ಮೃತ ಹಮಾಲ ಕುಟುಂಬಕ್ಕೆ ಶಾಸಕರಿಂದ ಸಹಾಯಧನ ಚೆಕ್ ಬಿತರಣೆ

ಕೊಪ್ಪಳ ೦೧, ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಮಲರಾಗಿ ಕಾರ್ಯನಿರ್ವಹಿಸುತ್ತಿದ್ದ ಚುಕ್ಕನಕಲ್ ಗ್ರಾಮದ ಹನುಮಂತಪ್ಪ ಇವರ ಅಕಾಲಿಕ ಮರಣ ಹೊಂದಿದರಿಂದ ಅವರ ಕುಟುಂಬಕ್ಕೆ ರೂ.೧೦ ಸಾವಿರ ಸಹಾಯಧನದ ಚೆಕ್ಕನ್ನು ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ, ಉಪಾಧ್ಯಕ್ಷ ಚೌಡಪ್ಪ ಜಂತ್ಲಿ, ಸದಸ್ಯರುಗಳಾದ ಹನುಮರಡ್ಡಿ ಹಂಗನಕಟ್ಟಿ, ನಾಗರಾಜ ಚಳ್ಳೊಳ್ಳಿ, ಜಡಿಯಪ್ಪ ಬಂಗಾಳಿ, ಹಾಗೂ ವಕ್ತಾರ ಅಕ್ಬರಪಾಷಾ ಪಲ್ಟನ್ ಉಪಸ್ಥಿತರಿದ್ದರು.