹಿತದ ಮಾತಾಡುತ್ತಾರೋ ಅವರೇ ಈ ದೇಶವನ್ನು ಆಳುತ್ತಾರೆ ಎಂದು ಹೇಳಲಾಗುತ್ತಿತ್ತು. ಇಂದು ಹಿಂದುವಿರೋಧಿ ಪಕ್ಷ ಯಾವುದಾರು ಇದ್ದರೆ ಅದು ಬಿಜೆಪಿ ಮಾತ್ರ. ಬೆಳಿಗ್ಗೆ ನನ್ನ ವಿರುದ್ದ ವಾಟ್ಸಾಪ್‍ನಲ್ಲಿ ದೊಡ್ಡ ಅಪಪ್ರಚಾರ ಮಾಡುತ್ತಿದ್ದಾರೆ. ನೀವು ದಲಿತರಿಗೆ, ಅಲ್ಪಸಂಖ್ಯಾತರಿಗೆ ನೀವು ಏನೂ ಮಾಡುತ್ತಿಲ್ಲ ಹೋಗಲಿ ಬೆಳಿಗ್ಗೆ 6 ಗಂಟೆಗೆ ಎಬ್ಬಿಸಿ ಮಕ್ಕಳ ಕೈಗೆ ಲಾಠಿ ಕೊಟ್ಟು ಸಂಘಪರಿವಾರಕ್ಕೆ ಸೇರಿಸಿಕೊಳ್ಳುತ್ತಿದ್ದೀರಿ ಅಂತ ಕನಿಷ್ಠ 2 ಕೋಟಿ ನಿಮ್ಮದೇ ಸಂಘಪರಿವಾರದ ಯುವಜನರಿಗೆ ಉದ್ಯೋಗ ಕೊಡಿ ನಿಮಗೆ ಧೈರ್ಯ ಇದ್ದರೆ. 56 ಇಂಚಿನ ಎದೆಯ ಪ್ರಧಾನಿ ಎಂದು ಹೇಳಿಕೊಳ್ಳುವ ತಮಗೆ ಮಾನ ಮಾರ್ಯಾದೆ ಇದ್ದರೆ ಕೇವಲ 56 ಲಕ್ಷ ಉದ್ಯೋಗ ಸೃಷ್ಟಿಸಿ ಸಾಧ್ಯವಾದರೆ ನೋಡುತ್ತೇವೆ.

ಯಾವುದೋ ವರದಿಯಲ್ಲಿ ಓದಿದ ನೆನಪು. ಈ ದೇಶದಲ್ಲಿ 18-39 ರವರಗಿನ ವಯಸ್ಸಿನ 35ಕೋಟಿ ಯುವಜನರಿದ್ದಾರೆ. ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಟ್ಟಿದ್ದರೋ ಇಲ್ಲವೋ? ಕೊಟ್ಟಿದ್ದರು ತಾನೇ? ರೈತರ ಸಾಲ ಮನ್ನಾ ಮಾಡುವುದಾಗಿ ಒಳ್ಳೇ ಬೆಲೆ ಕೊಡುವುದಾಗಿ ಹೇಳಿದ್ದರು ತಾನೆ? ಇದೆ ಏಪ್ರಿಲ್ 15ರಂದು ಬೆಂಗಳೂರಿಗೆ ಮೋದಿ ಬರುತ್ತಿದ್ದಾರೆ. ಅಂದು ಅವರ ಎದುರು ನಿಂತು ನಾವು ಎಲ್ಲಿ ಉದ್ಯೋಗ ಎಂದು ಕೇಳಬೇಕಿದೆ. ಸಾಧ್ಯವಿಲ್ಲದಿದ್ದರೆ ರಾಜಿನಾಮೇ ಕೊಟ್ಟು ಹಿಮಾಲಯಕ್ಕೆ ಹೋಗಿ ಎಂದು ನಾವೆಲ್ಲರೂ ಒಕ್ಕೊರಲಿನಿಂದ ಹೇಳಬೇಕಿದೆ.

