ಮೇ.31 ರವರೆಗೆ ಸಾಮೂಹಿಕ ಪ್ರಾರ್ಥನೆ ನಿಷೇಧ : ರಂಜಾನ್ ನಮಾಜ್ ಮನೆಯಲ್ಲಿಯೇ ಮಾಡಿ


ಕೊಪ್ಪಳ ಮೇ. : ಕರೋನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದರ್ಗಾ, ಮಸಜೀದ್ ಮತ್ತು ಈದ್ಗಾಗಳಲ್ಲಿ ನಡೆಯಬೇಕಿದ್ದ ರಂಜಾನ್ ಹಬ್ಬದ ಪ್ರಾರ್ಥನೆ (ಸಲಹಾತ್), ಈದ್ ಉಲ್ ಫಿತರ್ ಹಾಗೂ ಸಾಮೂಹಿಕ ಪ್ರಾರ್ಥನೆಗಳನ್ನು ಮೇ.31 ರವರೆಗೆ ನಿಷೇಧಿಸಲಾಗಿದ್ದು, ಈದ್ ಉಲ್ ಫಿತರ್ (ರಂಜಾನ್) ಹಬ್ಬದ ನಮಾಜ್‌ನ್ನು ಮನೆಯಲ್ಲಿ ಮಾಡುವಂತೆ ಜಿಲ್ಲಾ ವಕ್ಫ್ ಅಧಿಕಾರಿ ತಿಳಿಸಿದ್ದಾರೆ.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ, ಬೆಂಗಳೂರು ಅವರ ಆದೇಶದಂತೆ ರಾಜ್ಯದಾದ್ಯಂತ ಎಲ್ಲಾ ಮಸೀದಿ, ದರ್ಗಾ, ಈದ್ಗಾಗಳ ವ್ಯವಸ್ಥಾಪನೆಗಳ ಸಮಿತಿಯವರು ಧಾರ್ಮಿಕ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆ ಇತರೆ ಧಾರ್ಮಿಕ ಚಟುವಟಿಕೆಗಳನ್ನು ಮಾಡುವುದನ್ನು ಮೇ.31 ರವರೆಗೆ ಕಡ್ಡಾಯವಾಗಿ ನಿಷೇಧಿಸಿಲಾಗಿದ್ದು, ರಂಜಾನ್ ಹಬ್ಬದಂದು ಸಾಮೂಹಿಕ ಪ್ರಾರ್ಥನೆಯನ್ನು ಸಹ ಈ ಸ್ಥಳಗಳಲ್ಲಿ ನಿಷೇಧಿಸಲಾಗಿದೆ. ಹಬ್ಬದ ನಮಾಜ್‌ನ್ನು ಮನೆಯಲ್ಲಿಯೇ ನೆರವೇರಿಸಿಕೊಳ್ಳಬೇಕು.  ಸಾಮಾಜಿಕ  ಅಂತರವನ್ನು ಕಾಪಾಡಿಕೊಂಡು ದೈಹಿಕ ಸಂಪರ್ಕವಿಲ್ಲದೆ ರಂಜಾನ್ ಹಬ್ಬದ ಶುಭ ಕೋರುವ ಮೂಲಕ ಸರಳವಾಗಿ ಆಚರಿಸಬೇಕು. ಕಂಟೈನ್ಮೆAಟ್ ಏರಿಯಾ/ವಿದೇಶ/ಕೆಂಪು ವಲಯದಿಂದ ಬಂದAತಹ ಅಥವಾ ಪ್ರಯಾಣ ಬೆಳೆಸಿದಂತಹ ವ್ಯಕ್ತಿಯೊಂದಿಗೆ ಅಂತರವನ್ನು ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Please follow and like us:
error