ಮೈಕ್ರೋ ಪೈನಾನ್ಸ್‌ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮನವಿ

Koppal :  ಜಗತ್ತಿಗೆ ವ್ಯಾಪಿಸಿರುವ ಮಹಾಮಾರಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದಕ್ಕಾಗಿ ಭಾರತದಲ್ಲೂ ಕೂಡ ಸುಮಾರು ತಿಂಗಳುಗಳಿಂದ ಲಾಕ್‌ಡೌನ್ ಮಾಡಲಾಗಿದ್ದು ಇದರಿಂದಾಗಿ ಯಾರು ಕೆಲಸ-ಕಾರ್ಯಗಳಿಗೆ ಹೋಗದೆ ಮನೆಯಲ್ಲೇ ಇರುವುದರಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಗಳು ಆಗುತ್ತಿದ್ದು ಈ ಹಿನ್ನಲೇಯಲ್ಲಿ ಕೇಂದ್ರ ಸರ್ಕಾರ ಆಗಸ್ಟ್ ೨೦೨೦ರವರಗೆ ಸಾಲ ವಸೂಲಾತಿಯನ್ನು ಮುಂದುಡಬೇಕೆಂದು ತಿಳಿಸಿದ್ದರೂ, ಸ್ವ-ಸಹಾಯ ಗುಂಪುಗಳು ಹಾಗೂ ಮೈಕ್ರೋಪೈನಾನ್ಸ್ ಏಜೇನ್ಸಿಗಳು ಸಾಲ ವಸೂಲಾತಿಗಾಗಿ ಜನಸಾಮಾನ್ಯರಿಗೆ ಕಿರುಕುಳವನ್ನು ನೀಡುತ್ತಿದ್ದಾರೆ.

ಆದ್ದರಿಂದ ಸ್ವ-ಸಹಾಯ ಗುಂಪುಗಳು ಹಾಗೂ ಮೈಕ್ರೋಪೈನಾನ್ಸ್ ಏಜೇನ್ಸಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ. ಪಾಷಾ ಕಾಟನ್‌ರವರು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಮನವಿ ಮಾಡುವ ಮೂಲಕ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ನಗರ ಸಭಾ ಸದಸ್ಯರಾದ ಮಾನ್ವಿ ಪಾಷಾ, ಸಲೀಂ ಅಳವಂಡಿ, ವಸೀಮ್ ಮನಿಯಾರ, ಪರಶುರಾಮ ಕೆರಹಳ್ಳಿ, ಯೂಸುಫ್ ಮಾಳೆಕೊಪ್ಪ, ಆಜಮ್ ಕರ್ಕಿಹಳ್ಳಿ, ರಹೀಮ್ ಶೇಖ್ ಉಪಸ್ಥಿತರಿದ್ದರು.

Please follow and like us:
error