ಪಿಎಂಒ ಕಛೇರಿಯಲ್ಲಿ ನನ್ನ ಸ್ನೇಹಿತನೊಬ್ಬನಿದ್ದಾನೆ. ಆತ ಕಿವಿಯಲ್ಲಿ ನನಗೆ ಹೇಳಿತ್ತಿರುತ್ತಾನೆ. ಅದೆನೆಂದರೆ ಪ್ರಧಾನಿಯವರ ಆರೋಗ್ಯ ಚೆನ್ನಾಗಿದೆ. ಆದರೆ ಯಾರದರೂ ಎರಡು ಕೋಟಿ ಉದ್ಯೋಗದ ಮಾತಾಡಿದರೆ ಸಾಕು ಪ್ರಧಾನಿಯವರ ಬಿಪಿ ಜಾಸ್ತಿಯಾಗುತ್ತದೆ ಮತ್ತು ಅವರು ಬಿಪಿ ಮಾತ್ರೆ ತೆಗೆದುಕೊಳ್ಳುವ ಪರಿಸ್ತಿತಿ ಬರುತ್ತದೆ.

ಸ್ನೇಹಿತರೆ ಒಂದು ವಿಚಾರ ಬಹಳ ಗಂಭೀರತೆಯಿಂದ ಪರಿಗಣಿಸಬೇಕು. ಇವರ ಹತ್ರ ಹೇಳಲಿಕಕ್ಕೆ ಇರುವುದು ಒಂದೇ ವಿಚಾರ. ಅದು ಮಂದಿರ, ಮಸೀದಿ, ಶ್ಮಶಾನ ಮತ್ತು ಕಬರಸ್ಥಾನ ಮತ್ತು ಜಾತಿ ಧರ್ಮದ ವಿಷಯವನ್ನು ಅವರು ಯಾವಾಗಲೂ ಮಾತಾಡುತ್ತಾರೆ.
ಆದರೆ ಅವರು ಎಂದೂ ಶಿಕ್ಷಣ, ಆರೋಗ್ಯ, ಉದ್ಯೋಗದ ವಿಚಾರ ಅವರು ಮಾತಾಡುವುದಿಲ್ಲ. ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದರು. ಅಂದರೆ ನಾಲ್ಕು ವರ್ಷಕ್ಕೆ 8 ಕೋಟಿ ಉದ್ಯೋಗಗಳು ಸೃಷ್ಟಿಯಾಗಬೇಕಿತ್ತು. ಇದರಲ್ಲಿ ಅರ್ಧ ಜಾರಿಯಾಗಿದ್ದರು 4 ಕೋಟಿ ಉದ್ಯೋಗಗಳು ಸೃಷ್ಟಿಯಾಗಬೇಕಿತ್ತು. ಆದರೆ ಕೇವಲ 1%ಕೂಡ ಮೋದಿ ಉದ್ಯೋಗ ಸೃಷ್ಟಿ ಮಾಡಿಲ್ಲ. ದೆಹಲಿಯಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ 4 ಲಕ್ಷ ಉದ್ಯೋಗಗಳು ಖಾಲಿ ಇವೆ. ಕೇಂದ್ರೀಯ ಶಾಲೆಗಳು ಇತ್ಯಾದಿಗಳಿಂದ 10 ಲಕ್ಷ ಉದ್ಯೋಗ ಸೃಷ್ಟಿಸಬಹುದಿತ್ತು. ಮೋದಿ ಮನಸ್ಸು ಮಾಡಿದರೆ ಒಂದೇ ದಿನದಲ್ಲಿ 25 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬಹುದಿತ್ತು. ಆದರೆ ಮೋದಿ ಮಾಡಲಿಲ್ಲ. ಇದನ್ನು ನಾವು ಪ್ರಶ್ನೆ ಮಾಡಿದರೆ ಆಗ ಮೋದಿ ಮಂದಿರ ಮಸೀದಿಯ ವಿಚಾರವನ್ನು, ಶ್ಮಶಾನ ಮತ್ತು ಕಬರಸ್ಥಾನದ ವಿಷಯವನ್ನು ಮುಂದೆ ತಂದು ಉಳಿದವೆಲ್ಲವನ್ನು ಮರೆಸಿಬಿಡುತ್ತಾರೆ.
ನಿಮ್ಮಲ್ಲಿ ನನ್ನ ಮನವಿ ಏನೆಂದರೆ ಗಂಗಾವತಿಗೆ ನಮ್ಮ ಸಂಸ್ಕøತಿ ಮತ್ತು ಪರಂಪರೆ ಇದೆ. ನಾವು ಜನರ ನೈಜ ಸಮಸ್ಯೆಗಳನ್ನು ಪ್ರಶ್ನೆ ಮಾಡಬೇಕು. ರೈತರು, ಕಾರ್ಮಿಕರು ಮಹಿಳೆಯರು ಮತ್ತು ಯುವಜನರು ಉಳಿದಿದ್ದನ್ನು ನೋಡಿಕೊಳ್ಳುತ್ತಾರೆ. ಕಾರ್ಮಿಕರು ರೊಟ್ಟಿ ಕೇಳಿದರೆ ಆಗ ಮೋದಿ ಹಿಮಾಲಯ ಸೇರಿಕೊಳ್ಳಬೇಕಾಗುತ್ತದೆ.

