ಮುಸ್ಲಿಂ ಸಮುದಾಯದಿಂದ ಶಾಸಕ ಕೆ. ರಾಘವೇಂದ್ರ ಹಿಟ್ನಾಳರಿಗೆ ಸನ್ಮಾನ

ಕೊಪ್ಪಳ : ನೂತನವಾಗಿ ಆಯ್ಕೆಯಾಗಿರುವ ಶಾಸಕ ಕೆ.ರಾಘವೇಂದ್ರ ಹಿಟ್ನಾಳರಿಗೆ ಭಾಗ್ಯನಗರದ ಮುಸ್ಲಿಂ ಸಮಾಜದವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಶಾಸಕರ ನಿವಾಸಕ್ಕೆ ತೆರಳಿ ಅಭಿನಂದನೆಗಳನ್ನು ಸಲ್ಲಿಸಿದ ಭಾಗ್ಯನಗರ ಮುಸ್ಲಿಂ ಪಂಚ್ ಕಮೀಟಿಯ ಸದಸ್ಯರು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮುಂದಿನ ದಿನಗಳಲ್ಲಿಯೂ ಇದೇ ರೀತಿ ಹೆಚ್ಚಿನ ಅಭಿವೃದ್ದಿ ಕಾರ್ಯ ಮಾಡುವಂತಾಗಲಿ. ಆ ಮೂಲಕ ಸಮಗ್ರ ಅಭಿವೃದ್ದಿ ಸಾಧಿಸಲಿ ಎಂದು ಶುಭಕೋರಿದರು. ಇದೇ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದ ಪಂಚ್ ಕಮಿಟಿ ಅಧ್ಯಕ್ಷ ಇಬ್ರಾಹಿಂಸಾಬ ಬಿಸರಳ್ಳಿ ಮುಸ್ಲಿಂ ಸಮುದಾಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿಂದೆ ಇದೆ. ಈ ನಿಟ್ಟಿನಲ್ಲಿ ಉರ್ದು ಶಾಲೆ, ಶಾದಿ ಮಹಲ್ ಹಾಗೂ ಇನ್ನಿತರ ಅಭಿವೃದ್ದಿ ಕಾರ್ಯಗಳನ್ನು ಮಾಡುವಂತೆ ಆಗ್ರಹಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಸದಸ್ಯ ಹೊನ್ನೂರಸಾಬ ಬೈರಾಪೂರ, ಭಾಗ್ಯನಗರ ಮುಸ್ಲಿಂ ಸಮಾಜದ ಹಾಜಿ ಕುತ್ಬುದ್ದೀನ್ ಸಾಬ್, ಕಬೀರಸಾಬ ಬೈರಾಪೂರ, ಉಪಾಧ್ಯಕ್ಷರಾದ ಮೌಲಾಸಾಬ ಹಣಗಿ, ಪೀರಸಾಬ ಬೈರಾಪೂರ , ರಶೀದಸಾಬ ಅಧೋನಿ, ಮೆಹಬೂಬಪಾಷಾ ಬಳಿಗಾರ, ಮೆಹಬೂಬ್ ಹಣಗಿ ಉಪಸ್ಥಿತರಿದ್ದರು.