ಮೈತ್ರಿ ಸರ್ಕಾರ ಯಶಸ್ವಿಯಾಗಿ ಐದು ವರ್ಷ ಪೂರೈಸಲಿದೆ – ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಕೊಪ್ಪಳ : ಕಾಂಗ್ರೇಸ್ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಸರ್ಕಾರ ಯಶ್ವಸಿಯಾಗಿ ಐದು ವರ್ಷ ಪೂರೈಸಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ರು. ಸರ್ಕಾರ ರಚನೆಗೂ ಮುನ್ನವೇ ನಮ್ಮ ಪಕ್ಷ ಜೆಡಿಎಸ್ ಜೊತೆ ಕುಳಿತು ಒಳ ಒಪ್ಪಂದ ಮಾಡಿಕೊಂಡಿದೆ. ಯಾವುದೇ ಗೊಂದಲಗಳಿಲ್ಲದೆ ಸುದೀರ್ಘವಾಗಿ ಐದು ವರ್ಷ ಸರ್ಕಾರ ನಡೆಸುತ್ತೇವೆ. ಹೊರಗಡೆ ಹೇಳುವರ ಬೇರೆ ಬೇರೆ ಮಾತುಗಳು ಅಪ್ರಸ್ತುತ ಅಂತಾ ಹೇಳಿದ್ರು. ಅಲ್ದೇ, ಕೆಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ. ಅದಕ್ಕೂ ನಮಗೂ ಯಾವುದೆ ಸಂಬಂಧವಿಲ್ಲ ಎಂದ್ರು. ಇನ್ನೂ, ರೈತರ ಸಾಲಮನ್ನಾ ಮಾಡುವುದಾಗಿ ಈಗಾಗಲೇ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಅದಕ್ಕೆ ನಮ್ಮ ಕಾಂಗ್ರೆಸ್ ಪಕ್ಷದ ಸಹಮತವನ್ನ ನೀಡಿದೆ. ರೈತರ ಮತ್ತು ಕೃಷಿ ಅಭಿವೃದ್ಧಿಯ ಕಾಳಜಿ ಇರುವುದರಿಂದಲೇ ನಮ್ಮ ನಾಯಕ ಸಿದ್ದರಾಮಯ್ಯ ಅವರು ಸಾಲ‌ಮನ್ನಾ ಮಾಡಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ‌ ಮೈತ್ರಿ ಸರ್ಕಾರದ ಪ್ರಥಮ ‌ಆದ್ಯತೆ ಎಂದ್ರು.

ಇದೇ ವೇಳೆ ಕೊಪ್ಪಳದ ಗಂಗಾವತಿಯ ಚುನಾವಣೆಯಲ್ಲಿ‌‌‌ ನಡೆದ ಖೋಟಾ ನೋಟು ಪ್ರಕರಣ ಬಗ್ಗೆ ಮಾತಾಡಿದ ಪರಮೇಶ್ವರ್ ಒಂದು ವೇಳೆ ಚುನಾವಣೆಯಲ್ಲಿ ಖೋಟಾ ನೋಟು ಚಲಾವಣೆ ಆಗಿದ್ದರೆ, ಚುನಾವಣೆ ಆಯೋಗಕ್ಕೆ‌ ದೂರು ಸಲ್ಲಿಸಬಹುದು. ಅವ್ರು ಯಾರೇ‌‌ ಆಗಿರಲಿ‌ ಚುನಾವಣೆ ಆಯೋಗಕ್ಕೆ ದೂರು‌ ನೀಡಿದರೆ ತನಿಖೆ ನಡೆಸಲಾಗುತ್ತೆ ಎಂದ್ರು.

Please follow and like us:

Related posts