ನನ್ನಮಾತು ಮುಗಿಸುವ ಮುಂಚೆ ಎರಡು ಮಾತುಗಳು. ಸಿಪಿಎಂ ಲಿಬರೇಷನ್‍ನ ಪೌರಕಾರ್ಮಿಕರು ಇಲ್ಲಿದ್ದಾರೆ. ಅವರು ದೊಡ್ಡ ಹೋರಾಟ ಕಟ್ಟುತ್ತಿದ್ದಾರೆ. ಅವರಿಗೆ ನನ್ನ ಕ್ರಾಂತಿಕಾರಿ ಜೈಭೀಮ್ ನಮನಗಳು. 2004ರಲ್ಲಿ ಫೇಕು ಮಹಾರಾಜರು ಒಂದು ಪುಸ್ತಕ ಬರೆದಿದ್ದರು. ಅದರಲ್ಲಿ “ಪೌರಕಾರ್ಮಿಕರು ಸುಮ್ಮನೆ ಆ ಕೆಲಸ ಮಾಡಲು ಬರುವುದಿಲ್ಲ. ಆ ಕೆಲಸದಲ್ಲಿ ಅವರಿಗೆ ಆಧ್ಯಾತ್ಮಿಕ ಆನಂದದ ಅನುಭವ ದೊರೆಯುತ್ತದೆ ಅದಕ್ಕೆ ಪೌರಕಾರ್ಮಿಕ ಕೆಲಸ ಮಾಡುತ್ತಾರೆ’ ಎಂದು. ನಿಜವಾಗಿಯೂ ಮೋದಿಯವರನ್ನು ಆಸ್ಪತ್ರೆಗೆ ಸೇರಿಸಬೇಕಿದೆ. ನಾನು ಮೋದಿಯವರಿಗೆ ಒಂದು ಸವಾಲು ಹಾಕುತ್ತೇನೆ. ಅದು ಏನೆಂದರೆ ಮೋದಿಗೆ ದೈರ್ಯ ಇದ್ದರೆ ಇಲ್ಲಿಗೆ ಬಂದು ಒಂದೇ ಒಂದು ಗಂಟೆ ಗಟಾರಕ್ಕೆ ಇಳಿದು ಸ್ವಚ್ಛ ಮಾಡಲಿ. ಆಗ ಅವರಿಗೆ ಗೊತ್ತಾಗುತ್ತದೆ ಆಧ್ಯಾತ್ಮಿಕ ಆನಂದ ಏನೆಂದು.

ಬಂಧುಗಳೇ ಮಾತು ಮುಗಿಸುವ ಮುಂಚೆ ಒಬ್ಬ ಸಹೋದರನಾಗಿ ಒಂದು ಮಾತು. ಬಹಳ ಕೆಟ್ಟ ಪರಿಸ್ತಿತಿ ಇದೆ. ನಮ್ಮ ಬದುಕನ್ನು ಮುಗಿಸುವ ಹುನ್ನಾರವನ್ನು ಕೋಮುವಾದಿಗಳು ಮಾಡಿದ್ದಾರೆ. ಎಷ್ಟೆ ಕಷ್ಟವಾದರು 90% ಮತದಾನ ಮಾಡಿ ಮೋದಿಯನ್ನು ಸೋಲಿಸಬೆಕು. ನಾವು ಒಂದು ಹೋರಾಟದ ದೀಪವನ್ನು ಹೊತ್ತಿಸಬೇಕು. ಆವರಿಸಿರುವ ಗಾಢಕತ್ತಲು ಹೋಗಲಾಡಿಸಲು ಮುಂದಾಗಬೇಕು.
ನಾವು ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ. ಜೋರಗಿ ಹೇಳಿ ನಾವೆಲ್ಲರೂ ಒಂದೇ. ಜೈಭೀಮ್ ಲಾಲ್ ಸಲಾಂ.

Please follow and like us:
error