ಮೇಜರ್ ಧ್ಯಾನ್‌ಚಂದ್ ಹುಟ್ಟು ಹಬ್ಬದ ಅಂಗವಾಗಿ ರಾಷ್ಟೀಯ ಕೀಡಾ ದಿನಾಚರಣೆ

ದಿ  ೨೯  ರಂದು ಸರಕಾರಿ ಮಹಿಳಾ ಕಾಲೇಜು ಕೊಪ್ಪಳ ಇಲ್ಲಿ ಮೇಜರ್ ಧ್ಯಾನ್‌ಚಂದ್ ಹುಟ್ಟು ಹಬ್ಬದ ಅಂಗವಾಗಿ ಆಚರಿಸುವ ರಾಷ್ಟೀಯ ಕೀಡಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾಲೇಜಿನ ಯೋಗ ಕ್ರೀಡಾಪಟುಗಳಾದ ಕು.ಪರವಿನ್ ಹಾಗೂ ಕು.ಭಾಗ್ಯಶ್ರೀ ಇವರು ಯೋಗಆಸನಗಳ ಪ್ರದರ್ಶನ ಮಾಡಿದರು. ಅದೇರೀತಿ ಕಳೆದ ಸಾಲಿನಲ್ಲಿ ಕ್ರೀಡೆಯಲ್ಲಿ ಸಾದನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.  
ಸದರಿ ಕಾರ್ಯಕ್ರಮದ ಅಧ್ಯಷತೆಯನ್ನು ಹಿರಿಯ ಸಹಾಯಕ ಪ್ರಾದ್ಯಾಪಕರಾದ ಡಾ.ಮಂಜಪ್ಪ ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಶ್ರೀ.ಪ್ರದೀಪ್ ಕುಮಾರ್ ಯು ದೈಹಿಕ ಶಿಕ್ಷಣ ಬೋಧಕರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ದ್ಯಾನ್ ಚಂದ್ ನಮ್ಮ ದೇಶಕಂಡ ಅತ್ಯೋತ್ತಮ ಕ್ರೀಡಾಪಟು ಅವರ ಜನ್ಮ ದಿನವನ್ನು ರಾಷ್ಟೀಯ ಕೀಡಾ ದಿನಾಚರಣೆಯಾಗಿ ಆಚರಿಸುವುದು ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮವನ್ನು ಡಾ.ಹುಲಿಗೆಮ್ಮ ಬಿ ಇವರು ಸ್ವಾಗತಿಸಿದರು ಹಾಗೂ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ನಾಗರತ್ನ ತಮ್ಮಿನಾಳ, ಶ್ರೀ ಮಹಂತೇಶ ಮುಧೋಳ್, ಡಾ.ಅಶೋಕ್ ಕುಮಾರ್, ಡಾ ನರಸಿಂಹ, ಶ್ತೀಮತಿ ಸುಮಿತ್ರಾ ಇವರು ಹಾಗೂ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಯವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.