ಮೋಟಾರ್ ಬೈಕ್ ಕಳ್ಳನ ಬಂಧನ

ಕೊಪ್ಪಳ :   ಹಲವಾರು ಬೈಕ್ ಗಳನ್ನು ಕಳ್ಳತನ ಮಾಡಿದ್ದ ಕಳ್ಳನನ್ನು ಬಂದಿಸುವಲ್ಲಿ ಕೊಪ್ಪಳ ಜಿಲ್ಲೆಯ ಪೋಲಿಸರು ಯಶಸ್ವಿಯಾಗಿದ್ದಾರೆ.

ಪ್ರಕರಣದ ವಿವರ ಈ ರೀತಿ ಇದೆ 

ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಸಿಂದೋಗಿ ಗ್ರಾಮದ ಹತ್ತಿರ ಅನುಮಾನಾಸ್ಪದವಾಗಿ ದ್ವಿಚಕ್ರ ವಾಹನವನ್ನು ಎಲ್ಲಿಂದಲೋ ತಂದು ಉಪಯೋಗಿಸುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದರಿಂದ ಅಳವಂಡಿ ಪೊಲೀಸರು ಹಿಡಿದು ವಿಚಾರಿಸಲಾಗಿ ಆತನ ಹೆಸರು ಶಿವಕುಮಾರ ತಂದೆ ನಿಂಗಪ್ಪ ಆನಂದಳ್ಳಿ ವಯಾ : 25 ವರ್ಷ ಉ : ಗೌಂಡಿ ಕೆಲಸ ಸಾ : ನೀರಲಗಿ ಅಂತಾ ತಿಳಿಸಿದನು , ಮತ್ತು ಆತನ ಹತ್ತಿರ ಇದ್ದ ಬೈಕ್ ಒಂದು ಹೋಂಡಾ ಯುನಿಕಾರ್ನ ಕಂಪನಿಯ ಮೋಟಾರು ಸೈಕಲ್ ನಂ . ಕೆ . ಎ – 37 ಡಬ್ಬ – 2255 ಇದ್ದು , ಅದರ ಬಗ್ಗೆ ದಾಖಲಾತಿಗಳನ್ನು ಕೇಳಲಾಗಿ ಸರಿಯಾದ ರೀತಿಯಲ್ಲಿ ಉತ್ತರ ನೀಡಿರುವುದಿಲ್ಲಾ , ನಂತರ ಠಾಣೆಗೆ ತಂದು ವಿಚಾರಿಸಲಾಗಿ ಕೊಪ್ಪಳದ ರೈಲ್ವೆ ಸ್ಟೇಷನ್ ಹತ್ತಿರ ನಿಲ್ಲಿಸಿದ್ದ ಬೈಕನ್ನು ಕಳ್ಳತನ ಮಾಡಿದ್ದನ್ನು ಒಪ್ಪಿದ್ದು , ಇನ್ನೂ ವಿಚಾರಿಸಲಾಗಿ ಕೊಪ್ಪಳದ ಬಸ್ ನಿಲ್ದಾಣದಲ್ಲಿ ಇನ್ನೂ 12 ಬೈಕಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿದ್ದು , ಸದರಿ ಆರೋಪಿತನಿಂದ ಒಟ್ಟು 13 ಬೈಕಗಳನ್ನು ವಶಪಡಿಸಿಕೊಂಡಿದ್ದಾರೆ.. 

 ಸಂಗೀತಾ ಜಿ . ಎಸ್ . ಪಿ . ,  ವೆಂಕಟಪ್ಪ ನಾಯಕ್ ಡಿ . ಎಸ್ . ಪಿ . ಕೊಪ್ಪಳರವರ ಮಾರ್ಗದರ್ಶನದಲ್ಲಿ  ರವಿ ಉಕ್ಕುಂದ ಸಿ . ಪಿ . ಐ . ಕೊ . ಗ್ರಾವೃತ್ತ ಹಾಗು  ರಾಮಣ್ಣ ಪಿ . ಎಸ್ . ಐ , ಅಳವಂಡಿ ರವರ ಮತ್ತು ಸಿಬ್ಬಂದಿಯವರಾದ ಶ್ರೀ ಬಸವರಾಜ ಸಿ . ಹೆಚ್ . ಸಿ – 112 . ಶ್ರೀ ಗಂಗಾಧರ ಸಿ . ಪಿ . ಸಿ – 57 , ಶ್ರೀ ಗವಿರ ಸಿ . ಪಿ . ಸಿ – 29 , ಶ್ರೀ ಮುದಕಪ್ಪ ಎ . ಪಿ . ಸಿ – 231 ) ರವರನ್ನೊಳಗೊಂಡ ತಂಡದವರು ಸದರಿ ಆರೋಪಿತನನ್ನು ಬಂಧಿಸಿ ಮೂರು ಬೈಕಗಳನ್ನು ವಶಪಡಿಸಿಕೊಂಡಿದ್ದಾರೆ

  ಆರೋಪಿತನನ್ನು ಪತ್ತೆ ಮಾಡಿ ಕಳ್ಳತನ ಮಾಡಿದ್ದ ಮಾಲನ್ನು ವಶಪಡಿಸಿಕೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ಮಾಡಿದ್ದಾರೆ.

Please follow and like us:
error